FACT CHECK | ಚುನಾವಣಾ ಬಾಂಡ್ ಕಲಾಪದ ಮಧ್ಯದಲ್ಲಿಯೇ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸುಪ್ರಿಂ ಕೋರ್ಟ್‌ನಿಂದ ಹೊರನಡೆದರೇ?

ಚುನಾವಣಾ ಬಾಂಡ್ ಕುರಿತ ಮಾಹಿತಿಯನ್ನು ಮಾರ್ಚ್ 12ರೊಳಗೆ ಚುನಾವಣಾ ಆಯೋಗಕ್ಕೆ ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಇದಕ್ಕೆ ಜೂನ್ 30ರವರೆಗೂ ಸಮಯ ಕೋರಿದ್ದ ಎಸ್‌ಬಿಐ ಮನವಿಯನ್ನು ತಳ್ಳಿ ಹಾಕಿದ್ದ ಸುಪ್ರೀಂ ಕೋರ್ಟ್, ಸೂಚಿಸಿದ ದಿನಾಂಕದಂದೇ ನೀಡುವಂತೆ ತಾಕೀತು ಮಾಡಿತ್ತು. ಅದರಂತೆಯೇ ಎಸ್‌ಬಿಐ ಮಾರ್ಚ್ 12ರಂದು ಮಾಹಿತಿ ನೀಡಿದೆ. ಆ ಮಾಹಿತಿಯನ್ನು ಚುನಾವಣಾ ಆಯೋಗವು ತಮ್ಮ ಅಂತರ್ಜಾಲ ಪುಟದಲ್ಲಿ ಪ್ರಕಟಿಸಿದೆ.

ಚುನಾವಣಾ ಬಾಂಡ್‌ ಕುರಿತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುತ್ತಿದ್ದ ಸಂದರ್ಭದ ವಿಚಾರಣೆ ಮಧ್ಯದಲ್ಲಿಯೇ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್, ನ್ಯಾಯಾಲಯದಿಂದ ಹೊರನಡೆದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸಿಜೆಐ ಡಿವೈ ಚಂದ್ರಚೂಡ್ ಭಾರತ ಸರ್ಕಾರಕ್ಕೆ ಮಾಡಿದ ಘೋರ ಅವಮಾನ, ಚಂದ್ರಚೂಡ್ ಸೇರಿದಂತೆ ಎಲ್ಲಾ ನ್ಯಾಯಾದೀಶರು ರಾಜೀನಾಮೆ ನೀಡವಂತೆ ಭಾರತದ ರಾಷ್ಟ್ರಪತಿಗಳು ಒತ್ತಾಯಿಸಬೇಕು, ಸ್ವಲ್ಪವೂ ಸೌಜನ್ಯವಿಲ್ಲದ ದುರಹಾಂಕಾರಿ ವ್ಯಕ್ತಿ ಚಂದ್ರಚೂಡ್. ಅವರು ಮತ್ತು ಇತರ ನ್ಯಾಯಾಧೀಶರು ಭಾರತ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ನ್ಯಾಯಾಧೀಶರ ಈ ವರ್ತನೆಯ ಹಿಂದಿನ ಕಾರಣಗಳನ್ನು ಪಟ್ಟಿ ಮಾಡುವ ಥ್ರೆಡ್ ಅನ್ನು ನಾನು ಶೀಘ್ರದಲ್ಲೇ ಪೋಸ್ಟ್ ಮಾಡುತ್ತೇನೆ, ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಸುಪ್ರಿಂ ಕೋರ್ಟ್‌ನಲ್ಲಿ ವಾದ ನಡೆಯುತ್ತಿದ್ದ ವೇಳೆ ಸಿಜೆಐ ಅಥವಾ ಇತರ ಯಾವುದೇ ನ್ಯಾಯಾಧೀಶರು ತಮ್ಮ ಕುರ್ಚಿಯಿಂದ ಎದ್ದೇಳುವುದಿಲ್ಲ, ಆದರೆ ಕುರ್ಚಿಯನ್ನು ಸಿಪಡಿಸಿಕೊಳ್ಳಲು ಪ್ರಯತ್ನಿಸುವುದನ್ನು ಕಾಣಬಹುದು.

ಟ್ವೀಟ್ ಗೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದಾಗ, ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಂಡಿರುವುದು ಕಂಡುಬಂದಿದೆ.  ಬಳಕೆದಾರರ ಪ್ರಕಾರ, ಸಿಜೆಐ ಅವರು ತಮ್ಮ ಕುರ್ಚಿಯನ್ನು ಸರಿಪಡಿಸಿಕೊಂಡು ಮತ್ತೆ ಆಸೀನರಾದ ನಂತರವೂ 20 ನಿಮಿಷಗಳ ಕಾಲ ವಿವಾರಣೆಯಲ್ಲಿ ಭಾಗವಹಿಸುತ್ತಾರೆ.

ಮಾರ್ಚ್ 18, 2024 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಅಧಿಕೃತ ಖಾತೆಯಿಂದ ಲೈವ್-ಸ್ಟ್ರೀಮ್ ಮಾಡಲಾದ ಯುಟ್ಯೂಬ್‌ನ ವಿಡಿಯೋದಲ್ಲಿ ವಿಚಾರಣೆಯ  ದೃರ್ಶಯಗಳು ಲಭ್ಯವಾಗಿದೆ. CJI ಚಂದ್ರಚೂಡ್ ವಿಚಾರಣೆ ಮಧ್ಯದಲ್ಲಿ ತಮ್ಮ ಕುರ್ಚಿಯನ್ನು ಸರಿಪಡಿಸಿಕೊಂಡು ವಿಚಾರಣೆಯನ್ನು ಮುಂದುವರೆಸುವುದನ್ನು ನೋಡಬಹುದು. ಇತರೆ ಯಾವು ನ್ಯಾಯಾಧೀಶರು ಕೂಡ ಹೊರೆನಡೆದಿಲ್ಲ ಎಬುದು ಸ್ಪಷ್ಟವಾಗಿದೆ.

ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸೋಮವಾರ ಪ್ರಕರಣವನ್ನು ವಿಚಾರಣೆ ನಡೆಸಿತು. ಮಾರ್ಚ್ 21 ರೊಳಗೆ ಚುನಾವಣಾ ಬಾಂಡ್‌ಗಳ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳ “ಸಂಪೂರ್ಣ ಬಹಿರಂಗಪಡಿಸಬೇಕು ಎಂದು ಎಸ್‌ಬಿಐಗೆ ಸುಪ್ರಿಂ ಕೋರ್ಟ್ ಸೂಚಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ವಾದ ನಡೆಯುವಾಗ ಮಧ್ಯದಲ್ಲಿಯೇ ಹೊರನಡೆದಿದ್ದಾರೆ, ಅವರೊಂದಿಗೆ ಇತರೆ ನ್ಯಾಯಾಧೀಶರು ಹೊರಹೋಗಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ಚುನಾವಣಾ ಬಾಂಡ್ ಕಲಾಪದ ಮಧ್ಯದಲ್ಲಿಯೇ ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಸುಪ್ರಿಂ ಕೋರ್ಟ್‌ನಿಂದ ಹೊರನಡೆದರೇ?

  • March 20, 2024 at 6:38 pm
    Permalink

    This is the gimmick being played by godi media all the time and spreading wrong messages with character assassination etc , is usual play. No one to control the Godhi media in India.

    Reply

Leave a Reply

Your email address will not be published.

Verified by MonsterInsights