ಜಾರ್ಖಂಡ್ : ‘ಕರ್ಮ ಪೂಜೆ’ ವಿಸರ್ಜನೆ ವೇಳೆ ಕೊಳದಲ್ಲಿ ಮುಳುಗಿ ಏಳು ಹುಡುಗಿಯರು ಸಾವು!

‘ಕರ್ಮ ಪೂಜೆ’ ವಿಸರ್ಜನೆಯ ಸಮಯದಲ್ಲಿ ಕೊಳದಲ್ಲಿ ಮುಳುಗಿ ಏಳು ಜನ ಹುಡುಗಿಯರು ಸಾವನ್ನಪ್ಪಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಜಾರ್ಖಂಡ್‌ನ ಲತೇಹಾರ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಶುಕ್ರವಾರ ಮುಂಜಾನೆ ಬಳುಮಠ ಪೊಲೀಸ್ ಠಾಣೆ ವ್ಯಾಪ್ತಿಯ ಶೆರಘರ ಹಳ್ಳಿಯ ಹುಡುಗಿಯರು ಹತ್ತಿರದ ಕೊಳದಲ್ಲಿ ಮರದ ಕಾಂಡಗಳನ್ನು ಮುಳುಗಿಸಲು ಹೋಗಿದ್ದರು. ಈ ಸಮಯದಲ್ಲಿ ಅವರು ಆಳವಾದ ನೀರಿನಲ್ಲಿ ಸ್ನಾನ ಮಾಡುವಾಗ ಮುಳುಗಿದ್ದಾರೆ.

ಈ ವೇಳೆ ಕೆಲವು ಹುಡುಗಿಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದಗೆ ಹುಡುಗಿಯರು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಲ್ಲಿ ಏಳು ಹುಡುಗಿಯರಲ್ಲಿ ಮೂವರು ಒಡಹುಟ್ಟಿದವರಾಗಿದ್ದಾರೆ.

ಮೃತರನ್ನು 12 ರಿಂದ 20 ವರ್ಷದೊಳಗಿನ ರೇಖಾ ಕುಮಾರಿ (18), ಲಕ್ಷ್ಮಿ ಕುಮಾರಿ (8), ರೀನಾ ಕುಮಾರಿ (11), ಮೀನಾ ಕುಮಾರಿ (8), ಪಿಂಕಿ ಕುಮಾರಿ (15), ಸುಷ್ಮಾ ಕುಮಾರಿ (7) ಮತ್ತು ಸುನಿತಾ ಕುಮಾರಿ (17) ಎಂದು ಗುರುತಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.