ಅಪ್ರಾಪ್ತ ಬಾಲಕಿಯ ಅಪಹರಣ; ಚುಚ್ಚುಮದ್ದು ನೀಡಿ 08 ವರ್ಷ ನಿರಂತರ ಅತ್ಯಾಚಾರ

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಆಕೆಗೆ ಕಾಮೋತ್ತೇಜಕ ಚುಚ್ಚುಮದ್ದು ನೀಡಿ 08 ವರ್ಷಗಳ ಕಾಲ ಅತ್ಯಾಚಾರ ಎಸಗಿರುವ ಅಮಾನವೀಯ ಕುಕೃತ್ಯ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಅಂದೇರಿ ಪ್ರದೇಶದ ಬಳಿ ಉದ್ಯಮಿಯೊಬ್ಬರ 16 ವರ್ಷದ ಮಗಳನ್ನು ನೆರೆಹೊರೆ ಕಾಮುಕನೊಬ್ಬ ಅಪಹರಿಸಿದ್ದ. ಆಕೆಗೆ ಕಾಮೋತ್ತೇಚಕ ಚುಚುಮದ್ದು ನೀಡಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯ ಆತ ಪತ್ನಿಗೂ ತಿಳಿದಿತ್ತು. ಆದರೂ ಆಕೆ ಪತಿಗೆ ಸಹಕಸಿದ್ದಳು. ಹಾಗಾಗಿ ಆಕೆಯನ್ನು ಬಂಧಿಸಲಾಗಿದೆ. ಆದರೆ ಆರೋಪವನ್ನು ದಂಪತಿ ನಿರಾಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪೊಷಕರಿಸಿಗೆ 27 ಪುಟಗಳ ಪತ್ರ ಬರೆದಿದ್ದು, ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ರದ ಆಧಾರದಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದಲ್ಲಿ ಬಾಲಕಿಯ ಚಿಕ್ಕಪ್ಪ ಹಾಗೂ ಆತನ 19 ವರ್ಷದ ಮಗ ಶಾಮೀಲಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯುವತಿಯ ತಂದೆ ನೀಡಿದ್ದ ಕಿಡ್ನಾಪ್ ದೂರಿನ ಆಧಾರ ಮೇಲೆ ಡೆಪ್ಯುಟಿ ಪೊಲೀಸ್ ಕಮಿಷನರ್ ಅಭಿಷೇಕ್ ಮತ್ತು ಅವರ ತಂಡ ದೆಹಲಿ ಮತ್ತು ಉತ್ತರಪ್ರದೇಶಕ್ಕೆ ತೆರಳಿ ಯುವತಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿಸ್ಪರ್ಧಿಗಳಿಗೆ ಲಂಚ: ಕೇರಳ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ದ ಎಫ್‌ಐಆರ್‌ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights