ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್​ ಸಿಂಗ್​ ಸಲ್ಲಿಸಿದ್ದ ಅರ್ಜಿ ವಜಾ….

ಕ್ಷಮಾಧಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನಡೆ ಪ್ರಶ್ನಿಸಿ ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್​ ಸಿಂಗ್​ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ಬುಧವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಆರ್​. ಭಾನುಮತಿ, ಎ.ಎಸ್​.ಬೋಪಣ್ಣ ಮತ್ತು ಅಶೋಕ್​ ಭೂಷಣ್​ ಒಳಗೊಂಡ ತ್ರಿಸದಸ್ಯ ಪೀಠವು ಬುಧವಾರ ಬೆಳಗ್ಗೆ 10.40ರ ಸುಮಾರಿಗೆ ಅಪರಾಧಿ ಮುಕೇಶ್​ ಸಿಂಗ್ ಅರ್ಜಿ ವಜಾಗೊಳಿಸಿತು.​

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಅಪರಾಧಿ ಮುಕೇಶ್​​ ಸಿಂಗ್​ ಕ್ಷಮಾಧಾನ ಅರ್ಜಿ ಸಲ್ಲಿಸಿದ್ದನು. ಆದರೆ, ರಾಷ್ಟ್ರಪತಿ ಕ್ಷಮಾಧಾನ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಮುಕೇಶ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ. ಮುಕೇಶ್​ ಪರ ವಕೀಲ ವಾದ ಮಂಡಿಸಿ, ಸರ್ಕಾರ ರಾಷ್ಟ್ರಪತಿಗಳ ಮುಂದೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದಿದ್ದರು.

ಇಷ್ಟೇ ಅಲ್ಲದೆ ಜೈಲಿನಲ್ಲಿರುವಾಗ ಸಾಕಷ್ಟು ಸಂಕಟ ಮತ್ತು ಅವಮಾನವನ್ನು ಅನುಭವಿಸಿದ್ದಾನೆ. ಮುಕೇಶ್​ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಅಲ್ಲದೆ, ಆತನನ್ನು ಒಂಟಿಯಾಗಿ ಜೈಲಿನ ಕೋಣೆಯಲ್ಲಿರಿಸಿ ಹಿಂಸಿಸಲಾಗಿದೆ ಎಂದು ಮಕೇಶ್​ ಪರ ವಕೀಲರು ವಾದ ಮಂಡಿಸಿದ್ದರು.

ಆದರೆ, ಜೈಲಿನಲ್ಲಿನ ಬಳಲಿಕೆ ಆಧಾರವನ್ನು ಇಟ್ಟುಕೊಂಡು ರಾಷ್ಟ್ರಪತಿಗಳು ತಿರಸ್ಕರಿಸಿದ ಕ್ಷಮಾಧಾನ ಅರ್ಜಿಯನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights