Big Shocking News : ಆಟೋದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ!
ಅಲ್ಲಿ ನಿಲ್ಲಿಸಿದ ಆಟೋ ಅತ್ತಿತ್ತ ಕದುಲಾಡದೇ ಅಲ್ಲೇ ನಿಂತಿತ್ತು. ತುಂಬಾ ಹೊತ್ತು ನೋಡಿದ ಜನ ಆಟೋ ಒಳಗಡೆ ಚಾಲಕ ಇದ್ದಾನಾ ಇಲ್ವಾ ಅಂತ ಕತ್ತು ಬಗ್ಗಿಸಿ ಕಣ್ಣಾಯಿಸಿ ನೋಡಿದಾಗ ಕಂಡಿದ್ದು ಬೆಚ್ಚಿ ಬೀಳಿಸುವಂತಹ ದೃಶ್ಯ. ಅಲ್ಲೋಬ್ಬ ವ್ಯಕ್ತಿಯ ಕತ್ತಿಗೆ ಟವೆಲ್ ಕಾಣಿಸಿಕೊಂಡಿದೆ. ಕತ್ತಿಗೆ ಟವೆಲ್ ಬಿಗಿದ ವ್ಯಕ್ತಿ ಆಟೋದಲ್ಲೇ ಮೊಣಕಾಲೂರಿದ್ದಾನೆ. ಹತ್ತರಕ್ಕೆ ಹೋಗಿ ನೋಡಿದಾಗ ಗೊತ್ತಾಗಿದ್ದು ಈ ವ್ಯಕ್ತಿ ಕುಳಳಿತುಕೊಂಡಿರಲಿಲ್ಲ. ಬದಲಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ.
ಹೌದು.. ಆಟೋದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಎಂ.ಜಿ.ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ವೈನ್ಸ್ ಮುಂಭಾಗ ನಡೆದಿದೆ.
ಹಾಸನದ ವಿವೇಕನಗರದ ಶಿವಕುಮಾರ್ (52) ಮೃತ ವ್ಯಕ್ತಿ. ಹಲವು ವರ್ಷಗಳಿಂದ ಆಟೋ ಚಾಲಕನಾಗಿದ್ದ ಶಿವಕುಮಾರ್, ಇಂದು ಮಧ್ಯಾಹ್ನ ತನ್ನ ಆಟೋದಲ್ಲೇ ನೇಣಿಗೆ ಶರಣಾಗಿದ್ದಾನೆ. ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆತ್ಮಹತ್ಯೆಗೆ ಕಾರಣ ಮಾತ್ರ ತಿಳಿದು ಬಂದಿಲ್ಲ. ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


