ಅಭಿಮಾನಿಗಳ ಬೇಸರಕ್ಕೆ ಕಾರಣವಾಯ್ತು ನಟಿ ಕಾಜೋಲ್ ಕೇಕ್ ಕಟ್ ಮಾಡಿದ ವಿಧಾನ!

ನಿನ್ನೆಯಷ್ಟೇ (ಆಗಸ್ಟ್ 5) ಬಾಲಿವುಡ್ ಪ್ರಸಿದ್ಧ ನಟಿ ಕಾಜೋಲ್ ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ನೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಜೂಹಿ ನಿವಾಸದ ಬಳಿ ಅಭಿಮಾನಿಗಳು ನೆರೆದಿದ್ದರು. ಮಾತ್ರವಲ್ಲದೇ ಕೇಕ್ ಕೂಡ ತಂದು ಕಾಯುತ್ತಿದ್ದರು.

ಮನೆಗೆ ಬಂದ ಕಾಜೋಲ್ ಅವರು ಅಭಿಮಾನಿಗಳು ತಂದಿದ್ದ ಕೇಕ್ ಅನ್ನು ನಿರುತ್ಸಾಹದಿಂದ ಕತ್ತರಿಸಿದ್ದಾರೆ. ಅಭಿಮಾನಿಗಳಲ್ಲಿ ಕಂಡ ಉತ್ಸಾಹ ಕಾಜೋಲ್ ಅವರಲ್ಲಿ ಕಂಡು ಬರಲಿಲ್ಲ.

ಆಸೆಯಿಂದ ತಂದ ಕೇಕ್ ಅನ್ನು ಧಿಮಾಕಿನಿಂದ ಕಟ್ ಮಾಡಿದ್ದಾರೆಂದು ನೆಟ್ಟಿಗರು ಟೀಕಿಸಿದ್ದಾರೆ. “ಈ ನಟರಿಗಾಗಿ ಜನ ಯಾಕೆ ಸಮಯ ವ್ಯರ್ಥ ಮಾಡಿಕೊಳ್ತಾರೋ ಗೊತ್ತಿಲ್ಲ. ಅವರು ಕೇಕ್ ಗೆ ಬೆಲೆಯನ್ನೇ ಕೊಡಲಿಲ್ಲ. ತನ್ನನ್ನು ಬೆಳಸಿದ್ದು ಈ ಜನರೇ ಅನ್ನೋದನ್ನು ಕಾಜೋಲ್ ಮರೆತಿದ್ದಾರೆ. ತಾನೇನೋ ಅವರಿಗೆ ಉಪಹಾರ ಮಾಡುತ್ತಿರುವವರಂತೆ ಆಕೆ ವರ್ತಿಸುತ್ತಿದ್ದಾರೆ’ ಎಂದು ವೀಡಿಯೋ ಕಂಡು ನೆಟ್ಟಿಗರು ಗರಂ ಆಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights