ಹಾಳಾದ ರಸ್ತೆ ಮೇಲೆ ಪ್ರಿವೆಡ್ಡಿಂಗ್ ಪೋಟೋ ಶೂಟ್ ಮಾಡಿದ ದಂಪತಿಗಳು…

ಕೆಸರು ಗದ್ದೆಯಲ್ಲಿ ಕೆಲ ದಿನಗಳ ಹಿಂದೆ ಪ್ರಿವೆಡ್ಡಿಂಗ್ ಪೋಟೋ ಶೂಟ್ ಬಾರಿ ಸುದ್ದಿ ಮಾಡಿತ್ತು. ಆದ್ರೆ ಇತ್ತೀಚೆಗೆ ಮದುವೆಯಾದ ದಂಪತಿಗಳು ಹಾಳಾದ ರಸ್ತೆ ಮೇಲೆ ಚರಂಡಿ ನೀರಿನ ಮಧ್ಯ ವೆಡ್ಡಿಂಗ್ ಪೋಟೋ ಶೂಟ್ ಮಾಡಿಕೊಳ್ಳುವ ಮೂಲಕ ಜನಪ್ರತಿನಿಧಿಗಳ ಗಮನ ಸೆಳೆಯಲು ಮುಂದಾಗಿದ್ದಾರೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಂಚಿನಾಳ(ಯು) ಶಶಿ ಹಿರೇಮಠ ಹಾಗೂ ವಿಜಯಲಕ್ಷ್ಮಿ ಎನ್ನುವ ದಂಪತಿಗಳು, ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮಧ್ಯ ಪೋಟೋ ವೆಡ್ಡಿಂಗ್ ಶೂಟ್ ವೇಳೆ, ಗ್ರಾಮದ ಮುಖ್ಯರ 2008ರಲ್ಲಿ ನಿರ್ಮಾಣ ಮಾಡಿದ ಸಿಸಿ ರಸ್ತೆ ಹಾಳಾಗಿದೆ. ಇದರಿಂದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದು, ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟಿದೆ. ಇದರ ಮಧ್ಯ ಗ್ರಾಮಸ್ಥರು ನಿತ್ಯ ಸಂಚಾರಿಸಬೇಕಾಗಿದೆ.

ರಸ್ತೆಯನ್ನ ದುರಸ್ತಿಗೊಳ್ಳುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಆದ್ರೆ ಇದರಿಂದ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಶಾಸಕರು, ಸಂಸದರು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಗಮನ ಸೆಳೆಯುವುದಕ್ಕೆ ಹಾಳಾದ ರಸ್ತೆ ಮೇಲೆ ನಿಂತಿರುವ ಚರಂಡಿ ನೀರಿನ ಮಧ್ಯದಲ್ಲಿ ಪೋಟೋ ವೆಡ್ಡಿಂಗ್ ಶೂಟ್ ಮಾಡುವ ರಸ್ತೆ ದುರಸ್ತಿಗೆ ಗಮನ ಸೆಳೆಯುವುದಕ್ಕೆ ಮುಂದಾಗಿದ್ದಾರೆ. ಈ ಪೋಟೋಗಳನ್ನ ವಾಟ್ಸಪ್ ನಲ್ಲಿ ಹರಿದಾಡುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights