ಪುನೀತ್‌ ವಿರುದ್ದ ಅವಹೇಳನಾಕಾರಿ ಪೋಸ್ಟ್‌; ಆರೋಪಿ ಬಂಧನ

ಚಂದನವನದ ರಾಜಕುಮಾರ ನಮ್ಮನೆಲ್ಲರನ್ನು ಅಗಲಿ ನಾಲ್ಕು ದಿನಗಳಾಗಿವೆ. ಆದರೂ, ಅವರು ಇಲ್ಲ ಎಂಬುದನ್ನು ನಂಬುವುದೂ ಕೂಡ ಅಸಾಧ್ಯವೆನಿಸುತ್ತಿದೆ. ಅಪ್ಪುರನ್ನು ನೆನೆದು ಅಭಿಮಾನಿಗಳು ದುಃಖದಲ್ಲಿದ್ದಾರೆ. ಇದೇ ವೇಳೆ, ಕಿಡಿಗೇಡಿಯೊಬ್ಬ ಪುನೀತ್‌ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಪುನೀತ್‌ ಕೊನೆಯುಸಿರೆಳೆದ ದಿನದಿಂದ ಸಂಸ್ಕಾರದ ದಿನದ ವರೆಗೂ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಡಾ. ರಾಜಕುಮಾರ್ ಸಾವನ್ನಪ್ಪಿದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳು ಮತ್ತೆ ನಡೆಯಬಾರದು, ಅಭಿಮಾನಿಗಳು ಮದ್ಯ ಸೇವಿಸಿ, ಅಚಾತುರ್ಯಗಳನ್ನು ಮಾಡಬಹುದು ಎಂಬ ಮುನ್ನೆಚ್ಚರಿಕೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು.

ಇದನ್ನು ವಿರೋಧಿಸಿದ್ದ ರಿತ್ವಿಕ್ಸ್‌ ಎಂಬಾತ, ಹೇಗೋ ಮದ್ಯ ಪಡೆದುಕೊಂಡಿದ್ದ, ತಾನಗೆ ಮದ್ಯ ಸಿಕ್ಕಿರುವುದಾಗಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದ ಆತ, ರಾಜ್​ಕುಮಾರ್​​ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ’ ಎಂದು ಬರೆದಿದ್ದ.

ಆತನ ಪೋಸ್ಟ್‌ನಿಂದ ಆಕ್ರೋಶಗೊಂಡಿದ್ದ ಅಭಿಮಾನಿಗಳು ಆತನ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಆರೋಪಿಯ ವಿರುದ್ದ ಬೆಂಗಳೂರು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​ ತಿಳಿಸಿದ್ದಾರೆ.

ರಿತ್ವಿಕ್ಸ್‌ನ ಪೋಸ್ಟ್‌ ವಿರುದ್ದ​ ಕಿಚ್ಚ ಸುದೀಪ್​ ಪುತ್ರಿ ಸಾನ್ವಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಕೇವಲ ಆಲ್ಕೋಹಾಲ್​ಗಾಗಿ ಪುನೀತ್​ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ?’ ಎಂದು ಸಾನ್ವಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಇದೇ ಮೊದಲು: ಪುನೀತ್ ಅವರ ಕಣ್ಣುಗಳನ್ನು ಇಬ್ಬರಿಗಲ್ಲ, ನಾಲ್ವರಿಗೆ ದಾನ ಮಾಡಲಾಗಿದೆ!

Spread the love

Leave a Reply

Your email address will not be published. Required fields are marked *