Fact Check: ಯುವತಿಯ ಬರ್ತಡೇ ಕೇಕ್‌ನಲ್ಲಿ ಮಾದಕವನ್ನು ಬೆರೆಸುವ ವಿಡಿಯೋ ನೈಜ ಘಟನೆಯಲ್ಲ!

ಯುವಕರ ಗುಂಪೊಂದು ಯುವತಿಯ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ಹೊರತಾಗಿ ಇನ್ನೂ ಒಬ್ಬ ಮಹಿಳೆ ವಿಡಿಯೋದಲ್ಲಿದ್ದಾರೆ. ಯುವಕರು ಬರ್ತಡೇ ಕೇಕ್ ಮೇಲೆ ಮಾದಕ ವಸ್ತುವನ್ನು ಹಾಕುವುದನ್ನು ವಿಡಿಯೋ ತೋರಿಸುತ್ತದೆ. ಇದರಿಂದ ಯುವತಿಯರು ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಇದು”ಬಿವೇರ್ ಆಫ್ ಜಿಹಾದಿ” ಎಂದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ವಿಡಿಯೋವನ್ನು ಬಳಸಿಕೊಳ್ಳಲಾಗುತ್ತಿದೆ.

ಯುವತಿಯರು ತಿನ್ನುವ ಕೇಕ್‌ ಮೇಲೆ ಮಾದಕ ದ್ರವ್ಯ ಸೇವಿಸಿದ ಯುವಕರು ಮುಸ್ಲಿಂ ಸಮುದಾಯದವರು ಎಂದು ಆರೋಪಿಸಿ ವಿಡಿಯೋವನ್ನು ಹಲವಾರು ಜನರು ಹಂಚಿಕೊಂಡಿದ್ದಾರೆ. ಹಲವಾರು ಫೇಸ್‌ಬುಕ್ ಬಳಕೆದಾರರು ಕೂಡ ಇದನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಸಾಧನವಾದ CrowdTangle ಅನ್ನು ಬಳಸಿಕೊಂಡು, ಸಾವಿರಾರು ಸದಸ್ಯರನ್ನು ಹೊಂದಿರುವ ಹಲವಾರು ಫೇಸ್‌ಬುಕ್‌ ಗುಂಪುಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ – ‘ಸುದರ್ಶನ್ ನ್ಯೂಸ್‘ [1 ಲಕ್ಷಕ್ಕೂ ಹೆಚ್ಚು ಸದಸ್ಯರು], ‘ಶ್ರೀ. ಸೋನಮ್ ವಾಂಗ್ಚುಕ್‘ [70,000 ಕ್ಕೂ ಹೆಚ್ಚು ಸದಸ್ಯರು]; ಮತ್ತು ‘ಬೆಂಗಾಲ್ ಟೈಗರ್ ನೆಕ್ಸ್ಟ್ ಸಿಎಂ ಆಫ್ ಬೆಂಗಾಲ್ (ಸುವೆಂದು ಅಧಿಕಾರಿ)’ [18,000 ಸದಸ್ಯರು] ಎಂಬ ಗುಂಪುಗಳು ಸೇರಿದಂತೆ ಹಲವಾರು ಗುಂಪುಗಳಲ್ಲಿ ಈ ವಿಡಿಯೋವನ್ನು ಮುಸ್ಲಿಮರನ್ನು ದೂರುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಮುಸ್ಲಿಂ ವಿರೋಧಿ ಹೇಳಿಕೆಯನ್ನು ಪ್ರಚಾರ ಮಾಡದ ಕೆಲವು ಬಳಕೆದಾರರೂ ಇದ್ದಾರೆ ಆದರೆ ಘಟನೆಯನ್ನು ನಿಜವೆಂದು ನಂಬಿದ್ದಾರೆ.

https://twitter.com/DharsinTweets/status/1469260533937233920?s=20

ವೀಡಿಯೋದ ಸತ್ಯ ಪರಿಶೀಲನೆ:

ಫೇಸ್‌ಬುಕ್ ಪುಟಗಳಿಂದ ಪೋಸ್ಟ್ ಮಾಡಲಾಗಿರುವ ಕಿರುಚಿತ್ರ ನಾಟಕ (ಸ್ಕ್ರಿಪ್ಟೆಡ್ ವಿಡಿಯೋ)ದ ದೃಶ್ಯವನ್ನು ಬಳಸಿಕೊಂಡು ಜನರನ್ನು ತಪ್ಪುದಾರಿಗೆ ಎಳೆಯುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಟಿ ಸಂಜನಾ ಗಲ್ರಾನಿ ಅವರು ಈ ದೃಶ್ಯಗಳಿರುವ ಮೂಲ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಇದು ಸ್ಕ್ರಿಪ್ಟೆಡ್‌ ನಾಟಕ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಪುಟವು ಸ್ಕ್ರಿಪ್ಟ್ ಮಾಡಿದ ನಾಟಕಗಳು ಮತ್ತು ವಿಡಂಬನೆಗಳನ್ನು ಸಹ ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ” ಎಂದು ಅವರು ವಿಡಿಯೋದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಸ್ಕ್ರಿಪ್ಟೆಡ್‌ ನಾಟಕ ನಾಟಕದ ತುಣುಕುಗಳನ್ನು ಇತ್ತೀಚೆಗೆ,  ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು, ಮುಸ್ಲಿಮರ ವಿರುದ್ದ ದ್ವೇಷ ಭಿತ್ತುವ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಮೂಲ ವಿಡಿಯೋದ ತುಣುಕುಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ ನ್ಯೂಸ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: Fact Check: ವಿಡಿಯೋ ವೈರಲ್ – ಪೊಲೀಸರಿಗೆ ಎಸ್‌ಪಿ ಶಾಸಕ ಥಳಿಸಿದ್ದಾರೆ ಎಂಬುದು ಸುಳ್ಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights