ಎಲ್ಪಿಜಿ ಸಿಲಿಂಡರ್ ಸ್ಫೋಟ ಪ್ರಕರಣ : ನಾಲ್ಕು ಮಕ್ಕಳು ಸೇರಿ 9 ಜನ ದಾರುಣ ಸಾವು…!

ಗುಜರಾತ್ ನ ಅಹಮದಾಬಾದ್ ನಗರದ ಹೊರವಲಯದಲ್ಲಿರುವ ಕೋಣೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಪೋಟ ಸಂಭವಿಸಿದ್ದು ಬೆಂಕಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 9 ಜನ ದಾರಾಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕೆಲವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.

ಜುಲೈ 20 ರ ರಾತ್ರಿ ಈ ಘಟನೆ ಸಂಭವಿಸಿದೆ. ಮೃತರನ್ನು ಮಧ್ಯಪ್ರದೇಶದವರು ಎಂದು ಗುರುತಿಸಲಾಗಿದೆ. “ಎಲ್‌ಪಿಜಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು, ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 10 ಜನರು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ಈ ಘಟನೆಯಲ್ಲಿ ಈವರೆಗೆ ಒಂಬತ್ತು ಮಂದಿಯ ಸಾವನ್ನಪ್ಪಿದ್ದಾರೆ. ಅವರಲ್ಲಿ ಕೆಲವರು ಸಿವಿಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅಸ್ಲಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿಆರ್ ಜಡೇಜಾ ಹೇಳಿದ್ದಾರೆ.

ಗುರುವಾರ ಚಿಕಿತ್ಸೆಯ ಸಮಯದಲ್ಲಿ ಮೂವರು ಸಾವನ್ನಪ್ಪಿದ್ದು ಇತರ ಐದು ಮಂದಿ ಶುಕ್ರವಾರ ಮತ್ತು ಇನ್ನೊಬ್ಬರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ತಮ್ಮ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಲು ಪ್ರಾರಂಭಿಸಿದಾಗ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು ಸಣ್ಣ ಕೋಣೆಯಲ್ಲಿ ಮಲಗಿದ್ದರು. ಅದರ ಬಗ್ಗೆ ಎಚ್ಚರಿಕೆ ನೀಡಲು ಅವರ ನೆರೆಹೊರೆಯವರು ತಮ್ಮ ಮನೆ ಬಾಗಿಲು ಬಡಿದಾಗ, ಕಾರ್ಮಿಕರೊಬ್ಬರು ಎದ್ದು ಲೈಟ್ ಸ್ವಿಚ್ ಆನ್ ಮಾಡಿದ್ದಾರೆ. ಈ ವೇಳೆ  ಸಿಲಿಂಡರ್ ಸ್ಫೋಟಗೊಂಡಿದೆ.

ಗಾಯಗೊಂಡ 10 ಜನರಲ್ಲಿ ಅವರನ್ನು ಎಚ್ಚರಿಸಲು ಬಂದ ನೆರೆಹೊರೆಯವರು ಸೇರಿದ್ದಾರೆ. ಅವರೆಲ್ಲರನ್ನೂ ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮೃತಪಟ್ಟವರನ್ನು ಮಧ್ಯಪ್ರದೇಶದ ಗುಣ ಜಿಲ್ಲೆಯ ರಾಂಪ್ಯಾರಿ ಅಹಿರ್ವಾರ್ (56), ರಾಜುಭಾಯ್ ಅಹಿರ್ವಾರ್ (31), ಸೋನು ಅಹಿರ್ವಾರ್ (21), ಸೀಮಾ ಅಹಿರ್ವಾರ್ (25), ಸರ್ಜು ಅಹಿರ್ವಾರ್ (22), ವೈಶಾಲಿ (7), ನಿತೇಶ್ (6), ಪಾಯಲ್ (4) ), ಮತ್ತು ಆಕಾಶ್ (2) ಎಂದು ಗುರುತಿಸಲಾಗಿದೆ.

ರಾಜಸ್ಥಾನದ ಕರೌಲಿಯ ಕುಡ್ಗಾಂವ್ ಮೂಲದ ಗಾಯಗೊಂಡ ಕುಲ್ಸಿಂಹ್ ಭೈರ್ವಾ (30) ಎಂಬುವವರರ ಸ್ಥಿತಿ ಗಂಭೀರವಾಗಿದೆ.

ಮೃತ ದೇಹಗಳನ್ನು ಮಧ್ಯಪ್ರದೇಶದ ತಮ್ಮ ಹುಟ್ಟೂರು ಗ್ರಾಮಕ್ಕೆ ಕಳುಹಿಸಲಾಗುತ್ತಿದೆ ಎಂದು ಶ್ರೀ ಜಡೇಜಾ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights