FACT CHECK | ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದು ಹಿಂದೂ ವ್ಯಕ್ತಿ ಅಲ್ಲ

ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು  ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಕ್ಯಾಬಿನ್ ಸಿಬ್ಬಂದಿ ಮಧ್ಯಪ್ರವೇಶಿಸಿ ಮುಸ್ಲಿಂ ಪ್ರಯಾಣಿಕನಿಗೆ ಸಹಾಯ ಮಾಡಿ, ಮತ್ತೊಬ್ಬ ಪ್ರಯಾಣಿಕ ಅವನ ಮೇಲೆ ಕೈ ಎತ್ತಬಾರದಿತ್ತು ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಏತನ್ಮಧ್ಯೆ, ಸಹ ಪ್ರಯಾಣಿಕನೊಬ್ಬ ಆರೋಪಿಯನ್ನು ಪ್ರಶ್ನಿಸುತ್ತಾ, ಎಲ್ಲರಿಗೂ ಸಮಸ್ಯೆ ಇದೆ, ಹಾಗಾದರೆ ಅವನು ಆ ವ್ಯಕ್ತಿಗೆ ಏಕೆ ಕಪಾಳಮೋಕ್ಷ ಮಾಡಿದ? ಇದಕ್ಕೆ, ತನಗೆ ಸಮಸ್ಯೆ ಇದೆ ಎಂದು ಉತ್ತರಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದಂತೆ, ಕೋಮು ಹಿನ್ನಲೆಯಲ್ಲಿ, ಮುಸ್ಲಿಂ ಪ್ರಯಾಣಿಕನನ್ನು ಕಪಾಳಮೋಕ್ಷ ಮಾಡಿದ ವ್ಯಕ್ತಿ ಹಿಂದೂವಾಗಿದ್ದು, ಧರ್ಮದ ಕಾರಣಕ್ಕೆ ಅವನ ಮೇಲೆ ಕೈ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋವನ್ನು ಆರಂಭದಲ್ಲಿ ಆದಿಲ್ ಸಿದ್ದಿಕಿ ಎಂಬ ಎಕ್ಸ್‌ ಬಳಕೆದಾರರು ಟ್ವೀಟ್ ಮಾಡಿದ್ದು, ಸಮಾಜ ಸಂಪೂರ್ಣವಾಗಿ ಕೊಳೆತಿದೆ ಎಂದು ಬರೆದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ವೈರಲ್ ವಿಡಿಯೋದಲ್ಲಿ ತೋರಿಸುತ್ತಿರವಂತೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿತ್ತಿದ್ದ ಮುಸ್ಲಿಂ ಪ್ರಯಾಣಿಕನ ಮೇಲೆ ಮುಸ್ಲಿಂ ಎಂಬ ಕಾರಣಕ್ಕೆ ಹಲ್ಲೆ ನಡೆಸಿದ್ದಾನೆ ಎಂಬುದನ್ನು ಪರಿಶೀಲಿಸಲು, ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಇಂಡಿಯಾ ಟುಡೇ ಮಾಡಿದ ವರದಿ ಲಭ್ಯವಾಗಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಈ ಘಟನೆ ಮುಂಬೈನಿಂದ ಕೋಲ್ಕತ್ತಾಗೆ ಇಂಡಿಗೋ ವಿಮಾನದಲ್ಲಿ ನಡೆದಿದೆ. ಕಪಾಳಮೋಕ್ಷಕ್ಕೊಳಗಾದ ಮುಸ್ಲಿಂ ಪ್ರಯಾಣಿಕ ಅಸ್ವಸ್ಥನಾಗಿದ್ದು, ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದಾನೆ ಎಂದು ವರದಿಯಾಗಿದೆ, ಮತ್ತು ಏರ್ ಹೋಸ್ಟೆಸ್ ಅವನಿಗೆ ಸಹಾಯ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಮಯದಲ್ಲಿ, ನಿರಾಶೆಗೊಂಡ ಮತ್ತೊಬ್ಬ ಪ್ರಯಾಣಿಕನು ಅವನಿಗೆ ಅನಾನುಕೂಲತೆಯನ್ನುಂಟುಮಾಡುತ್ತಿದ್ದಾನೆ ಎಂದು ಹೇಳಿ ಕಪಾಳಮೋಕ್ಷ ಮಾಡಿದನು.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಹಲ್ಲೆಗೊಳಗಾದ ವ್ಯಕ್ತಿ ಮುಂಬೈನಲ್ಲಿ ವಾಸಿಸುವ ಮತ್ತು ಜಿಮ್ ತರಬೇತುದಾರನಾಗಿ ಕೆಲಸ ಮಾಡುವ ಹೊಸೈನ್ ಅಹ್ಮದ್ ಮಜುಂದಾರ್ ಎಂದು ಗುರುತಿಸಲಾಗಿದೆ. ಈ ಘಟನೆ ವಿಮಾನದೊಳಗೆ ನಡೆದಾಗ ಅವರು ಮುಂಬೈನಿಂದ ತಮ್ಮ ಊರು ಕೋಲ್ಕತ್ತಾದ ಕಟಿಗೋರಾಗೆ ಹೋಗುವ ಮಾರ್ಗದಲ್ಲಿ ಇದ್ದರು. ಈ ಅಪಘಾತದ ನಂತರ, ಅವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ ಆದರೆ ಈಗ ನವೀಕರಣದ ಪ್ರಕಾರ, ಅವರು ಮನೆಗೆ ತಲುಪಿದ್ದಾರೆ ಎಂದು ಹೇಳಲಾಗಿದೆ.

ಇದಲ್ಲದೆ, ಇಂಡಿಗೋದ X ಹ್ಯಾಂಡಲ್‌ನಲ್ಲಿ ಘಟನೆಯನ್ನು ಉಲ್ಲೇಖಿಸಿ ಖಂಡಿಸಿದ ಪೋಸ್ಟ್ ಲಭ್ಯವಾಗಿದೆ. ಇಂಡಿಗೋ ಇಂತಹ ಅಶಿಸ್ತಿನ ಕ್ರಮಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ ಮತ್ತು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳಿಗೆ ಅನುಸಾರವಾಗಿ, ಆರೋಪಿ ಪ್ರಯಾಣಿಕನನ್ನು ಕೂಡಲೇ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹಂಚಿಕೊಂಡಿದೆ.

ಇದಲ್ಲದೆ, ದಿ ಹಿಂದೂ ವರದಿಗಾರ್ತಿ ಜಾಗೃತಿ ಚಂದ್ರ ಅವರ ಟ್ವೀಟ್ ಲಭ್ಯವಾಗಿದ್ದು, ಅದರಲ್ಲಿ ಆರೋಪಿಯನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ವರದಿ ಮಾಡಿದ್ದಾರೆ ಮತ್ತು ಅವರ ವಿಮಾನಯಾನ ಮೂಲಗಳನ್ನು ಉಲ್ಲೇಖಿಸಿ, ಬಲಿಪಶು ಮತ್ತು ಆರೋಪಿಗಳು ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು ಎಂದು ಬಹಿರಂಗಪಡಿಸಿದ್ದಾರೆ.

@OnlyFactIndia ನ ಫ್ಯಾಕ್ಟ್‌ಚೆಕ್ ವರದಿಯಲ್ಲಿ ಸಂತ್ರಸ್ಥನನ್ನು ಹುಸೇನ್ ಅಹ್ಮದ್ ಮಜುಂದಾರ್ ಮತ್ತು ಹಲ್ಲೆ ಮಾಡಿದ ವ್ಯಕ್ತಿಯನ್ನು ಹಫೀಜುಲ್ ರೆಹಮಾನ್ ಎಂದು ಹೇಳಲಾಗಿದ್ದು ಇಬ್ಬರೂ ಒಂದೇ ಧಾರ್ಮಿಕ ಸಮುದಾಯದವರು ಎಂದು ಸ್ಪಷ್ಟಪಡಿಸಿವೆ, ಈ ಘಟನೆಗೆ ಯಾವುದೇ ಕೋಮು ದ್ವೇಷವಾಗಲಿ, ಕೋಮು ಆಯಾಮವಾಗಲಿ ಇಲ್ಲ ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಕಪಾಳಕ್ಕೆ ಹಿಂದೂ ವ್ಯಕ್ತಿ ಹೊಡಿದಿದ್ದಾನೆ ಎಂದು ಕೋಮು ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು. ಇಬ್ಬರೂ ಒಂದೇ ಕೋಮುಗೆ ಸೇರಿದವರಾಗಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗುಜರಿ ವಸ್ತುಗಳನ್ನು ಬಳಸಿ ವಿಮಾನ ನಿರ್ಮಾಣ ಮಾಡಿದ್ದಾನೆ ಎಂದು ಬಾಂಗ್ಲಾದೇಶದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights