‘ಭಾರತವನ್ನು ನೋಡಿ, ಅದು ಹೊಲಸು, ಅಲ್ಲಿನ ಗಾಳಿಯು ಹೊಲಸು’: ಡೊನಾಲ್ಡ್ ಟ್ರಂಪ್
ಹವಮಾನ ಬದಲಾವಣೆಯ ಬಗ್ಗೆ ಶುಕ್ರವಾರ ನಡೆದ ಯುಸ್ ಅಧ್ಯಕ್ಷೀಯ ಅಭ್ಯರ್ಥಿಗಳ ಅಂತಿಮ ಚರ್ಚೆಯಲ್ಲಿ ಭಾರತದ ಬಗ್ಗೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಗಾಳಿ “ಹೊಲಸು” ಎಂದು ಹೇಳಿದ್ದಾರೆ.
ಅಮೆರಿಕಾದ ಟೆನ್ನೆಸ್ಸೀಯ ನ್ಯಾಶ್ವಿಲ್ಲೆಯಲ್ಲಿ ತಮ್ಮ ಎದುರಾಳಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ. “ಚೀನಾ ನೋಡಿ, ಅದು ಎಷ್ಟು ಹೊಲಸು. ರಷ್ಯಾವನ್ನು ನೋಡಿ, ಭಾರತವನ್ನು ನೋಡಿ – ಇದು ಹೊಲಸು, ಅಲ್ಲಿನ ಗಾಳಿಯು ಕೊಳಕಾಗಿದೆ” ಎಂದು ಹೇಳಿದ್ದಾರೆ.
“ನಾವು ಟ್ರಿಲಿಯನ್ ಗಟ್ಟಲೆ ಡಾಲರ್ಗಳನ್ನು ತೆಗೆದುಕೊಳ್ಳಬೇಕಾಗಿದೆ, ನಮಗೆ ತುಂಬಾ ಅನ್ಯಾಯವಾಗಿದೆ. ಅದಕ್ಕಾಗಿ ನಾನು ಪ್ಯಾರಿಸ್ ಒಪ್ಪಂದದಿಂದ ಹೊರನಡೆದಿದ್ದೇನೆ” ಎಂದು ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡಿದ ಟ್ರಂಪ್ ಹೇಳಿದರು.
ಸೆಪ್ಟೆಂಬರ್ 29 ರಂದು ನಡೆದ ಮೊದಲ ಚರ್ಚೆಯಲ್ಲೂ ಭಾರತದ ಬಗ್ಗೆ ದೂಷಣಾತ್ಮಕ ಹೇಳಿಕೆ ನೀಡಿದ್ದರು. ಅಂದಿನ ಚರ್ಚೆಯಲ್ಲಿ ಚೀನಾ ಮತ್ತು ರಷ್ಯಾದೊಂದಿಗೆ ಭಾರತವನ್ನು ಸೇರಿಸಿದ್ದ ಟ್ರಂಪ್, ಜಾಗತಿಕ ಮಾಲಿನ್ಯಕ್ಕೆ ಈ ದೇಶಗಳು ಕೊಡುಗೆ ಹೆಚ್ಚಾಗಿದೆ. “ಚೀನಾ ಗಾಳಿಯಲ್ಲಿ ನಿಜವಾದ ಕೊಳೆಯನ್ನು ಹೊರಸೂಸುತ್ತಿದೆ. ರಷ್ಯಾ-ಭಾರತವೂ ಅದನ್ನೇ ಮಾಡುತ್ತಿವೆ. ಅವರೆಲ್ಲರೂ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ” ಎಂದು ಟ್ರಂಪ್ ಹೇಳಿದ್ದರು.
ಅಮೆರಿಕಾವೂ “ಇಂಗಾಲದ ಹೊರಸೂಸುವಿಕೆಯಲ್ಲಿ ಕಡಿಮೆ ಸಂಖ್ಯೆಯನ್ನು ಹೊಂದಿದೆ” ಎಂದು ಹೇಳಿದ ಟ್ರಂಪ್, ಚೀನಾ, ರಷ್ಯಾ, ಭಾರತ ರಾಷ್ಟ್ರಗಳು ವಾಯುಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಹೇಳಿದರು.
ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಭಾರತದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಲಿಲ್ಲ.
ಇಡೀ ಜಗತ್ತಿನಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ದೇಶದಲ್ಲಿ 2010ರಿಂದ ಪ್ರತಿವರ್ಷ 2.5 ಪಾಟಿಕಲ್ಸ್ ಮ್ಯಾಟರ್ (ಪಿಎಂ) ಮಾಲಿನ್ಯ ಕಣದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಅಕಾಲಿಕ ಮರಣಕ್ಕೂ ಇದೇ ಕಾರಣ ಎಂದು ಸ್ಟೇಟ್ ಆಫ್ ಗ್ಲೋಬಲ್ ಏರ್ 2020 (ಎಸ್ಒಜಿಎ) ಹೇಳಿದೆ.
ಇದನ್ನೂ ಓದಿ: ವಾಯುಮಾಲಿನ್ಯದಲ್ಲಿ ಭಾರತವೇ ನಂ.1 : ಅಕಾಲಿಕ ಮರಣಕ್ಕೂ ಅಶುದ್ಧ ಗಾಳಿಯೇ ಕಾರಣ!

