FACT CHECK | ಪಶ್ಚಿಮ ಬಂಗಾಳದಲ್ಲಿ ಕೃತಕ ಬೆರಳಚ್ಚು ಬಳಸಿ ನಕಲಿ ಮತದಾನ ಮಾಡಲಾಗುತ್ತಿದೆಯೇ?

ಪಶ್ಚಿಮ ಬಂಗಾಳದಲ್ಲಿ ನಕಲಿ ಮತದಾನ ಮಾಡಲು ಕೃತಕ ಬೆರಳುಗಳನ್ನು ತಯಾರಿಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ಮತದಾನ ನಡೆಯುತ್ತಿದೆ. ಬಾಂಗ್ಲಾದೇಶದ ಜನರು ಇಲ್ಲಿ ಬಂದು ಮತ ಚಲಾಯಿಸುತ್ತಿದ್ದಾರೆ. ಮತಗಟ್ಟೆಯಲ್ಲಿ ಬೆರಳಿಗೆ ಶಾಯಿ  ಹಾಕುವ ಅಧಿಕಾರಿಗೂ ಬೆರಳು ಅಸಲಿಯೋ ನಕಲಿಯೋ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಸಂಸ್ಕೃತಿ ಮತ್ತು ಭವಿಷ್ಯವನ್ನು ನೋಡಿ, ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇನ್ಫೋಗ್ರಾಫಿಕ್‌ನೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಾ ಕೃತಕ ಬೆರಳುಗಳಂತೆ ಕಾಣುವ ಚಿತ್ರವನ್ನು ಪ್ರಸಾರ ಮಾಡುತ್ತಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ನಕಲಿ ಮತಗಳನ್ನು ಚಲಾಯಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.  ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 6 ಜೂನ್, 2013 ರಂದು ABC ಸುದ್ದಿ ತಾಣದಲ್ಲಿ ಪ್ರಕಟಿಸಿದ ವರದಿ ಲಭ್ಯವಾಗಿದೆ.  “ಪ್ರಾಸ್ಥೆಟಿಕ್ ಫಿಂಗರ್‌ಗಳು ಜಪಾನ್‌ನ ಯಾಕುಜಾ ದರೋಡೆಕೋರರ ಅನುಕೂಲಕ್ಕಾಗಿ ತಯಾರಿಸಲಾಗಿದೆ”. ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ.

ಮತ್ತಷ್ಟು ಸರ್ಚ್ ಮಾಡಿದಾಗ NDTV ವರದಿಯೊಂದು ಲಭ್ಯವಾಗಿದೆ. ಯಾಕುಜಾಗಳು ತಮ್ಮ ಕಟ್ಟುನಿಟ್ಟಾದ ನೀತಿ ಸಂಹಿತೆಗಳು, ಅವರ ಸಂಘಟಿತ ಧರ್ಮದ ಸ್ವಭಾವ ಮತ್ತು ಯುಬಿಟ್ಸುಮ್ ಅಥವಾ ಎಡಗೈ ಕಿರುಬೆರಳನ್ನು ಕತ್ತರಿಸುವಂತಹ ಹಲವಾರು ಅಸಾಂಪ್ರದಾಯಿಕ ಆಚರಣೆಗಳಿಗೆ ಹೆಸರುವಾಸಿಯಾಗಿದ್ದಾರೆ.ಇವರು ಹೆಚ್ಚಾಗಿ ಹಚ್ಚೆ ಹಾಕಿದ ದೇಹಗಳನ್ನು ಹೊಂದಿರುವ ಮತ್ತು ಫಂಡೋಶಿ ಧರಿಸಿರುವ ಪುರುಷರಂತೆ ಚಿತ್ರಿಸಲಾಗಿದೆ ,ಈ ಗುಂಪನ್ನು ಇನ್ನೂ “ಆಧುನಿಕ ಮತ್ತು ಶ್ರೀಮಂತ ಕ್ರಿಮಿನಲ್ ಸಂಸ್ಥೆ” ಎಂದು ಪರಿಗಣಿಸಲಾಗಿದೆ. ಎಂದು NDTV ವರದಿ ಮಾಡಿದೆ.

ಯುಬಿಟ್ಸುಮ್ ಅನ್ನು ಒಟೋಶಿಮೆ ಎಂದೂ ಕರೆಯಲಾಗುತ್ತದೆ , ಅಥವಾ ಒಬ್ಬರ ಬೆರಳನ್ನು ಕತ್ತರಿಸುವುದು, ಪ್ರಾಯಶ್ಚಿತ್ತ ಅಥವಾ ಕ್ಷಮೆಯ ಒಂದು ರೂಪವಾಗಿದೆ. ಮೊದಲ ಅಪರಾಧದ ನಂತರ,  ತನ್ನ ಎಡಗೈ ಕಿರುಬೆರಳಿನ ತುದಿಯನ್ನು ಕತ್ತರಿಸಿ ಕತ್ತರಿಸಿದ ಭಾಗವನ್ನು ತನ್ನ ಮುಖ್ಯಸ್ಥನಿಗೆ ನೀಡಬೇಕು. ಕೆಲವೊಮ್ಮೆ ತನ್ನ ಸ್ವಂತ ಗ್ಯಾಂಗ್‌ನ ಸದಸ್ಯರನ್ನು ಮತ್ತಷ್ಟು ದಾಳಿಯಿಂದ ರಕ್ಷಿಸಲು ಬಯಸಿದರೆ ಒಯಾಬುನ್‌ಗೆ ಪ್ರಾಯಶ್ಚಿತ್ತವಾಗಿ ಇದನ್ನು ಮಾಡಬಹುದು. ಬೆರಳು ಕತ್ತರಿಸುವ ಈ  ಪ್ರವೃತ್ತಿ ಇತ್ತೀಚೆಗೆ ಕಿರಿಯ ಸದಸ್ಯರಲ್ಲಿ ಕಡಿಮೆಯಾಗುತ್ತಾ ಬಂದಿದೆ. 

16 ಡಿಸೆಂಬರ್ , 2013 ರಂದು ಜಪಾನೀಸ್-ಅಮೆರಿಕನ್ ಪತ್ರಕರ್ತ ಅಕಿಕೊ ಫುಜಿತಾ ಪ್ರಕಟಿಸಿದ ಲೇಖನದಲ್ಲಿಯೂ ಇದೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ನಕಲಿ ಮತಗಳನ್ನು ಹಾಕಲು ಪಶ್ಚಿಮ ಬಂಗಾಳದಲ್ಲಿ ಕೃತಕ ಬೆರಳುಗಳನ್ನು ಬಳಸಲಾಗುತ್ತಿದೆ ಎಂದು ಸುಳ್ಳು ಪ್ರತಿಪಾದನೆಯೊದಿಗೆ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಜಪಾನ್‌ನ ಯಾಕುಜಾ ದರೋಡೆಕೋರರು ತಮ್ಮ ಕತ್ತರಿಸಿದ ಕೈ ಬೆರಳುಗಳನ್ನು ಮರೆಮಾಚಲು ಬಳಸುವ ಪ್ರಾಸ್ಥೆಟಿಕ್ ಫಿಂಗರ್‌ಗಳ ಚಿತ್ರವನ್ನು ಬಳಸಿಕೊಂಡು, 2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕೃತಕ ಬೆರಳುಗಳನ್ನು ಬಳಸಿ ನಕಲಿ ಮತದಾನ ಮಾಡಲಾಗುತ್ತಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇರಳದ ಮುಸಲ್ಮಾನರು RSS ಕಾರ್ಯಕರ್ತನ ತಲೆ ಕಡಿದಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights