ಪಾಕ್ ಸಿವಿಲ್‌ವಾರ್ ಸುದ್ದಿ: ಭಾರತೀಯ ಮಾಧ್ಯಮಗಳನ್ನು ಟ್ರೋಲ್ ಮಾಡಿದ ಪಾಕಿಸ್ತಾನೀಯರು!

ಎರಡು ದಿನಗಳ ಹಿಂದೆ ಪಾಕಿಸ್ತಾನದ ಕರಾಚಿಯಲ್ಲಿ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದ ಕುರಿತು ವರದಿ ಮಾಡಿದ್ದ ಭಾರತೀಯ ಮಾಧ್ಯಮಗಳನ್ನು ಪಾಕಿಸ್ತಾನದಲ್ಲಿ ಟ್ರೋಲ್ ಆಗುತ್ತಿದೆ.

ಭಾರತೀಯ ಮಾಧ್ಯಮಗಳು ಪಾಕಿಸ್ಥಾನದ ಘಟನೆಯನ್ನು ಸಿವಿಲ್ ವಾರ್ ಎಂಬ ಪದ ಬಳಸಿ ಸುದ್ದಿ ಮಾಡಿದ್ದು, ಇದಕ್ಕೆ ಕಾರಣವಾಗಿದೆ.

ಮೊನ್ನೆ ನಡೆದ ಸ್ಫೋಟದಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿತ್ತು. ಇದು ಸಿಲಿಂಡರ್‌ ಸ್ಫೋಟವೂ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೂ ಮುನ್ನವೇ ಭಾರತೀಯ ಮಾಧ್ಯಮಗಳು ಇದು ಸಿವಿಲ್ ವಾರ್ ಎಂದು ಸುದ್ದಿ ಮಾಡಿದ್ದವು.

ಇದನ್ನು ವಿರೋಧಿಸಿ, ಭಾರತೀಯ ಮಾಧ್ಯಮಗಳನ್ನು ಟ್ರೋಲ್ ಮಾಡಿರುವ ಪಾಕಿಸ್ತಾನದ ಸಾಮಾಜಿಕ ಜಾಲತಾಣ ಬಳಕೆದಾರರು ಸಿವಿಲ್ ವಾರ್ ಎಂಬ ಪದ ಬಳಕೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಕರಾಚಿಯನ್ನು ಭಾರತೀಯ ಮಾಧ್ಯಮಗಳು ತೋರಿಸಿರುವ ರೀತಿ ಮತ್ತು ಕರಾಚಿ ಇರುವ ನಿಜ ಸ್ಥಿತಿಗಳನ್ನು ಹಲವು ಆಯಾಮಗಳಲ್ಲಿ ಚಿತ್ರಿಸಿ ಟ್ರೋಲ್ ಮಾಡುತ್ತಿದ್ದಾರೆ.

ಚಲನಚಿತ್ರಗಳ ದೃಶ್ಯಗಳನ್ನು ಹಂಚಿಕೊಳ್ಳುತ್ತಾ, ಭಾರತೀಯ ಮಾಧ್ಯಮಗಳ ಪ್ರಕಾರ ಇಂದು ಕರಾಚಿಯಲ್ಲಿ ನಡೆದ ಸಿವಿಲ್ ವಾರ್‌ ದೃಶ್ಯಗಳು ಎಂದು ಕೀಟಲ್ ಮಾಡಿದ್ದಾರೆ.

https://twitter.com/ElifAhmetTurkey/status/1319084379038117888?s=20

“ಕರಾಚಿಯಲ್ಲಿ ನಾಗರಿಕ ಯುದ್ಧ(ಸಿವಿಲ್ ವಾರ್) ನಡೆದ ಮೇಲೆ, ಲಾಹೋರ್ ಮೇಲೆ ಗಾಡ್ಜಿಲ್ಲಾ ದಾಳಿ ಮಾಡಿದೆ” ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಪೋಸ್ಟ್ ಮಡಿದ್ದು, ಚಿತ್ರಕ್ಕೆ ಭಾರತೀಯ ಸುದ್ದಿ ಚಾನೆಲ್‌ಗಳ ಕೃಪೆ ಹಾಕಿದ್ದಾರೆ.

ಇನ್ನೂ ಕೆಲವರು, ಬ್ರೇಕಿಂಗ್ ನ್ಯೂಸ್‌ಗಳನ್ನು ಹೇಳುವ ದಾಟಿಯಲ್ಲಿ, ವ್ಯಂಗ್ಯವಾಡಿ ತಮ್ಮ ಪೋಸ್ಟ್‌ಗಳನ್ನು ಶೇರ್‌ ಮಾಡಿದ್ದಾರೆ.

ಬಾಲಿವುಡ್ ಚಿತ್ರದ ಪೋಸ್ಟರ್ ಹಂಚಿಕೊಂಡ ಮತ್ತೊಬ್ಬ ಟ್ವಿಟರ್ ಬಳಕೆದಾರ, ’ನಾನು ಗುಲ್ಶನ್-ಇ-ಭಾಗ್‌ ಕರಾಚಿಯಿಂದ ಲೈವ್ ನೀಡುತ್ತಿದ್ದೇನೆ. ಇಲ್ಲಿ ಪೊಲೀಸ್ ವ್ಯಕ್ತಿಯೊಬ್ಬ ಸಿವಿಲ್ ವಾರ್‌ ನಡೆಯುವಾಗ,‌ ಸಿವಿಲ್ ಡ್ರೆಸ್‌ನಲ್ಲಿ ಇದ್ದಾರೆ ಎಂದು ವಿಶ್ವಯುದ್ಧ3 ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಶೇರ್ ಮಾಡಿದ್ದಾರೆ.

ಇನ್ನೂ ಕೆಲವರು ಸಿವಿಲ್ ವಾರ್‌ ನಡೆಯಲು ಬಿರಿಯಾನಿ ಮತ್ತು ಪಲಾವ್ ಕಾರಣ ಎಂಬಂತ ಪೋಸ್ಟ್‌ಗಳನ್ನು ಹಾಕಿ ಗೇಲಿ ಮಾಡಿದ್ದಾರೆ.

ಟೈಮ್ಸ್ ನೌ, ಜೀ ನ್ಯೂಸ್, ದಿ ಪ್ರಿಂಟ್.ಇನ್ ಮತ್ತು ಇಂಡಿಯಾ. ಕಾಮ್ ಸೇರಿದಂತೆ ಪ್ರಮುಖ ಟಿವಿ ಮತ್ತು ಆನ್‌ಲೈನ್ ನ್ಯೂಸ್ ಪೋರ್ಟಲ್‌ಗಳು ಪಾಕಿಸ್ತಾನದಲ್ಲಿ ‘ನಾಗರಿಕ ಯುದ್ಧದಂತಹ ಪರಿಸ್ಥಿತಿ’ ಇದೆ ಎಂದು ವರದಿ ಮಾಡುತ್ತಿದ್ದು, ಸ್ಥಳೀಯ ಪೊಲೀಸ್ ಪಡೆಗಳು ಸೇನಾ ಬೆಟಾಲಿಯನ್‌ಗಳೊಂದಿಗೆ ಹೋರಾಡಿ ಸಿಂಧ್‌ನ ಪ್ರಾಂತೀಯ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿವೆ ಎಂದಿದ್ದವು.

ಆದರೆ ಅಂತಹ ಯಾವುದೇ ವಿಷಯ ನಡೆಯುತ್ತಿಲ್ಲ. ಪಲಾಯನಗೈದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಳಿಯ ಮೊಹಮ್ಮದ್ ಸಫ್ದಾರ್ ಅವರನ್ನು ಬಂಧಿಸುವಂತೆ ಒತ್ತಡ ಹೇರಿದ್ದ, ಸಿಂಧ್ ಪೊಲೀಸ್ ಮುಖ್ಯಸ್ಥ ಮುಷ್ತಾಕ್ ಮೆಹರ್ ಅವರನ್ನು ಬಂಧಿಸಿರುವ ಸೈನ್ಯದ ನಿರ್ಧಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ ಎಂದು ತಿಳಿದು ಬಂದಿದೆ.

ಆದರೆ ಭಾರತೀಯ ಮಾಧ್ಯಮಗಳು, ಸಿಂಧಿ ಮತ್ತು ಫೆಡರಲ್ ಪಡೆಗಳ ನಡುವೆ ನಾಗರಿಕ ಯುದ್ಧ ನಡೆಯುತ್ತಿದ್ದು, ನಗರವನ್ನು ಬೆಚ್ಚಿಬೀಳಿದೆ. ಕರಾಚಿಯು ಯುದ್ಧ ವಲಯವಾಗಿ ಮಾರ್ಪಟ್ಟಿದೆ ಎಂಬ ನಕಲಿ ಸುದ್ದಿ ಹರಡಿತ್ತು. ಇದನ್ನು ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಖಾತೆಗಳು ಅಪಹಾಸ್ಯ ಮಾಡಲು ಪ್ರಾರಂಭಿಸಿದೆ.


ಇದನ್ನೂ ಓದಿ:‘ಭಾರತವನ್ನು ನೋಡಿ, ಅದು ಹೊಲಸು, ಅಲ್ಲಿನ ಗಾಳಿಯು ಹೊಲಸು’: ಡೊನಾಲ್ಡ್‌ ಟ್ರಂಪ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights