ಬೆಂಗಳೂರಿಗೆ ಬಂದೊದಗಿದೆ ಮತ್ತೊಂದು ಸಂಕಟ; ಚಿತಾಗಾರಗಳ ಮುಂದೆಯೂ ಕ್ಯೂನಿಂತ ಜನ

ಕೊರೊನಾದಿಂದ ಇಡೀ ಜಗತ್ತೇ ತತ್ತರಿಸಿಹೋಗಿದೆ. ಕೊರೊನಾ ಸೋಂಕು ಕೇವಲ ಆರೋಗ್ಯದಲ್ಲಷ್ಟೇ ಅಲ್ಲದೆ, ಆರ್ಥಿಕತೆ, ದೈನಂದಿನ ಚಟುವಟಿಕೆ, ಸಾಮಾಜಿಕ ಸಮಾರಂಭಗಳಿಗೂ ಅವಕಾಶವಿಲ್ಲದಂತಾಗಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಕೊರೊನಾ ತಂದೊಡ್ಡಿರುವ ದುಸ್ಥಿತಿ ಅಂತಿಂತದ್ದಲ್ಲ… ಬೆಂಗಳೂರಿಗೆ ಎಂಥಾ ಗತಿ ಬಂದಿದೆ ಅಂದ್ರೆ, ಇದನ್ನ ಕನಿಸಿನಲ್ಲೂ ಯಾರೂ ಊಹಿಸೋಕೂ ಸಾಧ್ಯವಿಲ್ಲ.

ಯೆಸ್, ಒಂದು ಕೋಟಿಗೂ ಮೀರಿರುವ ಬೆಂಗಳೂರಿನ ಜನಸಂಖ್ಯೆಯಲ್ಲಿ ಸಾವಿನ ಪ್ರಮಾಣವೂ ಅಷ್ಟೇ ಹೆಚ್ಚಾಗಿಯೇ ಇದೆ. ಅದರಲ್ಲೂ ಇತ್ತೀಚೆಗೆ ಕೊರೊನಾ ಸಾವಿನ ಸಂಖ್ಯೆಯೂ ಅತ್ಯಧಿಕವಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾದಂತೆ ಅಂತ್ಯಸಂಸ್ಕಾರಕ್ಕೂ ಪರದಾಡುವಂತಾಗಿದೆ. ಶವಸಂಸ್ಕಾರಕ್ಕಾಗಿ ಚಿತಾಗಾರಗಳ ಮುಂದೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಬಹುತೇಕ ಶವಾಗಾರಗಳ ಮುಂದೆ ಸಾವಿನ್ನಪ್ಪಿದವರ ಸಂಬಂಧಿಕರು ಕ್ಯೂ ನಿಲ್ಲವಂತಾಗಿದ್ದು, ಇದೂ ಕೂಡ ಈಗ ಸರ್ವೇಸಾಮಾನ್ಯವಾಗಿ ಹೋಗಿದೆ.

ಮೃತ ದೇಹಗಳನ್ನ ಕೆಳಗಿಳಿಸಲು ಆ್ಯಂಬುಲೆನ್ಸ್‌ಗಳು ಶವಾಗಾರಗಳ ಮುಂದೆ ಸಾಲು ಸಾಲಾಗಿ ನಿಂತಿವೆ. ಹೆಬ್ಬಳಾ, ಚಾಮರಾಜಪೇಟೆ, ವಿಲ್ಸನ್ ಗಾರ್ಡನ್, ಬನಶಂಕರಿ, ಸುಮನಹಳ್ಳಿ ಚಿತಾಗಾರಗಳ ಮುಂದೆ ಹೆಣಗಾಟ ಶುರುವಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಇಂದಿನ ಪರಿಸ್ಥಿತಿಯಲ್ಲಿಗಂಟೆಗೆ 3 ಜನರ ಸರಾಸರಿಯಲ್ಲಿ ಬೆಂಗಳೂರಿನಲ್ಲಿ ಕೊರೊನಾದಿಂದ ಸಾವಿಗೀಡಾಗುತ್ತಿದ್ದಾರೆ. ಸರ್ಕಾರ ಎಷ್ಟೇ ಸುರಕ್ಷತಾ ಕ್ರಮಗಳನ್ನ ಕೈಗೊಂಡರೂ ಏನೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಜನಜೀವನ ರಾಜಧಾನಿಯಲ್ಲಿ ಜನಜೀವನ ದುಸ್ಥರವಾಗಿಹೋಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights