FACT CHECK | ಅಕ್ರಮ ವಲಸಿಗರನ್ನು ಅಮೆರಿಕದ ಗಡಿ ನಿಯಂತ್ರಣ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೊದಲ ತಿಂಗಳಲ್ಲೇ 20 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಟ್ರಂಪ್ ಆಡಳಿತ ಅಧಿಕಾರಕ್ಕೆ ಬಂದ ಕೂಡಲೇ ಅಕ್ರಮ ವಲಸೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವೀಡಿಯೊಗೆ ಸಂಬಂಧಿಸಿದಂತೆ, ಅಮೆರಿಕದ ಗಡಿ ನಿಯಂತ್ರಣ ಘಟಕವು ಅಕ್ರಮ ವಲಸಿಗರನ್ನು ತಡೆಯುವಲ್ಲಿ ನಿರತವಾಗಿದೆ ಎಂದು ಹೇಳಲಾಗುತ್ತಿದೆ.
US Border Control trying to stop illegal migrants pic.twitter.com/wZSVj2PENa
— Kreately.in (@KreatelyMedia) February 27, 2025
ವೈರಲ್ ವೀಡಿಯೊದ ಮೊದಲ ಭಾಗದಲ್ಲಿ, ಒಬ್ಬ ಭದ್ರತಾ ಸಿಬ್ಬಂದಿ ಮಲಗಿರುವ ವ್ಯಕ್ತಿಯನ್ನು ಹಿಡಿದಿದ್ದಾರೆ. ಆದರೆ, ಇನ್ನೊಂದು ಭಾಗದಲ್ಲಿ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ವೀಡಿಯೊವನ್ನು ಹಂಚಿಕೊಳ್ಳುವಾಗ, ಕ್ರಿಯೇಟ್ಲಿ ಹೆಸರಿನ X (ಟ್ವಿಟರ್) ಹ್ಯಾಂಡಲ್, ‘ಅಕ್ರಮ ವಲಸಿಗರನ್ನು ತಡೆಯಲು ಪ್ರಯತ್ನಿಸುತ್ತಿರುವ ಅಮೇರಿಕನ್ ಗಡಿ ನಿಯಂತ್ರಣ’ ಎಂದು ಬರೆದಿದೆ. ಪೋಸ್ಟ್ ನೋಡಿ-
Border Patrol is doing a solid job catching encounters in California. pic.twitter.com/0dEakbKPwf
— Ian Miles Cheong (@stillgray) February 27, 2025
ಇದೇ ವಿಡಿಯೋವನ್ನು, ಇಯಾನ್ ಮೈಲ್ಸ್ ಚಿಯೋಂಗ್, ಮಾರಿಯೋ ನೌಫಲ್ ಮತ್ತು ಕುಮಾರ್ ಎಕ್ಸ್ಕ್ಲೂಸಿವ್ ಹೆಸರಿನ ಹ್ಯಾಂಡಲ್ಗಳಲ್ಲಿ ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು, ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, ಕೆಲವು ಸುದ್ದಿ ವರದಿಗಳು ಲಭ್ಯವಾಗಿವೆ. ಅದರ ಪ್ರಕಾರ ಈ ವಿಡಿಯೋ ಸುಮಾರು ಎರಡೂವರೆ ವರ್ಷ ಹಳೆಯದು. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ವಲಸಿಗರು ಮತ್ತು ಯುಎಸ್ ಬಾರ್ಡರ್ ಅಧಿಕಾರಿಗಳ ನಡುವೆ ನಡೆದ ಸಂಘರ್ಷದ ಸಮಯದಲ್ಲಿ ಟಿಕ್ಟಾಕರ್ ಒಬ್ಬರು ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ವರದಿಗಳು ಸ್ಪಷ್ಟಪಡಿಸಿವೆ.
ಆಗಸ್ಟ್ 23, 2022 ರ ಡೈಲಿ ಮೇಲ್ ಸುದ್ದಿಯ ಪ್ರಕಾರ, ಇಬ್ಬರು ವಲಸಿಗರು ಯುಎಸ್-ಮೆಕ್ಸಿಕೊ ಗಡಿಯನ್ನು ದಾಟಿ ಕ್ಯಾಲಿಫೋರ್ನಿಯಾ ಕರಾವಳಿಗೆ ಅಕ್ರಮವಾಗಿ ಬಂದಿದ್ದಾರೆ. ಆ ಸಮಯದಲ್ಲಿ ಟಿಕ್ಟೋಕರ್ ಆತನ ಬಂಧನದ ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ, ವಲಸಿಗರೊಬ್ಬರನ್ನು ನೆಲಕ್ಕುರಿಳಿಸಿ, ಕೈಗಳನ್ನು ಲಾಕ್ ಮಾಡಿರುವುನ್ನು ಕಾಣಬಹುದು. ಅದೇ ಸಮಯದಲ್ಲಿ, ಮತ್ತೊಬ್ಬ ನುಸುಳುಕೋರ ಅಮೇರಿಕನ್ ಬಾರ್ಡರ್ ಪೆಟ್ರೋಲ್ ಅಧಿಕಾರಿಯ ಮೇಲೆ ಹಲ್ಲೆ ನಡೆಸುವುದನ್ನು ನೋಡಬಹುದು.

ಅಧಿಕಾರಿಯೊಂದಿಗೆ ಜಗಳಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಅಧಿಕಾರಿ ಆತನ ಮೇಲೆ ಲಾಠಿ ಪ್ರಹಾರ ಮಾಡುತ್ತಾರೆ. ಗಡಿಯ ಮೆಕ್ಸಿಕನ್ ಕಡೆಯಿಂದ ಜನರು ಉತ್ಸಾಹದಿಂದ ಕೂಗುತ್ತಿದ್ದಾರೆ. ಇನ್ನೊಬ್ಬ ಅಧಿಕಾರಿ ತನ್ನ ಸಹೋದ್ಯೋಗಿಗೆ ಸಹಾಯ ಮಾಡಲು ಬರುತ್ತಾನೆ. ನಂತರ ಮೂರನೇ ಅಧಿಕಾರಿ ಓಡಿ ಬಂದು ವಲಸಿಗನನ್ನು ಮರಳಿನ ಮೇಲೆ ಎಸೆದು ಬಂಧಿಸುತ್ತಾನೆ.
24 ಆಗಸ್ಟ್ 2022 ರ ಸುದ್ದಿ ವೆಬ್ಸೈಟ್ THE NATION ನ ಸುದ್ದಿಯಲ್ಲಿ ವೀಡಿಯೊಗೆ ಸಂಬಂಧಿಸಿದ ಅದೇ ಸುದ್ದಿಯನ್ನು ನಾವು ಪಡೆದುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ಅಕ್ರಮ ವಲಸಿಗರನ್ನು ತಡೆಯಲು ಅಮೆರಿಕದ ಗಡಿ ನಿಯಂತ್ರಣ ಪಡೆ ಪ್ರಯತ್ನಿಸುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗತ್ತಿದ್ದು, ಈ ವಿಡಿಯೋ ಎರಡೂವರೆ ವರ್ಷಗಳಷ್ಟು ಹಳೆಯದು ಎಂದು ತಿಳಿದುಬಂದಿದೆ. ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ವಲಸಿಗರನ್ನು ಅಧಿಕಾರಿಗಳು ತಡೆಯಲು ಪ್ರಯತ್ನಿಸುತ್ತಿರುವಾಗ ಟಿಕ್ಟೋಕರ್ ಈ ವೀಡಿಯೊವನ್ನು ಮಾಡಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ENG-AFG ICC ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ವಿಷಕಾರಿ ಹಾವೊಂದು ಕಾಣಿಸಿಕೊಂಡಿದ್ದು ನಿಜವೇ?

