Fact check : ಕುದುರೆ ಕೂದಲು ಹುಳುವಿನ ವೀಡಿಯೋವನ್ನು, ಶಿವ ನಾಗ ಮರದ ಬೇರು ಎಂದು ತಪ್ಪಾಗಿ ಹಂಚಿಕೊಂಡ ವೀಡಿಯೋ ವೈರಲ್

ಶಿವನಾಗಂ ಎಂಬ ಮರದ ಬೇರುಗಳನ್ನು ಕಡಿದ ನಂತರ 15 ದಿನಗಳವರೆಗೆ ಉಳಿಯುತ್ತದೆ ಎಂಬ ವಿಡಿಯೋ ಸಹಿತ ಪೋಸ್ಟ್  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾವಿನಂತೆ ನುಲಿಯುತ್ತಿವೆ ಎಂದು ಪೋಸ್ಟ್  ಮೂಲಕ ಹೇಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ

 

ಬೇರು ಕತ್ತರಿಸಿದರೂ 15 ದಿನಗಳವರೆಗೆ ಬದುಕಬಲ್ಲ ಶಿವನಾಗಮರದ ವಿಡಿಯೋ ಎಂದು ಹಂಚಿಕೊಂಡಿರುವ ವೀಡಿಯೋ , ಇದು ವೈರಲ್ ಕೂಡ ಆಗಿದ್ದು ಇದರ ಸತ್ಯಾಸತ್ಯತೆಗಳನ್ನು ಅರಿಯುವ ಸಲುವಾಗಿ  ರಿವರ್ಸ್ ಸರ್ಚ್ ಮಾಡಿದಾಗ ತಿಳಿದು ಬಂದದ್ದು ಬೇರೆಯದೇ ವಿಷಯ.. ಮುಂದೆ ಓದಿ..

ವೈರಲ್ ಆದ ವೀಡಿಯೋವನ್ನು ರಿವರ್ಸ್ ಸರ್ಚ್ ಮಾಡಿದಾಗ ನಮಗೆ ತಿಳಿದು ಬಂದ ವಿಷಯವೇ ಬೇರೆಯಾಗಿತ್ತು. ಶಿವನಾಗ ಮರ  ಮತ್ತು ಅದರ ಬೇರುಗಳನ್ನು ಹುಡುಕಿದಾಗ ಅಂತಹ ಮರ ಇರುವುದರ ಕುರಿತು ಯಾವುದೇ ಪುರಾವೆಗಳು ಎಲ್ಲಿಯೂ ಕಂಡುಬಂದಿಲ್ಲ. ಕುದುರೆ ಕೂದಲಿನ ವರ್ಮ್ ಎಂಬ ಪರಾವಲಂಬಿಯನ್ನು ವೀಡಿಯೊ ತೋರಿಸುತ್ತದೆ. ಈ ಪರಾವಲಂಬಿಗಳು ಇತರ ಕೀಟಗಳ ಮೇಲೆ ದಾಳಿ ಮಾಡಿ ಅವುಗಳೊಳಗೆ ಬೆಳೆಯುತ್ತವೆ. ಅವು ಸಂಪೂರ್ಣವಾಗಿ ಬೆಳೆದಾಗ, ಕೀಟವನ್ನು ನೀರಿನಲ್ಲಿ ಜಿಗಿಯಲು ಮತ್ತು ದೇಹದಿಂದ ನಿರ್ಗಮಿಸಲು ಅವಕಾಶಮಾಡಿ ಕೊಡುತ್ತದೆ. ಮಲಯಾಳಂ ಟೈಮ್’ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಡಾ.ಸುಜನ ಪಾಲನ್ ಅವರು ವೀಡಿಯೊ ಕುರಿತು ಬರೆದ ಲೇಖನದಲ್ಲಿ ಇದು ಮರದ ಬೇರುಗಳಲ್ಲ ಬದಲಾಗಿ ಕುದುರೆ ಕೂದಲಿನ ಹುಳು ಎಂದು ಸ್ಪಷ್ಟ ಪಡಿಸಿದ್ದರೆ. ಆದ್ದರಿಂದ, ಪೋಸ್ಟ್ ಮೂಲಕ ಪ್ರತಿಪಾದಿಸಿರುವುದು ತಪ್ಪಾಗಿದೆ.

ಶಿವನಾಗಂ ಮರ ಮತ್ತು ಅದರ ಬೇರುಗಳ ಕುರಿತು ಅಂತರ್ಜಾಲದಲ್ಲಿ ಹುಡುಕಿದಾಗ ಅಂತಹ ಮರದ ಅಸ್ತಿತ್ವದ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ಕಂಡುಬಂದಿಲ್ಲ. ವೀಡಿಯೊದ ಸ್ಕ್ರೀನ್‌ ಶಾಟ್ ತೆಗೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ದೃಶ್ಯಗಳಿರುವ  YouTube  ವೀಡಿಯೊ ಒಂದು ಕಂಡುಬಂದಿದೆ. ಆದರೆ ವಿಡಿಯೋದಲ್ಲಿ ಇರುವುದು ಕುದುರೆ ಕೂದಲಿನ ವರ್ಮ್ ಎಂಬ ಪರಾವಲಂಬಿ. ಈ ಪರಾವಲಂಬಿಗಳು ಇತರ ಕೀಟಗಳ ಮೇಲೆ ದಾಳಿ ಮಾಡಿ ಅವುಗಳೊಳಗೆಬೆಳೆಯುತ್ತವೆ. ಅದು ಸಂಪೂರ್ಣವಾಗಿ ಬೆಳೆದಾಗ,  ಕೀಟವನ್ನು ನೀರಿನಲ್ಲಿ ಜಿಗಿಯಲು ಮತ್ತು ದೇಹದಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುತ್ತದೆ. ಈ ಯೂಟ್ಯೂಬ್ ವೀಡಿಯೋ ನೀರಿನಿಂದ ಹೇಗೆ ಹೊರ ಬರುವುದು ಎಂಬುದನ್ನು ತೋರಿಸುತ್ತದೆ.

 

ಹಾರ್ಸ್‌ ಹೇರ್ ವಾರ್ಮ್‌ಗಳನ್ನು ಗೋರ್ಡಿಯನ್ ವಾರ್ಮ್‌ಗಳು ಎಂದೂ ಕರೆಯುತ್ತಾರೆ, ಇದು ನೆಮಟೊಮಾರ್ಫಿಕ್ ಗುಂಪಿಗೆ ಸೇರಿದೆ. ಅವು ನೆಮಟೋಡ್‌ಗಳನ್ನು ಹೋಲುತ್ತವೆ, ಆದರೆ ಹೆಚ್ಚು ಉದ್ದ (4 ಇಂಚುಗಳುಅಥವಾಹೆಚ್ಚು) ಮತ್ತು ಹೆಚ್ಚು ತೆಳ್ಳಗಿರುತ್ತವೆ (1/80 ರಿಂದ 1/10ಇಂಚುವ್ಯಾಸ). ಇವು ನೀರು ಅಥವಾ ತೇವಾಂಶದ ಪ್ರದೇಶಗಳಲ್ಲಿಉತ್ತಮವಾಗಿ ಕಾಣುತ್ತವೆ.

 

 

ಮಲಯಾಳಂ ಟೈಮ್ಸ್ ಅವರು ಈ ವಿಡಿಯೋ ಕುರಿತು ಬರೆದ ಲೇಖನದಲ್ಲಿ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಡಾ.ಸುಜನಪಾಲನ್ ಅವರು ಈ ಬಗ್ಗೆ ಹೇಳಿದ್ದಾರೆ. ಇದು ಮರದ ಬೇರುಗಳಲ್ಲ, ಕುದುರೆಯ ಹುಳು ಎಂದು ವಿಡಿಯೋದಲ್ಲಿ ಹೇಳಲಾಗಿದೆ.

 

ಒಟ್ಟಾರೆಯಾಗಿ ಕುದುರೆ ಕೂದಲು ಹುಳುವಿನ ವೀಡಿಯೋವನ್ನು ಶಿವನಾಗ ಮರದ ಬೇರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಫ್ಯಾಕ್ಟ್ಲಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights