ಭಯಾನಕ ವೀಡಿಯೊ : ಬಂಡೆಯ ಅಂಚಿನಿಂದ ಉರುಳಿದ ಕಾರು..!
ಬಂಡೆಯ ಅಂಚಿನಿಂದ ಕಾರು ಉರುಳುವ ಭಯಾನಕ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೀನಾದ ಕ್ಸಿಂಜಿಯಾಂಗ್‌ನ ಡುಕುದ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರೊಂದು ಏಕಾಏಕಿ ಬಂಡೆಯ ಅಂಚಿನಿಂದ ಉರುಳಿದೆ. ಕಾರಿನಲ್ಲಿದ್ದ ಕುಟುಂಬಸ್ಥರಲ್ಲಿ ಇಬ್ಬರು ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾದರು ಆದರೆ ಇನ್ನೋರ್ವ ಮಹಿಳೆ ಹೊರಬರಲು ಸಾಧ್ಯವಾಗಿಲ್ಲ.
ಚಾಲಕ ಪಾನೀಯ ಕುಡಿಯಲು ಕಾರಿನಿಂದ ಹೊರಬಂದಿದ್ದಾನೆ. ಈ ವೇಳೆ ಕಾರು ಇದ್ದಕ್ಕಿದ್ದಂತೆ ತೆರಳು ಆರಂಭಿಸಿದೆ. ಗಾಬರಿಗೊಂಡ ಚಾಲಕ ಕಾರ್ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಓರ್ವ ಮಹಿಳೆ ಕಾರಿನಿಂದ ಹೊರಬಂದಳಾದರೂ ಇನ್ನೊಬ್ಬ ಮಹಿಳೆ ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಹೆಜಿಂಗ್ ಕೌಂಟಿ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಬ್ಯೂರೋ ಪ್ರಕಾರ ಅದೃಷ್ಟವಶಾತ್ ಕಾರಿನಲ್ಲಿ ಸಿಲುಕಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಆದರೆ ಸೊಂಟಕ್ಕೆ ಗಾಯಗಳಾಗಿವೆ.
ಕಳೆದ ತಿಂಗಳು, ಮತ್ತೊಂದು ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿತ್ತು. ರಷ್ಯಾದಲ್ಲಿ 6,300 ಅಡಿ ಬಂಡೆಯ ತುದಿಯಲ್ಲಿ ಇಬ್ಬರು ಮಹಿಳೆಯರು ಸ್ವಿಂಗ್‌ನಿಂದ ಕೆಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು.