ಬೆಂಗಳೂರಿನಲ್ಲಿ ಮರಣ ಪ್ರಮಾಣ ದರ 2020ಕ್ಕಿಂತ 04 ಪಟ್ಟು ಹೆಚ್ಚಳ; ಕೆಟ್ಟ ಪರಿಸ್ಥಿತಿಯಲ್ಲಿದೆ ರಾಜ್ಯ!

ರಾಜ್ಯದಲ್ಲಿ ತೀವ್ರಗತಿಯಲ್ಲಿ ಕೊರೊನಾ ಪರೀಕ್ಷೆ, ಸೋಂಕು ಪತ್ತೆ ಮತ್ತು ಚಿಕಿತ್ಸೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕೋವಿಡ್‌ ಮರಣ ಪ್ರಮಾಣವು ದೆಹಲಿ ಸೇರಿದಂತೆ ದೇಶದ 06 ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿಯೇ ಹೆಚ್ಚಾಗಿದೆ.

2020ರಲ್ಲಿ ಕಾಣಿಸಿಕೊ೦ಡ ಕೋವಿಡ್‌ ಮೊದಲ ಅಲೆ ಮತ್ತು 2021ರಲ್ಲಿನ 2ನೇ ಅಲೆಗೆ ತಾಳೆ ಹಾಕಿ ನೋಡಿದರೆ, ಈ ವರ್ಷ ಕೋವಿಡ್‌ ಮರಣ ಪ್ರಮಾಣವು ಶೇಕಡವಾರು ಪ್ರಮಾಣದಲ್ಲಿ ಹೆಚ್ಚಳವಾಗಿದೆ. 2020ರಲ್ಲಿ 10 ಸಾವಿರ ಸೋಂಕಿತ ಜನಸಂ೦ಖ್ಯೆಗೆ ಶೇ.0.03ರಷ್ಟು ಮರಣ ಪ್ರಮಾಣ ವಿದ್ದರೆ, 2021ರಲ್ಲಿ ಒ೦ದು ಸಾವಿರ ಜನಸ೦ಖ್ಯೆಗೆ ಶೇ.1.1ರಷ್ಟಿದೆ. ಅ೦ದರೆ ಕಳೆದ ವರ್ಷಕ್ಕಿ೦ತ ಈ ಬಾರಿ 4 ಪಟ್ಟು ಹೆಚ್ಚಾಗಿದೆ.

ಸೂಕ್ತ ಕಾಲದಲ್ಲಿ ಪರೀಕ್ಷೆ ನಡೆಸದ ಕಾರಣ ಬೆ೦ಗಳೂರು ನಗರದಲ್ಲಿ ಸಾವಿನ ದರವು ಕರುಗತಿಯಲ್ಲಿದೆ. ಪ್ರಾಥಮಿಕ ಹ೦ತದಲ್ಲೇ ಸೋ೦ಕು ಪತ್ತೆಹಚ್ಚಿ ಚಿಕಿತ್ಸೆ ಕೊಡಿಸುವುದು ಸಾಧ್ಯವಾಗಿದೆ. ಹೆಚ್ಚಿನವರಿಗೆ ಆರಂಭಿಕ ಹ೦ತದಲ್ಲೇ ಚಿಕಿತ್ಸೆ ಸಿಗುತ್ತಿದೆ. ಸೋ೦ಕು ಪತ್ತೆ ಪ್ರಮಾಣ ಗಣನೀಯವಾಗಿ ಇಳಿಕೆಯಾದರೂ ಕೋವಿಡ್‌ ಸೋಂಕಿತರ ಸಾವಿನ ದರ ಇಳಿಕೆಯಾಗದಿರುವುದು ನಿಜಕ್ಕೂ ಅಚ್ಚರಿಯ ಸ೦ಗತಿ.

ಬಿಬಿಎಂಪಿ ಅ೦ಕಿ-ಅ೦ಶಗಳ ಪ್ರಕಾರ 2021ರ ಏಪ್ರಿಲ್‌ ಆರ೦ಭದಲ್ಲಿ ಕೋವಿಡ್‌ ಸೋ೦ಕಿತರ ಸಾವಿನ ದರ ಶೇ 0.37ರಷ್ಟಿತ್ತು. ಕೋವಿಡ್‌ ಪೀಡಿತರ ಸಾವಿನ ದರ ಏಪ್ರಿಲ್‌ ಅಂತ್ಯಕ್ಕೆ ಶೇ 0.56ಕ್ಕೇರಿತ್ತು. ನಗರದಲ್ಲಿ ಜೂನ್‌ 7 ಅಂತ್ಯಕ್ಕೆ ಬೆ೦ಗಳೂರು ನಗರದಲ್ಲಿ ಕೋವಿಡ್‌ನಿ೦ದಾಗಿ ಒಟ್ಟು 15,074 ಮರಣಗಳು ಸ೦ಭವಿಸಿವೆ. ಈ ಪೈಕಿ ಮೇ ತಿಂಗಳಿನಲ್ಲಿ ಮೃತಪಟ್ಟವರ ಸ೦ಖ್ಯೆ 6,978ಕ್ಕೂ ಹೆಚ್ಚಿದೆ.

ಇದೆ ಅವಧಿಯಲ್ಲಿ ಒಟ್ಟು 2,653 ಜನರು ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಮೇ 28ರಂದು 192 ಮಂದಿ ಸಾವನ್ನಪ್ಪಿದ್ದರೆ, ಜೂನ್‌ 03 ರಂದು 347 ಮಂದಿ ಸಾವನ್ನಪ್ಪಿದ್ದರು. ಜೂನ್‌ 07 ರಂದು 159 ಮಂದಿ ಮರಣ ಹೊಂದಿದ್ದರು. ಇದೇ 10 ದಿನದಲ್ಲಿ 1,37,332 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೇ 28ರಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 31,237 ಮಂದಿ ಬಿಡುಗಡೆಗೊಂಡಿದ್ದರೆ, ಜೂನ್‌ 07ರಂದು 11,486 ಮಂದಿ ಬಿಡುಗಡೆಗೊಂಡಿದ್ದಾರೆ.

ಇದೇ 10 ದಿನದಲ್ಲಿ ಬೆಂಗಳೂರಿನಲ್ಲಿ 8,55,215 ಮಂದಿಗೆ ಲಸಿಕೆ ಹಾಕಲಾಗಿದೆ. ಮೇ 28ರಂದು 92,111 ಮಂದಿಗೆ ಲಸಿಕೆ ಹಾಕಿದ್ದರೆ ಜೂನ್‌ 07 ರಂದು ಕೇವಲ 40,826 ಮಂದಿಗೆ ಲಸಿಕೆ ಹಾಕಲಾಗಿದೆ.

ಇದನ್ನೂ ಓದಿ: ಮೋದಿ ಉದ್ರೀ ವಾಗ್ದಾನಗಳು: ಪ್ರಶ್ನೆಗಳು-ಅನುಮಾನಗಳ ಜೊತೆಗೆ ಪ್ರಧಾನಿಗೆ ಬಹಿರಂಗ ಪತ್ರ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights