FACT CHECK | ತೆಲುಗು ನಟ ಅಲ್ಲು ಅರ್ಜುನ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ ಎಂಬುದು ನಿಜವೇ?

ತೆಲುಗು ಚಿತ್ರರಂಗದ ಸ್ಟಾರ್ ಹೀರೋ ಅಲ್ಲು ಅರ್ಜುನ್ ‘ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಟ ಅಮೀರ್ ಖಾನ್ ಮತ್ತು ರಣವೀರ್ ಸಿಂಗ್ ಕುರಿತಾಗಿಯೂ  ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ರಾಜಕೀಯ ಪಕ್ಷವೊಂದರ ವಿರುದ್ದವಾಗಿ ಮಾತನಾಡಿದ್ದಾರೆ ಎಂದು ಪ್ರತಿಪಾಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು.

ಈಗ ಅಲ್ಲು ಅರ್ಜುನ್ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾ, ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 22 ಆಗಸ್ಟ್‌ 2022ರಂದು ನ್ಯೂಯಾರ್ಕ್‌ನ ಇಂಡಿಯಾ ಡೇ ಪರೇಡ್‌ನಲ್ಲಿ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ಭಾಗಿ ಎಂಬ ಶೀರ್ಷಿಕೆಯೊಂದಿಗೆ ಹಲವು ಮಾಧ್ಯಮಗಳ ವರದಿಗಳು ಲಭ್ಯವಾಗಿದೆ.

2022ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಅತಿ ದೊಡ್ಡ ವಾರ್ಷಿಕ ಭಾರತೀಯ ದಿನದ ಪರೇಡ್‌ನಲ್ಲಿ ಅಲ್ಲು ಅರ್ಜುನ್‌ ಭಾರತವನ್ನು ಪ್ರತಿನಿಧಿಸಿದ್ದಾರೆ ಎಂದು ವರಿಯಾಗಿದೆ. ಇದೇ ವಿಡಿಯೋವನ್ನು ಅಲ್ಲು ಅರ್ಜನ್ ತನ್ನ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಆಗಸ್ಟ್ 22, 2022 ರಂದು NDTV ಮಾಡಿರುವ ವರದಿಯಲ್ಲಿ ಹಲವು ಫೋಟೊಗಳು ಲಭ್ಯವಾಗಿವೆ.  “ಸ್ವತಂತ್ರ ಭಾರತದ 75 ವರ್ಷಗಳ ನೆನಪಿಗಾಗಿ ಭಾರತೀಯ ಸಂಘಗಳ ಒಕ್ಕೂಟದಿಂದ ವಾರ್ಷಿಕ ಭಾರತ ದಿನದ ಪರೇಡ್ ಅನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ನಟ ಅಲ್ಲು ಅರ್ಜುನ್ ಮೇಯರ್ ಅವರನ್ನು ಭೇಟಿಯಾದರು ಎಂದು ವರದಿ ಮಾಡಿದೆ.

ನ್ಯೂಯಾರ್ಕ್‌ ಮೇಯರ್ ಎರಿಕ್ ಆಡಮ್ಸ್‌ ಅವರಿಗೆ ಅಲ್ಲು ಅರ್ಜುನ್ ಅಭಿನಂದನೆ ತಿಳಿಸಿದ್ದಾರೆ. ಎರಿಕ್‌ರವರ ಜತೆ ನಟ ಅಲ್ಲು ಅರ್ಜುನ್‌, ಪುಷ್ಪ ಸಿಗ್ನೇಚರ್ ಸ್ಟೈಲ್‌ನೊಂದಿಗೆ ಪೋಸ್ ಕೊಟ್ಟು ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. “ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ಗ್ರ್ಯಾಂಡ್ ಮಾರ್ಷಲ್ ಆಗಿರುವುದು ಒಂದು ಗೌರವ” ಎಂದು ಅಲ್ಲು ಅರ್ಜುನ್‌ ತಮ್ಮ ಇನ್ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ  ಬರೆದುಕೊಂಡಿದ್ದಾರೆ.

ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ ವೆಬ್‌ಸೈಟ್ ಪ್ರಕಾರ, ಇಂಡೋ-ಅಮೇರಿಕನ್ ಸಂಸ್ಕೃತಿಯನ್ನು ಆಚರಿಸಲು ಮತ್ತು ಭಾರತೀಯ  ಸದಸ್ಯರನ್ನು ಒಟ್ಟುಗೂಡಿಸಲು ಪ್ರತಿ ವರ್ಷ ಆಗಸ್ಟ್‌ನಲ್ಲಿ ಇಂಡಿಯಾ ಡೇ ಪರೇಡ್ ಅನ್ನು ಆಚರಿಸಲಾಗುತ್ತದೆ.  “ಈ ಇಂಡಿಯಾ ಡೇ ಪರೇಡ್ ಈವೆಂಟ್ ಇಂಡೋ-ಅಮೆರಿಕಾದ ಒಗ್ಗಟ್ಟಿನ ಅನನ್ಯ ಸಮ್ಮಿಲನವಾಗಿದೆ. USA ನಲ್ಲಿ ನೆಲೆಸಿರುವ ಭಾರತೀಯ ವಲಸಿಗರು ವಿವಿಧ ದೇಶಗಳ ಪ್ರತಿನಿಧಿಗಳೊಂದಿಗೆ ಭಾರತೀಯ ಧ್ವಜವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಮತ್ತು ಭಾರತೀಯ ಸಂಸ್ಕೃತಿಗೆ ಸಾಕ್ಷಿಯಾಗುತ್ತಾರೆ. , ಅದರ ಗುರುತು ಮತ್ತು ಸಾಂಸ್ಕೃತಿಕ ತಿಳುವಳಿಕೆಗಳೊಂದಿಗೆ ಸಾಮಾಜಿಕ ಬಂಧವನ್ನು ವಿನಿಮಯ ಮಾಡಿಕೊಳ್ಳುವುದು.”  ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2022ರಲ್ಲಿ ತೆಲುಗು ನಟ ಅಲ್ಲು ಅರ್ಜುನ್ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗಿಯಾಗಿರುವ ವಿಡಿಯೋವನ್ನು, ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಅಲ್ಲು ಅರ್ಜುನ್ ಅವರ ಮಾವ ಕಂಚಾರ್ಲಾ ಚಂದ್ರಶೇಖರ್ ರೆಡ್ಡಿ ಅವರು ಹಿಂದೆ ಬಿಆರ್‌ಎಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು, ಆದರೆ ಪಕ್ಷದೊಂದಿಗೆ ಭಿನ್ನಾಭಿಪ್ರಾಯದಿಂದ ಬಿಆರ್‌ಎಸ್ ತೊರೆದು ಕಾಂಗ್ರೆಸ್  ಪಕ್ಷ ಸೇರಿದ್ದರು. ಆದರೆ ಅಲ್ಲು ಅರ್ಜುನ್ ರಾಜಕೀಯ ಪಕ್ಷಗಳೊಂದಿಗೆ ಅಂತರ ಕಾಯ್ದುಕೊಂಡಿದ್ದು, ಯಾವುದೇ ಪಕ್ಷದೊಂದಿಗೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | BJP ನಾಯಕನಿಗೆ ಚಪ್ಪಲಿ ಹಾರ ಹಾಕಿದ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights