Fact Check: ನಿಮ್ಮ ಫೋನ್ ಅನ್ನು ಚಾರ್ಜ್ಮಾಡುತ್ತಿರುವಾಗ ಮಾತನಾಡಿದರೆ ಸ್ಪೋಟಗೊಳ್ಳುತ್ತದೆ ಎಂಬುದು ನಿಜವಾಗಿ ನಡೆದ ಘಟನೆ ಅಲ್ಲ
ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಮಾತನಾಡಿದರೆ ಹೀಗಾಗುತ್ತದೆ ಎಂಬ ಪೋನ್ಸ್ಪೋಟಗೊಳ್ಳುವ ವೀಡಿಯೊ ಇರುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದುನಿಜವೇಎಂಬುದನ್ನುಪರಿಶೀಲಿಸೋಣ

ಫೋನ್ ಚಾರ್ಜ್ ಮಾಡುವಾಗ ಮಾತನಾಡಿದರೆ ಸಿಡಿಯುವ ಭಯಾನಕತೆಯನ್ನು ವೀಡಿಯೊದಲ್ಲಿ ಕಾಣಬಹುದು.
ಈ ವೀಡಿಯೊದಲ್ಲಿನ ದೃಶ್ಯಗಳು ನಿಜವಾಗಿಯೂ ನಡೆದಿರುವುದಿಲ್ಲ.ಇದು ಸ್ಕ್ರಿಪ್ಟ್ಮಾಡಿದ ನಾಟಕೀಯ ವೀಡಿಯೊವಾಗಿದೆ. ಆದ್ದರಿಂದ, ಪೋಸ್ಟ್ಮೂಲಕ ಪ್ರತಿಪಾದಿಸಿರುವುದು ತಪ್ಪಾಗಿದೆ.
ವಿಡಿಯೋದ ಸ್ಕ್ರೀನ್ಶಾಟ್ ತೆಗೆದು ರಿವರ್ಸ್ ಇಮೇಜ್ ಸರ್ಚ್ಮಾಡಿದಾಗ ಅದೇ ವಿಡಿಯೋ ಫೇಸ್ಬುಕ್ನಲ್ಲಿ ಸಿಕ್ಕಿತು. ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಗುಟ್ಟಾಜ್ವಾಲಾ ತಮ್ಮ ಫೇಸ್ಬುಕ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ಆದಾಗ್ಯೂ, ಗುಟ್ಟಾಜ್ವಾಲಾ ಈ ವೀಡಿಯೊವನ್ನು ಹಂಚಿಕೊಂಡ ಪೋಸ್ಟ್ನಲ್ಲಿ ಇದು ಸ್ಕ್ರಿಪ್ಟ್ಮಾಡಿದ ವೀಡಿಯೊ ಮತ್ತು ಜಾಗೃತಿಗಾಗಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಫೋನ್ ಅನ್ನು ಚಾರ್ಜ್ಮಾಡಿದ ನಂತರ ವಿವಿಧ ಕಾರಣಗಳಿಗಾಗಿ ಫೋನ್ ಉರಿಯುವುದು ಅಥವಾ ಸ್ಫೋಟಗೊಳ್ಳುವಂತಹ ಘಟನೆಗಳು ಈ ಹಿಂದೆ (ಇಲ್ಲಿಮತ್ತುಇಲ್ಲಿ) ವರದಿಯಾಗಿದೆ. ದೋಷಯುಕ್ತ ಬ್ಯಾಟರಿಯಿಂದಾಗಿ ಇದು ಸಂಭವಿಸಬಹುದು.ಆದರೆ, ವಿಡಿಯೋದಲ್ಲಿ ಕಾಣುವಂತ ಘಟನೆ ಕುರಿತು ಇತ್ತೀಚೆಗೆ ನಮಗೆ ಯಾವುದೇ ಸುದ್ದಿ ಲೇಖನಗಳು ಕಂಡುಬಂದಿಲ್ಲ.
ಇತ್ತೀಚಿನದಿನಗಳಲ್ಲಿ, ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇಂತಹ ಜಾಗೃತಿ ವೀಡಿಯೊಗಳನ್ನು ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಈ ಕೆಲವರು ವೀಡಿಯೊಗಳಲ್ಲಿನ ವಿವರಣೆಯ ಭಾಗವನ್ನು ತೆಗೆದು ಹಾಕುತ್ತಾರೆ ಮತ್ತು ಅವುಗಳನ್ನು ನೈಜ ಘಟನೆಗಳಂತೆ ಹಂಚಿಕೊಳ್ಳುತ್ತಿದ್ದಾರೆ. ಅದೇ ವೀಡಿಯೊಗಳನ್ನು ಧಾರ್ಮಿಕ ಆರೋಪಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಅಂತಹಕೆಲವುವೀಡಿಯೋಗಳಬಗ್ಗೆ FACTLY ಬರೆದಿರುವ ಫ್ಯಾಕ್ಟ್ ಚೆಕ್ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ನಿಮ್ಮ ಫೋನ್ ಅನ್ನು ಚಾರ್ಜ್ಮಾಡುತ್ತಿರುವಾಗ ಮಾತನಾಡಿದರೆ ಸ್ಪೋಟಗೊಳ್ಳುತ್ತದೆ ಎಂಬುದು ನಿಜವಾಗಿ ನಡೆದ ಘಟನೆಅಲ್ಲ. ನಾಟಕೀಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
****

