ವ್ಯಕ್ತಿಗೆ ಕಚ್ಚಲು ವೇಗವಾಗಿ ಹಿಂಬಾಲಿಸಿದ ಹಾವು : ಭಯಾನಕ ವಿಡಿಯೋ ವೈರಲ್!
ಇತ್ತೀಚಿಗೆ ಹಾವುಗಳು ಮನುಷ್ಯರನ್ನು ಕಚ್ಚಲು ಮುಂದಾಗುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಭೀತಿ ಹುಟ್ಟಿಸಿವೆ. ಇಂಥದ್ದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವ್ಯಕ್ತಿಗೆ ಕಚ್ಚಲು ವೇಗವಾಗಿ ಹಿಂಬಾಲಿಸುವ ಹಾವಿನ ಭಯಾನಕ ವಿಡಿಯೋ ನೋಡುಗರನ್ನ ಬೆಚ್ಚಿ ಬೀಳಿಸಿದೆ. ಈ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್ ಆಗಿದೆ.
ಹೌದು.. ನೋಡನೋಡುತ್ತಿದ್ದಂತೆ ಹಾರಿದ ಹಾವೊಂದು ವ್ಯಕ್ತಿ ಓಡಿ ಹೋದರೂ ಅವನಿಂದೆ ಕಚ್ಚಲು ಹಿಂಬಾಲಿಸುವ ದೃಶ್ಯವೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಥೈಲ್ಯಾಂಡ್‌ನ ಮನೆಯ ಒಳಾಂಗಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕ್ಕ ಹುಲ್ಲುಹಾಸು ಒಳಾಂಗಣದಲ್ಲಿ ಇಟ್ಟ ಡೈನಿಂಗ್ ಟೇಬಲ್ ಮತ್ತು ಎರಡು ಕುರ್ಚಿಗಳ ಬಳಿ ಕೆಂಪು ಶರ್ಟ್ ಧರಿಸಿದ ವ್ಯಕ್ತಿಯೋರ್ವ ಆಗಮಿಸುತ್ತಾನೆ. ಈ ವೇಳೆ ಎಡಭಾಗದಿಂದ ಹೊರಬಂದ ಹಾವನ್ನು ಕಂಡು ಗಾಬರಿಗೊಂಡ ವ್ಯಕ್ತಿ ತಕ್ಷಣ ಓಡಿ ಹೋಗುತ್ತಾನೆ. ಅದೇ ವೇಗದಲ್ಲಿ ಹಾರಿದ ಹಾವು ಅವನನ್ನು ಹಿಂಬಾಲಿಸಿ ಹಚ್ಚಲು ಪ್ರಯತ್ನಿಸುತ್ತದೆ. ಆದರೆ ಅದೃಷ್ಟವಶಾತ್ ವ್ಯಕ್ತಿ ಹಾವು ಕಚ್ಚುವುದರಿಂದ ತಪ್ಪಿಸಿಕೊಳ್ಳುತ್ತಾನೆ. ಹಾವು ಕೂಡ ಕಣ್ಮರೆಯಾಗುತ್ತದೆ.