ಲೆಬನಾನ್‌ನ ಕಲುಷಿತ ಸರೋವರ ತೀರದಲ್ಲಿ ಸತ್ತ ಮೀನುಗಳ ರಾಶಿ…!

ಲೆಬನಾನ್‌ನ ಲಿಟಾನಿ ನದಿಯ ಸರೋವರದ ದಂಡೆಯಲ್ಲಿ ಟನ್‌ಗಳಷ್ಟು ಸತ್ತ ಮೀನುಗಳು ಪತ್ತೆಯಾಗಿವೆ. ಈ ಮೀನುಗಳು ಕೊಳೆತು ಹತ್ತಿರದ ಹಳ್ಳಿಗಳಲ್ಲೆಲ್ಲಾ ಕೆಟ್ಟ ವಾಸನೆ ಆವರಿಸಿದೆ.

ಸ್ವಯಂಸೇವಕರು ಲೆಬನಾನ್‌ನ ಅತಿ ಉದ್ದದ ನದಿಯ ಲಿಟಾನಿಯ ಖಾರೌನ್ ಸರೋವರದ ಬಳಿ ಕೊಳೆಯುತ್ತಿರುವ ಮೀನು ಮೃತದೇಹಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಿದ್ದಾರೆ. ಜೊತೆಗೆ ಕೊಳಚೆನೀರು ಮತ್ತು ತ್ಯಾಜ್ಯದಿಂದ ಉಂಟಾಗುವ ನೀರಿನ ಮಾಲಿನ್ಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಸತ್ತ ಮೀನಿನ ಜೊತೆಗೆ ಸರೋವರದಲ್ಲಿ ಕಸದ ರಾಶಿ ಕೂಡ ಕಂಡುಬಂದಿದೆ. ಜಲಾಶಯದ ಬಳಿ ನೊಣಗಳ ಹಿಂಡು, ಈಗಾಗಲೇ ಕೊಳಕು ನೀರಿನಲ್ಲಿ ಸಾವಿರಾರು ಮೀನುಗಳು ಕೊಳೆಯುತ್ತಿರುವುದು ಸ್ಥಳೀಯ ಪರಿಸರವನ್ನೇ ಹಾಳು ಮಾಡಿದೆ.

“ಈ ವಿದ್ಯಮಾನವು ಹಲವಾರು ದಿನಗಳ ಹಿಂದೆ ಸರೋವರದ ತೀರದಲ್ಲಿ ಕಾಣಿಸಿಕೊಂಡಿತು. ಇದು ಸ್ವೀಕಾರಾರ್ಹವಲ್ಲ” ಎಂದು ಸ್ಥಳೀಯ ಕಾರ್ಯಕರ್ತ ಅಹ್ಮದ್ ಅಸ್ಕರ್ ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಕನಿಷ್ಠ 40 ಟನ್ ಮೀನುಗಳು ಸತ್ತಿವೆ. ತ್ಯಾಜ್ಯ ನೀರಿಗೆ ಎಸೆಯುವುದೇ ಇದರ ಹಿಂದಿನ ಕಾರಣವಿರಬಹುದು ಎನ್ನಲಾಗುತ್ತಿದೆ.  ಜೊತೆಗೆ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವ ಅನಾಹುತ ಇದಾಗಿದೆ ಎಂದು ಲಿಟಾನಿಯ ಉದ್ದಕ್ಕೂ ಮೀನುಗಾರಿಕೆಯನ್ನು ತಪ್ಪಿಸುವಂತೆ ಜನರನ್ನು ಒತ್ತಾಯಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights