ಪ್ರಜಾಪ್ರಭುತ್ವ ಮೇಲೆ ಸರ್ವಾಧಿಕಾರಿ, ರಾಷ್ಟ್ರ ವಿರೋಧಿಗಳ ಪ್ರಭಾವ ಹೆಚ್ಚುತ್ತಿದೆ: ಸೋನಿಯಾ ಗಾಂಧಿ

ಭಾರತದಲ್ಲಿ ರಾಷ್ಟ್ರ ವಿರೋಧಿ ಮತ್ತು ಬಡಜನರ ವಿರೋಧಿ ಶಕ್ತಿಗಳು ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ. ದೇಶದ ಪ್ರಜಾಪ್ರಭುತ್ವದ ಮೇಲೆ ಪ್ರಜಾತಂತ್ರ ವಿರೋಧಿ ಸರ್ವಾಧಿಕಾರದ ಪ್ರಭಾವ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

“ಕೆಟ್ಟ ಆಲೋಚನೆ ಈಗ ಪ್ರಾಬಲ್ಯ ಸಾಧಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಮತ್ತು ಪ್ರಜಾಪ್ರಭುತ್ವದ ಅಂಗಸಂಸ್ಥೆಗಳು ನಾಶವಾಗುತ್ತಿದೆ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಸ್ವಾತಂತ್ರ್ಯ ಗಳಿಸಿ  75 ವರ್ಷಗಳ ನಂತರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಊಹಿಸಿರಲಿಲ್ಲ. ಆದರೆ, ಸರ್ವಾಧಿಕಾರಿ ಧೋರಣೆ ಹೆಮ್ಮರವಾಗಿ ಬೆಳೆಯುತ್ತಿದೆ. ಇದು ಸಂವಿಧಾನ ಮತ್ತು ಪ್ರಜಾತಂತ್ರವನ್ನೇ ಬುಡಮೇಲು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

“ಕಳೆದ ಕೆಲವು ಸಮಯದಿಂದ, ನಮ್ಮ ದೇಶವನ್ನು ಹಳಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಮುಂದೆ ಹೊಸ ಸವಾಲುಗಳು ಇದೆ. ದೇಶವು ಅಡ್ಡಹಾದಿಯಲ್ಲಿ ನಿಂತಿದೆ. ಬಡಜನ ವಿರೋಧಿ ರಾಷ್ಟ್ರ ವಿರೋಧಿ ಶಕ್ತಿಗಳು ಜನರು ಪರಸ್ಪರ ಎದುರಾಳಿಗಳಂತೆ ಆಡಲು ದ್ವೇಷವನ್ನು, ಹಿಂಸೆಯ ವಿಷವನ್ನು ಪಸರಿಸುತ್ತಿದೆ.

“ಕೆಟ್ಟ ಆಲೋಚನೆಯು ಉತ್ತಮ ಆಲೋಚನೆ ಮೇಲೆ ಮೇಲುಗೈ ಸಾಧಿಸುತ್ತಿದೆ. ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.


ಇದನ್ನೂ ಓದಿ:  ಎಎಪಿ ವಿರುದ್ಧದ ಹೋರಾಟಕ್ಕೆ ಬಿಜೆಪಿ ನನ್ನನ್ನು ಆಹ್ವಾನಿಸುವುದು ದುರಾದೃಷ್ಟಕರ: ಅಣ್ಣಾ ಹಜಾರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights