6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಬಾಲಕಿಯ ಹೃದಯ ಮತ್ತು ಶ್ವಾಸಕೋಶ ಕಿತ್ತೊಯ್ದ ಕಾಮುಕರು!

ಅತ್ಯಾಚಾರ ರಾಜಧಾನಿ ಎಂಬ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮತ್ತು ಭೀಕರ ಹಲ್ಲೆಗಳು ನಡೆಯುತ್ತಲೇ ಇವೆ. ಪ್ರಭುತ್ವವೇ ಮೇಲ್ವರ್ಗದ ಅತ್ಯಾಚಾರಿಗಳ ಪರವಾಗಿ ನಿಲ್ಲುತ್ತಿರುವುದು ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಮತ್ತಷ್ಟು ಕುಮ್ಮಕ್ಕು ಕೊಟ್ಟಂತಾಗಿದೆ. ಇದರಿಂದಾಗಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆಗೈದು, ಆಕೆಯ ಹೃದಯ ಮತ್ತು ಶ್ವಾಸಕೋಶವನ್ನು ಕಿತ್ತು ಕೊಂಡೊಯ್ದಿರುವ ಭಯಾನಕ ಅಮಾನವೀಯ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

1999ರಲ್ಲೇ ವಿವಾಹವಾಗಿದ್ದ ಪರಶುರಾಮ್‌ ಎಂಬಾತ, ತನಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮಾಟ-ಮಂತ್ರಗಳ ಮೊರೆಹೋಗಿದ್ದ. ಮಾಂತ್ರಿಕನೊಬ್ಬ ಪೂಜೆಗೆ ಬಾಲಕಿಯೊಬ್ಬಳ ಹೃದಯ ಮತ್ತು ಶ್ವಾಸಕೋಶ ಬೇಕು ಎಂದು ಹೇಳಿದ್ದ.

ಅದಕ್ಕಾಗಿ ಪರಶುರಾಮ್ ತನ್ನ ಸೋದರಳಿಯ ಅಂಕುಲ್​ ಹಾಗೂ ಆತನ ಗೆಳೆಯ ಬೀರನ್​ ಬಳಿ ತೆರಳಿದ್ದ ಪರಶುರಾಮ್​ ಬಾಲಕಿಯೊಬ್ಬಳ ಶ್ವಾಸಕೋಶ ಹಾಗೂ ಹೃದಯ ತಂದುಕೊಟ್ಟರೆ ಹಣ ನೀಡುವುದಾಗಿ ಆಮಿಶವೊಡ್ಡಿದ್ದ.

ಹಣದ ಆಸೆಗೆ 6 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್​ ಮಾಡಿ ಇಬ್ಬರೂ ಕಾಡಿಗೆ ಹೊತ್ತೊಯ್ದಿದ್ದಾರೆ. ಈ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆಗೈದು, ಆಕೆಯ ಹೃದಯ ಹಾಗೂ ಶ್ವಾಸಕೋಶವನ್ನು ತೆಗೆದು ಕೊಂಡೊಯ್ದಿದ್ದಾರೆ.

ಕುಟುಂಬದವರು ಬಾಲಕಿ ಕಾಣೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಕಾಡಿನಲ್ಲಿ ಶವ ಪತ್ತೆ ಆಗಿದೆ. ಅಲ್ಲದೆ, ಬಾಲಕಿಯ ಹೃದಯ ಹಾಗೂ ಶ್ವಾಸಕೋಶ ಕಾಣೆ ಆಗಿರುವುದಾಗಿ ತಿಳಿದುಬಂದಿದೆ. ಆರೋಪಿಗಳಾದ ಅಂಕುಲ್ ಹಾಗೂ ಬೀರನ್​ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಇವರಿಬ್ಬರೂ ಪರಶುರಾಮ್​ ಹೆಸರನ್ನು ಬಾಯ್ಬಿಟ್ಟಿದ್ದಾರೆ.


ಇದನ್ನೂ ಓದಿ: ಜಾತಿ ದ್ವೇಷಕ್ಕೆ ದಲಿತ ಕುಟುಂಬದ ಹತ್ಯೆ: ಕೊಲೆ ಮಾಡಲು ಮಗನನ್ನು ಪ್ರಚೋದಿಸಿದ ತಂದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights