FACT CHECK | ಹರಿಯಾಣ ಕಾಂಗ್ರೆಸ್ ನಾಯಕಿ ಹಿಮಾನಿ ನರ್ವಾಲ್ ಕೊಲೆ ಮಾಡಿದ್ದು ಮುಸ್ಲಿಂ ವ್ಯಕ್ತಿಯಲ್ಲ! ಮತ್ತ್ಯಾರು?

ಹರಿಯಾಣ ಕಾಂಗ್ರೆಸ್ ನಾಯಕಿ ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೋಮು ಹಿನ್ನಲೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್ ಬಳಕೆದಾರ ‘ನಿಶಾಂತ್ ಜೋಶಿ’ ಮಾರ್ಚ್ 3 ರಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದು “23 ವರ್ಷದ ಹಿಮಾನಿ ನರ್ವಾಲ್ ಹರಿಯಾಣದ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದರು, ಅವರನ್ನು ಕಾಂಗ್ರೆಸ್ಸಿಗ ಅಬ್ದುಲ್ ಎಂಬುವವರು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿದ್ದರು ಎಂದು ಬರೆದುಕೊಂಡು ಈ ಚಿತ್ರಗಳನ್ನು (ಆರ್ಕೈವ್ ಲಿಂಕ್)  ಹಂಚಿಕೊಂಡಿದ್ದಾರೆ.

ಇದರಲ್ಲಿ ಎರಡು ಚಿತ್ರಗಳನ್ನು ಪೋಸ್ಟ್ ಮಾಡಲಾಗಿದ್ದು, ಹಿಮಾನಿ ನರ್ವಾಲ್ ಅವರನ್ನು ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಫೋಟೋಗಳಲ್ಲಿ ಒಂದು ಹಿಮಾನಿಯದ್ದಾಗಿದ್ದರೆ, ಇನ್ನೊಂದು ಫೋಟೋ ಸೂಟ್‌ಕೇಸ್‌ನದ್ದಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ್ನು ಪರಿಶೀಲಿಸಲು ಗೂಗಲ್ ಲೆನ್ಸ್‌ ಮೂಲಕ ಸರ್ಚ್ ಮಾಡಿದಾಗ,  ವೆಬ್‌ಸೈಟ್‌ವೊಂದರಲ್ಲಿ, ಮೊದಲ ಫೋಟೋ ಹಿಮಾನಿಯದ್ದಾಗಿದ್ದು, ಎರಡನೆಯ ಫೋಟೋ ಕೊಲೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.

vishvasnews

ಮತ್ತಷಟು ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಮಾರ್ಚ್ 4 ರ ದೈನಿಕ್ ಜಾಗರಣ್ ಆವೃತ್ತಿ ಲಭ್ಯವಾಗಿದ್ದು,  ಅದರಲ್ಲಿ ಹಿಮಾನಿ ಕೊಲೆ ಪ್ರಕರಣದ ಸುದ್ದಿ ಪ್ರಕಟವಾಗಿದೆ. ಇದರ ಪ್ರಕಾರ, “ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಹಿಮಾನಿ ರಾಹುಲ್ ಗಾಂಧಿಯವರ ಕೈ ಹಿಡಿದು ನಡೆದರು, ಇದರಿಂದಾಗಿ ಅವರು ಸುದ್ದಿಗೆ ಬಂದರು. ಆಕೆಯ ಕೊಲೆಯ ಆರೋಪದ ಮೇಲೆ ಪೊಲೀಸರು ಯಾವ ಕಾಂಗ್ರೆಸ್ ಕಾರ್ಯಕರ್ತರನ್ನೂ ಬಂಧಿಸಲಿಲ್ಲ, ಬದಲಾಗಿ ಆತನ ಸ್ನೇಹಿತ ಸಚಿನ್‌ನನ್ನು ಬಂಧಿಸಿದ್ದಾರೆ. ರೋಹ್ಟಕ್ ಪೊಲೀಸರು ಜಜ್ಜರ್ ಜಿಲ್ಲೆಯ ಖೈರ್‌ಪುರ ಗ್ರಾಮದ ನಿವಾಸಿ ಸಚಿನ್ ಅವರನ್ನು ದೆಹಲಿಯ ಮುಂಡ್ಕಾದಿಂದ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಹಣದ ವ್ಯವಹಾರಕ್ಕೆ ಸಂಬಂಧಿಸಿದ ಜಗಳದಲ್ಲಿ ಹಿಮಾನಿ ಕೊಲೆಯಾಗಿದ್ದಾರೆ. ಸಚಿನ್‌ರನ್ನು ಮೂರು ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ರಸ್ತೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸಚಿನ್ ಸೂಟ್‌ಕೇಸ್ ಅನ್ನು ಹೊತ್ತುಕೊಂಡು ಹೋಗುತ್ತಿರುವುದು ಸೆರೆಯಾಗಿದೆ.

Himani Narwal Murder Case viral with communal angle

ಹಿಮಾನಿ ನರ್ವಾಲ್ ಕೊಲೆ ಪ್ರಕರಣ ಕೋಮು ಹಿನ್ನಲೆಯಲ್ಲಿ ವೈರಲ್ ಆಗಿದೆ. ಮಾರ್ಚ್ 3 ರಂದು ಅಮರ್ ಉಜಾಲಾ ಅವರ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಪೊಲೀಸರು ಹಿಮಾನಿಯ ಮೊಬೈಲ್ ಮತ್ತು ಆಕೆಯ ಆಭರಣಗಳನ್ನು ಸಚಿನ್‌ನಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಯು ಹಿಮಾನಿ ಜೊತೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದನು. ಸಾಮಾಜಿಕ ಮಾಧ್ಯಮದ ಮೂಲಕ ಇಬ್ಬರನ್ನೂ ಗುರುತಿಸಲಾಯಿತು. ಮಾರ್ಚ್ 1 ರಂದು ರೋಹ್ಟಕ್‌ನ ಸಂಪ್ಲಾದ ಬಸ್ ನಿಲ್ದಾಣದಲ್ಲಿ ಸೂಟ್‌ಕೇಸ್‌ನಲ್ಲಿ ಹಿಮಾನಿಯ ಶವ ಪತ್ತೆಯಾಗಿತ್ತು.

Himani Narwal Murder Case viral with communal angle

ಈ ಬಗ್ಗೆ ರೋಹ್ಟಕ್‌ನಲ್ಲಿರುವ ದೈನಿಕ್ ಜಾಗರಣ್ ವರದಿಗಾರ ಒ.ಪಿ. ವಶಿಷ್ಠ್, ಹಿಮಾನಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಯ ಹೆಸರು ಸಚಿನ್ ಎಂದು ಹೇಳಿದ್ದು, ಇದರಲ್ಲಿ ಯಾವುದೇ ಕೋಮು ದ್ವೇಷದ ಹಿನ್ನಲೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಹರಿಯಾಣ ಕಾಂಗ್ರೆಸ್ ನಾಯಕಿ ಹಿಮಾನಿ ನರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಮಾಡಿದ ವ್ಯಕ್ತಿ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ಇದು ಜನರನ್ನು ದಾರಿತಪ್ಪಿಸುವಂತಿದೆ. ಹಿಮಾನಿ ನರ್ವಾಲ್‌ರನ್ನು ಕೊಲೆ ಮಾಡಿದ್ದು ಆಕೆಯ ಸ್ನೇಹಿತ ಸಚಿನ್ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಕ್ರಮ ವಲಸಿಗರನ್ನು ಅಮೆರಿಕದ ಗಡಿ ನಿಯಂತ್ರಣ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights