ಅಮೇರಿಕಾದ ಟೆಕ್ಸಾಸ್ನಲ್ಲಿ ಸರಣಿ ಅಪಘಾತ : 5 ಜನ ಸಾವು – ದೃಶ್ಯ ಕಂಡು ಬೆಚ್ಚಿಬಿದ್ದ ಜನ!

ಅಮೇರಿಕಾದ ಟೆಕ್ಸಾಸ್ ನಲ್ಲಿ 75 ರಿಂದ 100 ವಾಹನಗಳ ಸರಣಿ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಗುರುವಾರ ಬೆಳಿಗ್ಗೆ ಒಂದಾದ ಮೇಲೊಂದರಂತೆ ಸುಮಾರು ನೂರು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.  ಚಳಿಗಾಲದ ಚಂಡಮಾರುತದಿಂದ ಯುಎಸ್ನ ಕೆಲವು ಭಾಗಗಳಲ್ಲಿ ಮಳೆ, ಹಿಮಪಾತವಾಗುತ್ತಿದೆ. ಇದರ ಪರಿಣಾಮ ರಸ್ತೆ ಸರಿಯಾದ ಕಾಣಿಸಿದೇ ಈ ಅಪಘಾತ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಯುಸ್ ವೆಬ್‌ಸೈಟ್ ಪ್ರಕಾರ, ಗುರುವಾರ ಬೆಳಿಗ್ಗೆ 125,000 ಕ್ಕೂ ಹೆಚ್ಚು ಮನೆಗಳು ಮತ್ತು ಅಂಗಡಿಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.

ಘಟನೆ ಬಳಿಕ 50ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಜನರಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಈ ಸಂಬಂಧ ಫೋರ್ಟ್ ವರ್ತ್ ಮೇಯರ್ ಬೆಟ್ಸಿ ಪ್ರೈಸ್ ಟ್ವೀಟ್ ಮಾಡಿದ್ದು, “ಇವತ್ತಿನ ಅಪಘಾತದಿಂದ ಆಗಿರುವ ನಷ್ಟವನ್ನ ಅಂದಾಜು ಮಾಡುತ್ತಿರುವಂತೆಯೇ ನಮ್ಮ ಸಮುದಾಯಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ. ನಮ್ಮ ಸಮುದಾಯವು ನೆರವಿನ ಹಸ್ತ ಚಾಚಲು ಬಯಸುತ್ತಿದೆ. ಯಾವ ರೀತಿ ಸಹಾಯ ಮಾಡಬಹುದು ಎಂದು ನಿಮ್ಮಲ್ಲಿ ಹಲವರು ಕೇಳುತ್ತಿದ್ದಾರೆ” ಎಂದಿದ್ದಾರೆ. ಹಾಗೆಯೇ, “ಸದ್ಯಕ್ಕೆ ಅಪಘಾತಗೊಂಡವರು, ಅವರ ಕುಟುಂಬದವರಿಗೆ ನಿಮ್ಮ ಪ್ರಾರ್ಥನೆ ಅಗತ್ಯ ಇದೆ” ಎಂದೂ ಅವರು ಟ್ವೀಟ್ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights