ಫ್ಯಾಕ್ಟ್‌ಚೆಕ್ : ಯೋಗೇಂದ್ರ ಯಾದವ್ ಅವರ ಮೂಲ ಹೆಸರು ಸಲೀಂ ಎಂಬುದು ನಿಜವೇ?

ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅವರು ತಮ್ಮ ನಿಜವಾದ ಗುರುತನ್ನು ಮರೆಮಾಚಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ. ಯಾದವ್ ಅವರ ಕುಟುಂಬ ಮತ್ತು ಬಾಲ್ಯದ ಸ್ನೇಹಿತರು ಅವರನ್ನು “ಸಲೀಂ” ಎಂದು ಕರೆಯುತ್ತಾರೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

ಈ ವೀಡಿಯೊವನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಯೋಗೇಂದ್ರ ಯಾದವ್ ಅವರ ನಿಜವಾದ ಹೆಸರು ಸಲೀಂ ಖಾನ್. ಅವರು ಮುಸ್ಲಿಂ ಧರ್ಮದವರು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸ್ವರಾಜ್ ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರು ಇಸ್ಲಾಂ ಧರ್ಮಿಯರೇ.  ಸಲೀಂ ಎಂಬುದು ಅವರ ನಿಜವಾದ ಹೆಸರೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾನಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, 22 ಮೇ 2023ರಂದು ಜಿಸ್ಟ್‌ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಮೂರು ನಿಮಿಷದ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದಲ್ಲಿ ಯೋಗೇಂದ್ರ ಯಾದವ್ ಅವರು ತಮ್ಮ ಬಾಲ್ಯದಲ್ಲಿ ನಡೆದ ಘಟನೆಯನ್ನು ಹಂಚಿಕೊಳ್ಳುತ್ತಾ. ತಾನು ಸಲೀಂ ಆದ ಕಥೆಯ ವಿವರಣೆಯನ್ನು ಹಂಚಿಕೊಂಡಿದ್ದಾರೆ.

ಸಲೀಂ ಎಂಬ ಹೆಸರಿನ ಬಗ್ಗೆ ಯೋಗೇಂದ್ರ ಯಾದವ್ ವಿವರಿಸುತ್ತ “ಇದು ನನ್ನ ಅಜ್ಜ, ಹಿಸಾರ್‌ನಲ್ಲಿ ಶಿಕ್ಷಕ ಮತ್ತು ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ರಾಮ್ ಸಿಂಗ್ ಅವರನ್ನು ಮಸೀದಿಯಲ್ಲಿನ ಗಲಭೆಯಿಂದಾಗಿ ಮಕ್ಕಳನ್ನು ಒಪ್ಪಿಸುವಂತೆ ಒತ್ತಾಯಿಸಿದ ಮುಸ್ಲಿಂ ಗಲಭೆಕೋರರ ಗುಂಪಿನಿಂದ ಕ್ರೂರವಾಗಿ ಹಲ್ಲೆ ನಡೆಸಿ ನನ್ನ ಅಜ್ಜನನ್ನು ಕೊಂದರು. ನಮ್ಮ ತಂದೆ  ಎಂಟನೇ ವಯಸ್ಸಿನಲ್ಲಿ ಇದ್ದಾಗ ಈ ದುರಂತ ಘಟನೆಗೆ ನಡೆಯಿತು. ಇದು ನನ್ನ ತಂದೆಯ ಮೇಲೆ ಆಳವಾದ ಪ್ರಭಾವ ಬೀರಿತು. ಉಗ್ರಗಾಮಿ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವ ಬದಲು, ನನ್ನ ತಂದೆ, ಗಾಂಧಿಯಿಂದ ಪ್ರೇರಿತರಾಗಿ, ತಮ್ಮ ಕೋಪವನ್ನು ವ್ಯಕ್ತಪಡಿಸುವ ಮಾರ್ಗವಾಗಿ ತಮ್ಮ ಎಲ್ಲಾ ಮಕ್ಕಳಿಗೆ ಮುಸ್ಲಿಂ ಹೆಸರನ್ನು ಇಡಲು ನಿರ್ಧರಿಸಿದರು. 

ನನ್ನ ಶಾಲಾ ದಿನಗಳಲ್ಲಿ ನಾನು ಈ ಹೆಸರಿನ ಬಗ್ಗೆ ಹಲವರಿಂದ  ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಈ ಹೆಸರನ್ನು ಬದಲಾಯಿಸಲು ನನ್ನ ಪೋಷಕರನ್ನು ಕೇಳಿದೆ ಆಗ ನನ್ನ ತಂದೆ ನನಗೆ ಕೆಲವು ಹೆಸರುಗಳು ಇರುವ ಚೀಟಿಗಳನ್ನು ನೀಡಿ ಒಂದನ್ನು ಆಯ್ದುಕೊಳ್ಳಲು ಹೇಳಿದರು ಅದರಲ್ಲಿ ಯೋಗೇಂದ್ರ ಎಂಬ ಹೆಸರಿತ್ತು ಮಂದೆ ಅದೇ ಹೆಸರಿನಿಂದ ಗುರುತಿಸಲ್ಪಟ್ಟೆ ಎಂದು ವಿವರಿಸಿದರು.

ಯೋಗೇಂದ್ರ ಯಾದವ್ ಅವರು ತಮ್ಮ ವೈಯಕ್ತಿಕ ಜೀವನವನ್ನು ಚರ್ಚಿಸುವ ಸಂದರ್ಶನಗಳಲ್ಲಿ ತಮ್ಮ ಬಾಲ್ಯದ ಹೆಸರಿನ ಹಿಂದಿನ ಕಥೆಯನ್ನು ಈ ಹಿಂದೆ ಹಂಚಿಕೊಂಡಿದ್ದ  ಹಳೆಯ ಸುದ್ದಿ ವರದಿಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್ ಮಾಡಿರುವುದು ಸ್ಪಷ್ಟವಾಗಿದೆ. ಮೂಲ ಸಂದರ್ಶನದಲ್ಲಿ ಯೋಗೇಂದ್ರ ಯಾದವ್ ತಮ್ಮ ಬಾಲ್ಯದ ಹೆಸರನ್ನು ‘ಸಲೀಂ’ ಎಂದು ಉಲ್ಲೇಖಿಸಿದ್ದಾರೆ ಮತ್ತು ಅದರ ಆಯ್ಕೆಯ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ. ಸಂದರ್ಶನದಲ್ಲಿ ಅವರು ತಮ್ಮನ್ನು ‘ಸಲೀಂ ಖಾನ್’ ಎಂದು ಉಲ್ಲೇಖಿಸಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ ಎಂದು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.

2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯೋಗೇಂದ್ರ ಯಾದವ್ ಅವರು ಮುಸ್ಲಿಮರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ‘ಸಲೀಂ’ ಎಂದು ಮತ್ತು ಹಿಂದೂಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ‘ಯದುವಂಶಿ’ ಎಂದು ಹೆಸರನ್ನು ಬಳಸಿದ್ದಾರೆ ಎಂಬ ಆರೋಪಗಳನ್ನು ಎದುರಿಸಿದ್ದರು.

ಉಲ್ಲೇಖಿಸಿರುವ ಬ್ಲಾಗ್ ಅನ್ನು ಬರೆದಿರುವ ಡಾ ರಾಕೇಶ್ ಪಾರಿಖ್, ಈ ವಿಷಯದ ಬಗ್ಗೆ ಯಾದವ್ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ, ಅವರು ಹಿಂದೂ ಆಗಿದ್ದರೆ ಅವರ ಬಾಲ್ಯದ ಹೆಸರು ‘ಸಲೀಂ’ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಯೋಗೇಂದ್ರ ಯಾದವ್ ಅವರು ತಮ್ಮ ಹೆಸರಿನ ಹಿಂದಿನ ಸಂಪೂರ್ಣ ಕಥೆಯನ್ನು ಹಂಚಿಕೊಂಡಿದ್ದಾರೆ, ಅವರ ತಂದೆ ದೇವೇಂದ್ರ ಸಿಂಗ್ ಮತ್ತು ಅಜ್ಜ ರಾಮ್ ಸಿಂಗ್ ಅವರ ದುರಂತ ಘಟನೆಯ ನಂತರ ಅವರು ಎದುರಿಸಿದ ದ್ವೇಷ ಮತ್ತು ಹಿಂಸೆಗೆ ಪ್ರತಿಕ್ರಿಯೆಯಾಗಿ ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ಇಡಲು ನಿರ್ಧರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಒಟದಟಾರೆಯಾಗಿ ಹೇಳುವುದಾದರೆ, ಸಂದರ್ಶನದಲ್ಲಿ ಯೋಗೇಂದ್ರ ಯಾದವ್ ಅವರು ತಾವು ಮುಸ್ಲಿಮರಾಗಿರುವುದರಿಂದ ತನಗೆ ‘ಸಲೀಂ’ ಎಂದು ಹೆಸರಿಸಲಾಯಿತು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ, ಬದಲಿಗೆ, ಅವರಿಗೆ ಈ ರೀತಿ ಹೆಸರು ಬರಲು ತಮ್ಮ ತಂದೆಯ ನಿರ್ಧಾರದ ಹಿಂದಿನ ಉದ್ದೇಶವನ್ನು ವಿವರಿಸಿದ್ದಾರೆ. ಆದರೆ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದನ್ನು ಹಂಚಿಕೊಳ್ಳುವಾಗ ವಿಡಿಯೋವನ್ನು ತಮಗೆ ಬೇಕಾದ ಹಾಗೆ ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : RSS ನೊಂದಿಗೆ ನೆಹರೂ ನಂಟು! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights