Fact Check: ವಿಡಿಯೋ ವೈರಲ್ – ಪೊಲೀಸರಿಗೆ ಎಸ್‌ಪಿ ಶಾಸಕ ಥಳಿಸಿದ್ದಾರೆ ಎಂಬುದು ಸುಳ್ಳು!

ಜನರ ಗುಂಪೊಂದು ಪೊಲೀಸರಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಉತ್ತರ ಪ್ರದೇಶದ ಮುಕ್ತರ್ ಗಂಜ್ ಕ್ಷೇತ್ರದ ಎಸ್‌ಪಿ ಶಾಸಕ ಸಲೀಂ ಹೈದರ್” ಮತ್ತು ಬಿಹಾರದ ಬಿಜೆಪಿ ಶಾಸಕ ರಾಮ್ ಕೃಪಾಲ್ ಯಾದವ್ ಅವರು ಪೊಲೀಸ್ ಅಧಿಕಾರಿಯನ್ನು ಥಳಿಸಿದ್ದಾರೆ ಎಂದು ವಿಡಿಯೋ ಹಂಚಿಕೊಂಡಿರುವವರು ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನ ಸತ್ಯಾ-ಸತ್ಯತೆಯನ್ನು ಪರಿಶೀಲಿಸೋಣ.

ಈ ದೃಶ್ಯಗಳು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ‘Rss #Karyakarta‘, ‘I Support Narendra Modi, Yogi Ji & RSS‘, ‘Fan  of Yogi Adityanath ji (Group)‘ ಸೇರಿದಂತೆ ಹಲವಾರು ಫೇಸ್‌ಬುಕ್ ಗುಂಪುಗಳಲ್ಲಿ ಈ ವಿಡಯೋವನ್ನು ಪೋಸ್ಟ್ ಮಾಡಲಾಗಿದೆ. ಮಾತ್ರವಲ್ಲದೆ, ಯೂಟ್ಯೂಬ್‌ನಲ್ಲಿಯೂ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಫ್ಯಾಕ್ಟ್‌ (ಸತ್ಯಾಂಶ):

ವಿಡಿಯೋದ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಿದಾಗ ಡಿಸೆಂಬರ್ 3ರಂದು ಪ್ರಕಟವಾಗಿದ್ದ ದೈನಿಕ್ ಭಾಸ್ಕರ್ ವೆಬ್‌ಸೈಟ್‌ನ ವರದಿ ದೊರೆತಿದೆ. ವರದಿಯ ಪ್ರಕಾರ, ಈ ಘಟನೆಯು ಡಿಸೆಂಬರ್ 2 ರ ರಾತ್ರಿ ಲಕ್ನೋದಲ್ಲಿ ಸಂಭವಿಸಿದೆ. ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ಅವರು ವಾಹನ ಚಲಾಯಿಸಿಕೊಂಡು ತೆರಳುತ್ತಿದ್ದಾಗ ಹೋಟೆಲ್‌ನ ಹೊರಗಿನ ರಸ್ತೆಯಲ್ಲಿ ನಿಂತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.ಇದು ಘರ್ಷಣೆಗೆ ಕಾರಣವಾಗಿದ್ದು, ಜನರ ಗುಂಪು ಘಟನಾ ಸ್ಥಳಕ್ಕೆ ಧಾವಿಸಿ ಕುಮಾರ್ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. ಆಶಿಶ್ ಶುಕ್ಲಾ ಎಂಬ ವ್ಯಕ್ತಿ ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಹಸನ್‌ಗಂಜ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ನಂತರ ಅವರನ್ನು ಬಂಧಿಸಲಾಗಿದೆ.

ನಾಲ್ವರನ್ನು ಬಂಧಿಸಲಾಗಿದೆ ಎಂದು ಲಕ್ನೋ ಪೊಲೀಸರು ವರದಿ ಮಾಡಿದ್ದಾರೆ. ಬಂಧಿತರನ್ನು ವೇಂದ್ರ ಮಾಥುರ್, ಪ್ರಿಯಾಂಕ್ ಮಾಥುರ್, ಆಶಿಶ್ ಕುಮಾರ್ ಶುಕ್ಲಾ ಮತ್ತು ಪ್ರಂಜುಲ್ ಮಾಥುರ್ ಎಂದು ಅಲ್ಲಿನ ಅಧಿಕಾರಿ ಪ್ರಾಚಿ ಸಿಂಗ್ ಅವರು ತಿಳಿಸಿದ್ದಾರೆ.

ಅಲ್ಲದೆ, ಹಸಂಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಶೋಕ್ ಸೋಂಕರ್ ಅವರನ್ನು ಕೂಡ ಸಂಪರ್ಕಿಸಲಾಗಿದ್ದು. ದುಷ್ಕರ್ಮಿಗಳು ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. “ಆರೋಪಿಗಳಿಗೆ ಸಮಾಜವಾದಿ ಪಕ್ಷ ಅಥವಾ ಇತರ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ” ಎಂದು ಅವರು ವಿವರಿಸಿದ್ದಾರೆ ಎಂದು ಆಲ್ಟ್‌ನ್ಯೂಸ್‌ ವರದಿ ಮಾಡಿದೆ.

ಮೇಲಾಗಿ, ಸಮಾಜವಾದಿ ಪಕ್ಷದಲ್ಲಿ ಸಲೀಂ ಹೈದರ್ ಎಂಬ ಶಾಸಕರು ಯಾರೂ ಇಲ್ಲ. ಮಾತ್ರವಲ್ಲದೆ, ಮುಖ್ತಾರ್ ಗಂಜ್ ಎಂಬ ಕ್ಷೇತ್ರವೂ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಜನರು ನಡುರಸ್ತೆಯಲ್ಲಿ ಪೊಲೀಸರನ್ನು ಥಳಿಸುವ ಘಟನೆಯ ಹಿಂದೆ ಸಲೀಂ ಹೈದರ್ ಎಂಬ ಎಸ್‌ಪಿ ಶಾಸಕರು ಇದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದೇ ವೇಳೆ, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಬಗ್ಗೆ ಹಲವಾರು ಸುಳ್ಳು ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ ಎಂಬುದು ಗಮನಿಸಬೇಕಾದ ಸಂಗತಿ.

ಕೃಪೆ: ಆಲ್ಟ್‌ ನ್ಯೂಸ್‌

ಇದನ್ನೂ ಓದಿ: Fact Check: ಕಬ್ಬಿಣದ ಮೊಳೆಗಳನ್ನೂ ಕರಗಿಸುತ್ತದೆಯೇ ಮಾಂತ್ರಿಕ ಕಲ್ಲು? ಸತ್ಯವೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights