ಎಎಪಿ ವಿರುದ್ಧದ ಹೋರಾಟಕ್ಕೆ ಬಿಜೆಪಿ ನನ್ನನ್ನು ಆಹ್ವಾನಿಸುವುದು ದುರಾದೃಷ್ಟಕರ: ಅಣ್ಣಾ ಹಜಾರೆ

ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್‌ ಆದ್ಮಿ ಪಕ್ಷದ ಅರವಿಂದ ಕೇಜ್ರೀವಾಲ್ ನೇತೃತ್ವದ ಸರ್ಕಾರದ ವಿರುದ್ಧದ ಹೋರಾಟಕ್ಕೆ ಭಾಗವಹಿಸುವಂತೆ ಹೋರಾಟಗಾರ ಅಣ್ಣಾ ಹಜಾರೆಯವರು ಭಾಗವಹಿಸುವಂತೆ ಕೋರಿ ದೆಹಲಿ ಬಿಜೆಪಿ ಘಟಕದ ಆಹ್ವಾನವನ್ನು ತಿರಸ್ಕರಿಸಿದ್ದು, ಪ್ರಭಾವ ಇಲ್ಲದ ನನ್ನನ್ನ ಆಹ್ವಾನಿಸಿರುವುದು ನಿಜಕ್ಕೂ ದುರದೃಷ್ಟಕರ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಕಳೆದ ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೂ ಬಿಜೆಪಿ 10 × 12 ಅಡಿ ಕೋಣೆಯಲ್ಲಿ ವಾಸಿಸುವ, ಯಾವುದೇ ಪ್ರಬಲ ಶಕ್ತಿ ಇಲ್ಲದ 83 ವರ್ಷದ ಈ ಫಕೀರನನ್ನ ಆಂದೋಲನಕ್ಕೆ ಕರೆಯುತ್ತಿದೆ. ಇದಕ್ಕಿಂತ ದೊಡ್ಡ ದುರಾದೃಷ್ಟಕರ ವಿಚಾರವಿಲ್ಲ ಎಂದು ಅಣ್ಣಾ ಹಜಾರೆಯವರು ಬಿಜೆಪಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ ಎಂದು ಹೇಳಲಾಗಿದೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಿರುದ್ಧ ನಡೆಸುವ ಆಂದೋಲನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿ ಆದೇಶ ಗುಪ್ತಾ ಅವರು ಕಳೆದ ಸೋಮವಾರ ಭ್ರಷ್ಟಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದಿದ್ದರು. ಎಎಪಿ ಸರ್ಕಾರವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭ್ರಷ್ಟಾಚಾರದ ಹೊಸ ಹೆಸರು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಯುಪಿಎ ಸರಕಾರ ಆಡಳಿತಾವಧಿಯಲ್ಲಿ ಅಣ್ಣ ಹಜಾರೆಯವರು ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಆಂದೋಲನದಲ್ಲಿ ಅರವಿಂದ್‌ ಕೇಜ್ರಿವಾಲ್‌ ಕೂಡ ಭಾಗಿಯಾಗಿದ್ದರು.


ಇದನ್ನೂ ಓದಿ:  ಮೋದಿ ಹೆಸರನ್ನಷ್ಟೇ ಬಳಸಿ ಚುನಾವಣೆ ಗೆಲ್ಲಲು ಆಗುವುದಿಲ್ಲ: ಉತ್ತರಖಂಡ್ ಬಿಜೆಪಿ ರಾಜ್ಯಾಧ್ಯಕ್ಷ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights