ಮತದಾರ ಪಟ್ಟಿಯಿಂದ 20 ಕ್ಕೂ ಅಧಿಕ ಮತದಾರರ ಹೆಸರು ನಾಪತ್ತೆ…!

ಮತದಾರ ಪಟ್ಟಿಯಿಂದಲೇ 20 ಕ್ಕೂ ಅಧಿಕ ಮತದಾರರ ಹೆಸರು ನಾಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಸತ್ತಿ ಗ್ರಾಮದಲ್ಲಿ ನಡೆದಿದೆ.

ಹೌದು… ಅಥಣಿ ಮತಕ್ಷೇತ್ರದ ಸತ್ತಿ ಗ್ರಾಮದಲ್ಲಿ ಇಂದು ಮತದಾನ ಪ್ರಕ್ರಿಯೆಯಲ್ಲಿ 20ಕ್ಕೂ ಹೆಚ್ಚು ಮತದಾರರ ಹೆಸರು ನಾಪತ್ತೆಯಾಗಿದೆ. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿಯನ್ನು ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಲ್ಲದೇ ಕಳೆದ ಲೋಕಸಭೆ ಚುನಾವಣೆಯಲ್ಲು ಮತದಾರ ಪಟ್ಟಿಯಲ್ಲಿ ಹೆಸರು ಡಿಲಿಟ್ ಆಗಿದ್ದವು. ಅಂದೂ ಕೂಡ ಮತದಾನದಿಂದ ವಂಚಿತರಾಗಿದ್ದ ದರೆಪ್ಪ ಕಡೋಲಿ ಸೇರಿ 20 ಕ್ಕೂ ಹೆಚ್ಚು ಮತದಾರರಿಗೆ ಗ್ರಾಮ ಲೆಕ್ಕಿಗ ಟೆಕ್ನಿಕಲ್ ಸಮಸ್ಯೆಯಿಂದಾಗಿ ಡಿಲಿಟ್ ಆಗಿದೆ ಸರಿ ಮಾಡಿ ಕೊಡ್ತೀನಿ ಎಂದಿದ್ದ.  ಈಗ ನಾನು ಹೊಸದಾಗಿ ಬಂದಿನಿ ನಂಗೆ ಗೊತ್ತಿಲ್ಲ ಎನ್ನುತ್ತಿರುವ ಗ್ರಾಮ ಲೆಕ್ಕಿಗ ಗೋಪಾಲ. ಹೀಗಾಗಿ ಆಕ್ರೋಶಗೊಂಡ ಮತದಾರರು ಗ್ರಾಮ ಲೆಕ್ಕಿಗ ಗೋಪಾಲನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights