ಬರ್ತಡೇ ಪಾರ್ಟಿಗೆ ಹೋಗಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ!
ಪರಿಚಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ವಿದ್ಯಾರ್ಥಿನಿ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರ ಎಸಗಿರುವ ಘಟನೆ ಸಿಕಿಂದರಾಬಾದ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಿಕಂದರಾಬಾದ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪದವಿ ವಿದ್ಯಾರ್ಥಿನಿ ಜ್ಯೂಬಿಲಿ ಹಿಲ್ಸ್ನಲ್ಲಿ ವಾಸಿಸುತ್ತಿದ್ದರು. ಆಕೆಗೆ ಮೂರು ತಿಂಗಳ ಹಿಂದೆ ಜೋಸೆಫ್ ಎಂಬಾತನ ಪರಿಚಯವಾಗಿತ್ತು.
ಪರಿಚಯವಾಗಿದ್ದ ಜೋಸೆಫ್ ಕೆಲ ದಿನಗಳ ಹಿಂದೆ ತನ್ನ ಬರ್ತಡೇ ಪಾರ್ಟಿಗೆ ವಿದ್ಯಾರ್ಥಿನಿಯನ್ನು ಆಹ್ವಾನಿಸಿದ್ದು, ಆಹ್ವಾನದ ಮೇಲೆಗೆ ಹೋಟೆಲ್ನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಹೋದ ವಿದ್ಯಾರ್ಥಿನಿಗೆ ಕೇಕ್ನಲ್ಲಿ ಮದ್ದು ಬರುವ ಔಷಧಿ ಬೆರೆಸಿ ತಿನ್ನಿಸಿ, ಆಕೆ ಪ್ರಜ್ಞೆ ತಪ್ಪಿದ ನಂತರ ಜೋಸೆಫ್ ಮತ್ತು ಆತನ ಮತ್ತಿಬ್ಬರು ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ.
ಅಲ್ಲದೆ, ಘಟನೆಯ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ.
ಆದರೆ, ಸ್ವಲ್ಪ ದಿನಗಳ ನಂತರ ಆಕೆಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದವಿದ್ಯಾರ್ಥಿನಿ, ತನ್ನ ತಾಯಿಗೆ ಹೋಟೆಲ್ ನಲ್ಲಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ.
ಆಕೆಯ ಪೋಷಕರು ಜ್ಯುಬಿಲಿ ಹಿಲ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನು ಕುಕಟಪಲ್ಲಿ ಠಾಣೆಗೆ ವರ್ಗಾವಣೆ ಮಾಡಲಾಯಿತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೋಸೆಫ್, ನವೀನ್ ಮತ್ತು ರಾಮು ಎಂಬುವರನ್ನು ಬಂಧಿಸಿದ್ದು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ವ್ಯಕ್ತಿಯೊಬ್ಬನ ಮುಂಡ ಮಧ್ಯಪ್ರದೇಶದಲ್ಲಿ, ರುಂಡ ಬೆಂಗಳೂರಿನಲ್ಲಿ ಪತ್ತೆ!

