ದಾರಿ ಮಧ್ಯೆ ಕಾರು ನಿಲ್ಲಿಸಿ ಹೂ ಪಡೆದು, ಸೆಲ್ಫಿ ಕ್ಲಿಕ್ಕಿಸಿದ ರಾಹುಲ್‌ಗಾಂಧಿ: ವಿಡಿಯೋಗಳು ವೈರಲ್

ಕಳೆದ ಸುಮಾರು ದಿನಗಳಿಂದ ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಕೇರಳದ ವಯನಾಡಿನಲ್ಲಿ ಪ್ರವಾಸ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ, ಜನರೊಂದಿಗೆ ಬೆರೆತ ಸಾಕಷ್ಟು ವಿಡಿಯೋಗಳು ವೈರಲ್‌ ಆಗುತ್ತಿವೆ.

ವಯನಾಡಿನಲ್ಲಿ ಕ್ಷೇತ್ರ ವೀಕ್ಷಣೆಗೆಂದು ತೆರಳಿದ್ದ ರಾಹುಲ್‌ಗಾಂಧಿ ಪ್ರಯಾಣಿಸುತ್ತಿದ್ದ ರಸ್ತೆಯ ಬದಿಯಲ್ಲಿ ಯುವತಿ ಮತ್ತು ಆಕೆಯ ಸಂಬಂಧಿಕರು ರಾಹುಲ್‌ಗಾಂಧಿ ಬರುವುದನ್ನು ಕಂಡು ಕೈ ಬೀಸಿದ್ದಾರೆ. ಅವರ ಕರೆಗೆ ಓಗೊಟ್ಟು ಕಾರು ನಿಲ್ಲಿಸಿದ ರಾಹುಲ್‌ಗಾಂಧಿ ಯುವತಿಯ ಜೊತೆ ಸೆಲ್ಫಿಗೆ ಪೋಸ್‌ಕೊಟ್ಟು ಮುಂದೆ ಸಾಗಿದ್ದಾರೆ.

ಅಂತೆಯೇ ಮತ್ತೊಂದೆಡೆ, ಕೆಲವು ರಾಹುಲ್‌ ಜನರು ರಾಹುಲ್‌ಗಾಂಧಿಗೆ ಹೂ ಕೊಡಲು ರಸ್ತೆ ಬದಿಯಲ್ಲಿ ನಿಂತಿದ್ದು, ಅವರಿಂದ ಹೋ ಪಡೆದು ರಾಹುಲ್‌ಗಾಂಧಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

Such a lovely video #RahulGandhi

Posted by Gaurav Pandhi on Thursday, October 22, 2020

ಸದ್ಯ, ಈ ಎರಡೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗುತ್ತಿದ್ದು, ಜಾಲತಾಣಿಗರು ಮೆಚ್ಚುಗೆಗೆ ರಾಹುಲ್‌ ಪಾತ್ರರಾಗಿದ್ದಾರೆ.


ಇದನ್ನೂ ಓದಿ: ಮನಮೋಹನ್ ಸಿಂಗ್ ಬರ್ತಡೇ ಕೇಕ್ಅನ್ನು ರಾಹುಲ್‌ಗಾಂಧಿ ಕತ್ತರಿಸಿದ್ದರೇ??

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights