ವಿಘ್ನೇಶ್ವರನ ಹಬ್ಬಕ್ಕೆ ಮಲೆನಾಡಲ್ಲಿ ವಿಘ್ನ : ಬದುಕೇ ಸತ್ತಿದೆ ಹಬ್ಬ ಎಲ್ಲಿ ಅಂತಿದ್ದಾರೆ ನಿರಾಶ್ರಿತರು

ಕಾಫಿನಾಡಲ್ಲಿಲ್ಲ ಗೌರಿ ಗಣೇಶ ಹಬ್ಬದ ಸಂಭ್ರಮ. ವಿಘ್ನೇಶ್ವರನ ಹಬ್ಬಕ್ಕೆ ಮಲೆನಾಡಲ್ಲಿ ವಿಘ್ನ. ಹಬ್ಬವೂ ಇಲ್ಲ, ಸಂಭ್ರಮವೂ ಇಲ್ಲ, ಬದುಕೇ ಸತ್ತಿದೆ ಹಬ್ಬ ಎಲ್ಲಿ ಅಂತಿದ್ದಾರೆ ನಿರಾಶ್ರಿತರು.

ಹೌದು.. ಇಂದು ದೇಶದೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದ್ರೆ, ಮಲೆನಾಡು ಚಿಕ್ಕಮಗಳೂರಲ್ಲಿ ಮಾತ್ರ ಹಬ್ಬದ ವಾತವರಣವೇ ಇಲ್ಲ. ಬದುಕೇ ಸತ್ತಿದೆ ಹಬ್ಬ ಎಲ್ಲಿ ಅಂತ ಮಲೆನಾಡಿಗ್ರು ಕಣ್ಣೀರುಡುತ್ತಿದ್ದಾರೆ. ಮಲೆನಾಡಲ್ಲಿ ಸುರಿದ ರಣಭೀಕರ ಮಳೆಯಿಂದ ಚಿಕ್ಕಮಗಳೂರಿನಲ್ಲಿ ಹಬ್ಬದ ವಾತಾವರಣವೇ ಇಲ್ಲದಂತಾಗಿದೆ.

ಮೂಡಿಗೆರೆ ತಾಲೂಕಿನ 40ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿದ್ದು ಹಬ್ಬವೂ ಇಲ್ಲ, ಸಂಭ್ರಮವೂ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಹೊಸ ಬದುಕು ಕಟ್ಟುಕೊಳ್ಳುವ ಆತಂಕವೇ ಹೆಚ್ಚಾಗಿದ್ದು ಮುಂದೆ ಬದುಕು ಹೇಗೆ ಎಂಬುದು ಕಾಣ್ತಿಲ್ಲ, ನಮ್ಮ ಬದುಕು ಸತ್ತು ಹೋಗಿದೆ ಇನ್ನೇಲ್ಲಿ ಹಬ್ಬ ಅಂತ ಬೇಸರದ ವ್ಯಕ್ತಪಡಿಸಿದ್ದಾರೆ. ಕಳೆದ 23 ದಿನಗಳಿಂದ ನಿರಾಶ್ರಿತ ಕೇಂದ್ರದಲ್ಲಿರುವ ಜನರು ಮುಂದಿನ ಬದುಕು ಕಾಣದೇ ಬದುಕು ದೂಡುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights