FACT CHECK | ರಾಮನವಮಿಯಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಂಸಾಹಾರ ತಿಂದರೇ?

ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಭೀಕರ ಸ್ವರೂಪದ ಬರ, ಕುಡಿಯುವ ನೀರಿನ ಸಮಸ್ಯೆ, ಬಡತನ, ಬೆಲೆ ಏರಿಕೆ, ರೈತರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಾಕ್ಷಿಯಾಗಬೇಕಿದ್ದ 18 ನೇ ಲೋಕಸಬಾ ಚುನಾವಣೆ, ಜನರು ತಿನ್ನುವ ಆಹಾರದ ಕುರಿತಾಗಿ ಚರ್ಚೆ (ವೈಯಕ್ತಿಕ ಆಯ್ಕೆ) ಮೀನು, ಮಾಂಸ ಮತ್ತು ಕೋಳಿಯ ಆಹಾರದ ಬಗ್ಗೆ ಮಾತನಾಡುವ ಮಟ್ಟಕ್ಕೆ ಇಂದಿನ ರಾಜಕಾರಣ ಬಂದು ನಿಂತಿದೆ.

ಈ ದೇಶದ ಪ್ರಧಾನಿಯೊಬ್ಬರು ವಿರೋಧ ಪಕ್ಷದ ಜನಪ್ರತಿನಿಧಿಗಳು ತಿನ್ನುವ ಆಹಾರವನ್ನು ವ್ಯಂಗ್ಯ ಮಾಡುವ ಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಒಮ್ಮೆ ಗಂಭೀರಬಾಗಿ ಯೋಚಸಬೇಕಾಗಿದೆ. ಆ ವಿಷಯ ಪಕ್ಕಕ್ಕೆ ಇಡೋಣ ಈಗ ಅಂತಹದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಮಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಮನವಮಿಯ ದಿನದಂದು ಮಾಂಸ ತಿಂದಿದ್ದಾರೆ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಎಕ್ಸ್‌ನಲ್ಲಿನ  ಆರೋಪಿಸಿ  ಏಕನಾಥ್ ಶಿಂಧೆ ಆಹಾರ ಬ್ಲಾಗರ್ ಕಾಮಿಯಾ ಜಾನಿ ಅವರೊಂದಿಗೆ ಊಟ ಮಾಡುತ್ತಿರುವ ವೀಡಿಯೊದ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ರಾಮನವಮಿಯಂದು ಮಾಂಸಾಹಾರ ಸೇವಿಸಿದ್ದಕ್ಕಾಗಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರನ್ನು ಹಲವಾರು ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನವರಾತ್ರಿಯ ಸಂದರ್ಭದಲ್ಲಿ ಕುರಿ ಮಾಂಸ ತಿಂದಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅವರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ಬಳಕೆದಾರರಾದ ಭೂಷಣ್ ರವಿದಾಸ್ ಅವರು ವೈರಲ್ ಫೋಟೋವನ್ನು ಹಂಚಿಕೊಂಡಿದ್ದು, “ನವರಾತ್ರಿಯಲ್ಲಿ, ತೇಜಸ್ವಿ ಯಾದವ್ ಮೀನು ತಿಂದರೆ ಎದೆಗೆ ಬಡಿದುಕೊಳ್ಳುವರು,  ಏಕನಾಥ್ ಶಿಂಧೆ ಮಾಂಸ ತಿಂದಾಗ ಮೌನವಾಗಿರುವುದೇಕೆ?” ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 18, 2024 ರಂದು ಕರ್ಲಿ ಟೇಲ್ಸ್ ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾದ ಲಭ್ಯವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಾದ ವಿಡಿಯೋದಲ್ಲಿ ಉಲ್ಲೇಖಿಸಿದಂತೆ, ರಾಮನವಮಿಯಂದು ಏಕನಾಥ್ ಶಿಂಧೆ ಅವರನ್ನು ಆ್ಯಂಕರ್ ಕಾಮಿಯಾ ಜಾನಿ ಸಂದರ್ಶನ ಮಾಡಿ ಊಟವನ್ನು ಸವಿದಿದ್ದಾರೆ ಎನ್ನಲಾಗಿದೆ. ಆದರೆ ಈ ಊಟ ಮಾಂಸಹಾರವಲ್ಲ ಸಸ್ಯಾಹಾರ ಎಂದು ಉಲ್ಲೇಖಿಸಿದ್ದಾರೆ. ಈ ವೈರಲ್ ಫೋಟೋವನ್ನು ವಿಶ್ವಾಸ್‌ ನ್ಯೂಸ್‌ ಸುಳ್ಳು ಎಂದು ಫ್ಯಾಕ್ಟ್‌ಚೆಕ್ ಮಾಡಿದೆ.

ಇಬ್ಬರ ಊಟದ ಪ್ಲೇಟಿನಲ್ಲಿ ಯಾವ ಭಕ್ಷ್ಯಗಳಿವೆ ಎಂದು ನೀವು ಹೇಳಬಹುದೇ ಎಂದು ಕಾಮಿಯಾ ಜಾನಿ ವಿಡಿಯೋದಲ್ಲಿ ಸಿಎಂ ಶಿಂಧೆ ಅವರನ್ನು ಕೇಳಿದಾಗ, ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಬದನೆ ತರಕಾರಿ, ಪಾಟೋರಿ ವಡಿ ಮತ್ತು ಬದನೆ ಭರ್ತಾ ಎಂದು ಹೇಳುವುದನ್ನು ಕೇಳಬಹುದು. ಪಾಟೋರಿ ವಡಿಯನ್ನು ಹೇಗೆ ತಿನ್ನುತ್ತಾರೆ ಎಂಬುದನ್ನೂ ಅವರು ಕಾಮಿಯಾ ಜಾನಿಗೆ ವಿವರಿಸುತ್ತಾರೆ.

The meal included eggplant curry and patwadi.

ಆ್ಯಂಕರ್ ಕಾಮಿಯಾ ಜಾನಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದು. ವಿಡಿಯೋ ಶೀರ್ಷಿಕೆಯಲ್ಲಿ, ರಾಮ ನವಮಿ ಸಂದರ್ಭದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರೊಂದಿಗೆ ನಾನು ವೆಜ್ ಪಟೋರಿ ವಡಿ ತಿಂದಿದ್ದೇನೆ. ಈ ಅಡುಗೆಯನ್ನು ಗ್ರಾಮದ ಮಹಿಳೆಯರೆ  ತಯಾರಿಸಿದ್ದರು ಎಂದಿದ್ದಾರೆ. ಹಾಗಾಗಿ ಏಕನಾಥ್ ಶಿಂಧೆ ರಾಮನವಮಿಯಂದು ಮಾಂಸಾಹಾರ ಸವಿದಿದ್ದಾರೆ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ರಾಮನವಮಿಯಂದು ಏಕನಾಥ್ ಶಿಂಧೆ ಮಾಂಸ ತಿಂದಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು  ವಾಸ್ತವವಾಗಿ, ಕರ್ಲಿ ಟೇಲ್ಸ್ ಎಂಬ ಕಾರ್ಯಕ್ರಮದ ಆಂಕರ್ ಕಾಮಿಯಾ ಜಾನಿ, ರಾಮ ನವಮಿಯ ಸಂದರ್ಭದಲ್ಲಿ ಏಕನಾಥ್ ಶಿಂಧೆಅವರನ್ನು ಸಂದರ್ಶಿಸಲು ಬಂದಾಗ ಅವರೊಂದಿಗೆ ಸಸ್ಯಾಹಾರ ಸೇವಿಸಿದ್ದಾರೆ. ಆದರೆ ಈಗ ಈ ಸಂದರ್ಶನದ ಚಿತ್ರವನ್ನು  ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಒಂದು ವೇಳೆ ರಾಮನವಮಿ ದಿನದಂದು ಏಕನಾಥ್ ಶಿಂಧೆ ಮಾಂಸಾಹಾರವನ್ನೇ ಸೇವಿಸಿದ್ದರೂ ಅದು ಅವರ ವೈಯಕ್ತಿಕ ಆಯ್ಕೆ ಎಂದು ಗೌರವಿಸಬೇಕು, ಪ್ರತಿಯೊಬ್ಬರ ಆಹಾರ ಅವರ ಆಯ್ಕೆ ಮತ್ತು ವೈಯಕ್ತಿಕ ಹಕ್ಕು ಕೂಡ.ಊಟ ತನ್ನಿಚ್ಚೆ , ನೋಟ ಪರರಿಚ್ಚೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತೆಲುಗು ನಟ ಅಲ್ಲು ಅರ್ಜುನ್ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights