Fact Check: ಶ್ರೀಕೃಷ್ಣನ ಅವಹೇಳನಾಕಾರಿ ಚಿತ್ರಕಲೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಂಡ ಪತ್ರಕರ್ತರು!

ಅಸ್ಸಾಂ ಮೂಲದ ಮುಸ್ಲಿಂ ಕಲಾವಿದರೊಬ್ಬರು ಹಿಂದೂ ದೈವ ಶ್ರೀಕೃಷ್ಣನ ಸುತ್ತ ಮಹಿಳೆಯರು ಬಿಕಿನಿಗಳಲ್ಲಿ ಸುತ್ತುವರೆದಿರುವ ಚಿತ್ರವೊಂದರ ಫೋಟೋ ವೈರಲ್ ಆಗುತ್ತಿದೆ. ಇದನ್ನು ಗುವಾಹಟಿಯ ರಾಜ್ಯ ಕಲಾ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುತ್ತಿದೆ ಎಂಬ ಸುಳ್ಳು ಹೇಳಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಆದಾಗ್ಯೂ, ಚಿತ್ರಕಲೆಯ ಪ್ರದರ್ಶನವು 2015ರಲ್ಲಿ ನಡೆದಿದೆ. ನಂತರದಲ್ಲಿ, ಈ ಚಿತ್ರಕಲೆಯನ್ನು ಪ್ರದರ್ಶನದಲ್ಲಿ ಪ್ರದರ್ಶಿನ ಮಾಡಲಾಗುತ್ತಿಲ್ಲ ಅದನ್ನು ಸೀಜ್‌ ಮಾಡಲಾಗಿದೆ ಎಂದು ದಿ ಕ್ವಿಂಟ್‌ ಕಂಡುಕೊಂಡಿದೆ.

An archived version of this post can be seen <a href="http://archive.is/pBvha">here</a>.

ಪ್ರತಿಪಾದನೆ: ಅನೇಕ ಜನರು ಈ ವರ್ಣಚಿತ್ರವನ್ನು ಹಂಚಿಕೊಂಡರು, ಅಕ್ರಮ್ ಹುಸೇನ್ ಎಂಬ ಹೆಸರಿನ ಮುಸ್ಲಿಂ ವರ್ಣಚಿತ್ರಕಾರ ಶ್ರೀಕೃಷ್ಣನನ್ನು ಈ ರೀತಿ ಚಿತ್ರಿಸಿದ್ದಾರೆ ಎಂದು ಹಲವಾರು ಸಾಮಾಜಿಕ ಜಾಲತಾಣಿಗರು ಈ ವರ್ಣಚಿತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಹಿಂಸಾಚಾರವನ್ನು ಪ್ರಸ್ತಾಪಿಸಿ,  ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕದ್ದಕ್ಕಾಗಿ ನವೀನ್‌ನನ್ನು ಬಂಧಿಸಲಾಗಿದೆ. ಕೃಷ್ಣನನ್ನು ಈ ಚಿತ್ರಸಿರುವ ಅಕ್ರಮ ಹಸೇನ್‌ ಎಂಬ ವ್ಯಂಗ್ಯಚಿತ್ರಕಾರನ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಚಿತ್ರಕಲೆಯ ಫೋಟೋದೊಂದಿಗೆ ಈ ಹೇಳಿಕೆಯು ವೈರಲ್ ಆಗುತ್ತಿದೆ.

ಅನೇಕ ಪ್ರಮುಖ ಜನರು ಸಹ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ನ್ಯೂಸ್ ನೇಷನ್ ಟಿವಿ ಕನ್ಸಲ್ಟಿಂಗ್ ಸಂಪಾದಕ ದೀಪಕ್ ಚೌರಾಸಿಯಾ ಆಗಸ್ಟ್ 17 ರಂದು ಈ ಪೋಸ್ಟ್ಅನ್ನು ಟ್ವೀಟ್ ಮಾಡಿದ್ದಾರೆ.

An archived version of this tweet can be seen <a href="http://archive.is/yGClL">here</a>.

ಮಾಧ್ಯಮ ನಿರೂಪಕ ಅರುಣ್ ಪುದೂರ್ ಕೂಡ ಇದೇ ಸಂದೇಶದೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ.

An archived version of this tweet can be seen <a href="http://archive.is/klYfs">here</a>.

ಫೇಸ್‌ಬುಕ್‌ನಲ್ಲಿಯೂ ಕೂಡ ಈ ಹೇಳಿಕೆಯೊಂದಿಗೆ ಪೋಟೋ ವೈರಲ್‌ ಆಗುತ್ತಿದೆ.

 

ಸತ್ಯಾಂಶ:  ಕೀವರ್ಡ್‌ಗಳ ಮೂಲಕ ಹುಡುಕಿದಾಗ, ಆಗಸ್ಟ್ 17 ರಂದು ಟೈಮ್ಸ್ ಆಫ್ ಇಂಡಿಯಾ ಬರೆದ ಲೇಖನವೊಂದನ್ನು ದೊರೆತಿದೆ. ಪೋಸ್ಟ್‌ಗಳು ವೈರಲ್ ಆದ ನಂತರ ಇಸ್ಕಾನ್ ‘ಆಕ್ಷೇಪಾರ್ಹ ಚಿತ್ರಕಲೆ’ ಬಿಡಿಸಿರುವ ಕಲಾವಿದನ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದೆ ಎಂದು ಹೇಳಿದೆ.

ಆದಾಗ್ಯೂ, 2015 ರಲ್ಲಿ ಕಲಾ ವಿದ್ಯಾರ್ಥಿಯೊಬ್ಬರಿಂದ ಚಿತ್ರಕಲೆ ಬಿಡಿಸಲಾಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಇದಲ್ಲದೆ, 2015 ರಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯು ದೊರೆತಿದ್ದು, ಅದು ಘಟನೆಯ ಬಗ್ಗೆ ಪ್ರಶ್ನಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುವಾಹಟಿ ಪೊಲೀಸ್ ಡಿಸಿಪಿ ಅಮಿತಾಭ್ ಸಿನ್ಹಾ, “ಕಲಾವಿದ ಅಕ್ರಮ್ ಹುಸೇನ್ ಎಂಬಾತ ಕೃಷ್ಣನನ್ನು ಆಕ್ರಮಣಕಾರಿ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಹಿಂದೂ ಜಾಗರಣ್ ಮಂಚ್‌ ಎಂಬ ಸಂಘಟನೆಯು ಶುಕ್ರವಾರ ದಾಖಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ಆಧಾರದ ದಾಖಲಿಸಿಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ.

ಚಿತ್ರಕಲೆಯನ್ನು ಮೊದಲೇ ತೆಗೆದುಹಾಕಲಾಗಿದೆ ಮತ್ತು ಕಲಾವಿದ ಅದಕ್ಕಾಗಿ ಕ್ಷಮೆಯಾಚಿಸಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗುವಾಹಟಿ ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ್ದು, “2015 ರಲ್ಲಿ ಈ ಘಟನೆ ನಡೆದಿದ್ದು, ಅದಾದ ನಂತರ ಈ ಚಿತ್ರಕಲೆ ಪ್ರದರ್ಶನದಲ್ಲಿ ಇರುವುದಿಲ್ಲ. 2015ರ ಮೇ 30ರಂದು ಆತನನ್ನು ಬಂಧಿಸಲಾಗಿದ್ದು, ಚಿತ್ರಕಲೆಯನ್ನು ಸೀಜ್‌ ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

Old Incident of Lord Krishna’s Derogatory Painting Shared as New

2015ರ ಹಳೆಯ ಘಟನೆಯನ್ನು ಮತ್ತೆ ಮರು ಹಂಚಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ದಿಕ್ಕು ತಪ್ಪಿಸುವ ಟ್ವೀಟ್‌ಗಳನ್ನು ಮಾಡಿದ ಆರೋಪದ ಮೇಲೆ ದೀಪಕ್ ಚೌರಾಸಿಯಾ ಮತ್ತು ಅರುಣ್ ಪುಡೂರ್‌ ಅವರನ್ನು ಗುವಾಹಟಿ ಪೊಲೀಸರು ಬಂಧಿಸಿದ್ದಾರೆ.

ಒಟ್ಟಾರೆಯಾಗಿ, 2015ರಲ್ಲಿ ಪ್ರದರ್ಶನಗೊಂಡು. ಅದಕ್ಕಾಗಿ ಬಂಧನ ಶಿಕ್ಷೆಯನ್ನೂ ಅನುಭವಿಸಿರುವ ಹಳೆಯ ಚಿತ್ರವನ್ನು ಇತ್ತೀಚೆಗೆ ನಡೆದ ಘಟನೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.


ಇದನ್ನೂ ಓದಿ: Fact Check: ಹಿಂದೂ ದೇವಾಲಯದಲ್ಲಿ ಏಸು ಪೋಟೋಗೆ ಪೂಜೆ ಮಾಡಲು ಎಸ್‌ಪಿ ಒತ್ತಾಯಿಸಿದ್ದರೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights