BJP: ಮೂರೂ ಪಕ್ಷಗಳಲ್ಲಿಯೂ ಬೇಡವಾದ ಹಳ್ಳಿಹಕ್ಕಿ ಅಡಗೂರು ವಿಶ್ವನಾಥ್….

ಅರ್ಹತೆ ಪಡೆಯಲು ವಿಫಲನಾದ  ಹುಣಸುರಿನ ಅನರ್ಹ ಶಾಸಕ ಅಡಗೂರು ವಿಶ್ವನಾಥ್ ಎಲ್ಲೂ ಸಲ್ಲದೇ ಹೋಗಿದ್ದಾರೆ..  ಹಳ್ಳಿ ಹಕ್ಕಿ ವಿಶ್ವನಾಥ್ ಇಗ ಮೂರೂ ಪಕ್ಷಗಳಲ್ಲಿಯೂ ಬೇಡವಾದ ಹಳ್ಳಿಹಕ್ಕಿಯಾಗಿದ್ದಾರೆ… ವರ್ಷದ ಹಿಂದೆ ಮೈತ್ರಿ ಸರಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಡಗೂರು ವಿಶ್ವನಾಥ್ ಅವರು ಇಂದು ಬಿಜೆಪಿಗೆ ಬೇಡದವರಾದರೇ ಎಂದು ಅವರ ಬೆಂಬಲಿಗರು ಪ್ರಶ್ನೆ ಮಾಡುತ್ತಿದ್ದಾರೆ.

ವಿಧಾನ ಪರಿಷತ್ ಚುನಾವಣೆಗೆ ಉಳಿದಿಬ್ಬರು ಪಕ್ಷಾಂತರಿಗಳನ್ನು ಪುರಸ್ಕರಿಸಿ ವಿಶ್ವನಾಥ್‌ಗೆ ಬಿಜೆಪಿ ನಾಯಕರು ನಾಮ ಹಾಕಿರುವುದು ಅವರ ಬೆಂಬಲಿಗರಿಗೆ ತೀರಾ ಬೇಸರ ಮೂಡಿಸಿದೆ. ತಮಗೆ ಟಿಕೆಟ್ ಸಿಗುವುದು ಕಷ್ಟ ಎಂಬುದು ಖುದ್ದು ವಿಶ್ವನಾಥ್ ಅವರಿಗೂ ತಿಳಿದಿತ್ತಾದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಅಂಧ ವಿಶ್ವಾಸ ಇರಿಸಿದ್ದರು. ಬಿಎಸ್ವೈ ತಮ್ಮ ಕೈಬಿಡುವುದಿಲ್ಲ ಎಂಬ ಪ್ರಬಲ ನಂಬಿಕೆಯಲ್ಲಿದ್ದರು.

ಆದರೆ ಸಿಎಂ ಸಹ ಅವರ ನೆರವಿಗೆ ಬಂದಿಲ್ಲ. ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೊತದ್ದೇ ತಮ್ಮ ತಪ್ಪು ಎಂದಾದರೇ ಅದೇ ತಪ್ಪೆಸಗಿದ ಎಂಟಿಬಿ ನಾಗರಾಜ್ ಎಂಎಲ್ಸಿ ಆಗುತ್ತಿರುವುದು ಹೇಗೆ ಎಂಬುದು ವಿಶ್ವನಾಥ್ ಆಂಬೋಣ. ಸುದೀರ್ಘ ಕಾಲ ಕಾಂಗ್ರೆಸ್ ರಾಜಕಾರಣದಲ್ಲಿ ಪಳಗಿರುವ ವಿಶ್ವನಾಥ್ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ನೀರು ಕುಡಿದಿದ್ದಾರೆ.

ಆದರೆ ಅದೇ ವಿಶ್ವನಾಥ್ ಅವರು ಇಂದು ಮೂರೂ ಪಕ್ಷಗಳಿಗೂ ಬೇಡವಾದ ನಾಯಕರಾಗಿದ್ದಾರೆ ಎಂಬುದು ಕಟುಸತ್ಯ. ಈ ಮಧ್ಯೆ ಡಿಸೆಂಬರಿನಲ್ಲಿ ಮತ್ತೆ ರಾಜಕೀಯ ಧ್ರುವೀಕರಣದ ಮಾತನ್ನಾಡುವ ಮೂಲಕ ವಿಶ್ವನಾಥ್ ಚಲಾವಣೆಯಲ್ಲಿರಲು ಪ್ರಯತ್ನಿಸಿದ್ದಾರಾದರೂ ಅವರ ಮಾತಿಗೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಕಿಮ್ಮತ್ತು ಇಲ್ಲದಂತಾಗಿದೆ.

ಸಿದ್ದರಾಮಯ್ಯ ಅವರೊಂದಿಗೆ ಜಗಳವಾಡಿಕೊಂಡು ಜೆಡಿಎಸ್‌ಗೆ ಬಂದು ಶಾಸಕರಾಗಿ ಅಧಿಕಾರದ ಆಸೆಯಿಂದ ಬಿಜೆಪಿಗೆ ಜಿಗಿದ ವಿಶ್ವನಾಥ್ ಅವರಿಗೆ ಈಗ ಅನಾಥ ಪ್ರಜ್ಞೆ ಕಾಡುತ್ತಿದ್ದರೇ ಅದಕ್ಕೆ ಕಾರಣವಿಲ್ಲದಿಲ್ಲ ಎನ್ನುತ್ತವೆ ಅವರ ಆಪ್ತ ಮೂಲಗಳು.

ಬುಧವಾರ ತಡ ರಾತ್ರಿ ಪ್ರಕಟವಾದ ಬಿಜೆಪಿ ಪಟ್ಟಿಯಲ್ಲಿ ಎಂಟಿಬಿ ನಾಗರಾಜ್, ಆರ್. ಶಂಕರ್, ಸುನಿಲ್ ವಲ್ಯಾಪುರೆ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರಿಗೆ ಮಣೆ ಹಾಕಲಾಗಿದೆ. ಇದೆ 29ಕ್ಕೆ ನಿಗದಿಯಾಗಿರುವ ವಿಧಾನ ಸಭೆಯಿಂದ ವಿಧಾನ ಪರಿಸತ್ತಿನ ಏಳು ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್‌ನಿಂದ ಹರಿಪ್ರಸಾದ್, ನಸೀರ್ ಅಹ್ಮದ್ ಮತ್ತು ಜಾತ್ಯತೀತ ಜನತಾ ದಳದಿಂದ ಕೋಲಾರದ ಗೋವಿಂದ ರಾಜು ಅವರು ಕಣದಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights