ಶಿವಸೇನೆಯ ಭದ್ರಕೋಟೆ ಕೊಂಕಣದಲ್ಲಿ BJP ಆಕ್ರಮಣ; ಮಹಾರಾಷ್ಟ್ರದಲ್ಲಿ ಕೇಸರಿ ಕದನ!

ಮಹಾರಾಷ್ಟ್ರ ಸಿಎಂ ಉದ್ದವ್‌ ಠಾಕ್ರೆ ನೇತೃತ್ವದ ಶಿವಸೇನೆಯ ಭದ್ರ ನೆಲೆಯಾಗಿದ್ದ ಮುಂಬೈನಲ್ಲಿ ಆಕ್ರಮಣಕಾರಿಯಾಗಿ ನೆಲೆಯೂರಿರುವ ಬಿಜೆಪಿ, ಇದೀಗ, ಶಿವಸೇನೇಯ ಎರಡನೇ ಭದ್ರಕೋಟೆಯಾಗಿರುವ ಕೊಂಕಣದ ಕರಾವಳಿ ತೀರವನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿದೆ.

2014 ರಿಂದ ಬಿಜೆಪಿ ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೂ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಿಂಧುದುರ್ಗ್‌ಗೆ ಭಾರನುವಾರ ಭೇಟಿ ನೀಡಿದ್ದು, ಇದು ಶಿವಸೇನೆಯೊಂದಿಗೆ ತನ್ನ ಭದ್ರಕೋಟೆಗಳಲ್ಲಿ ಮುಕ್ತ ಯುದ್ಧವನ್ನು ಸೂಚಿಸುತ್ತದೆ.

“ನಾವು ಕಳೆದ ಕೆಲವು ವರ್ಷಗಳಿಂದ ಉದ್ದೇಶಪೂರ್ವಕವಾಗಿ ಕೊಂಕಣ ಪ್ರದೇಶದಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ನಾರಾಯಣ್ ರಾಣೆ ಅವರು ಬಿಜೆಪಿಗೆ ಸೇರಿದ ನಂತರ ನಾವು ವಿಶೇಷವಾಗಿ ಸಿಂಧುದುರ್ಗ್ ಜಿಲ್ಲೆಯಲ್ಲಿ ಹೆಜ್ಜೆ ಹಾಕಿದ್ದೇವೆ. ಅಮಿತ್ ಶಾ ಜಿ ಅವರ ಕೊಂಕಣ ಪ್ರವಾಸವು ಈ ಪ್ರದೇಶದಲ್ಲಿ ಬಿಜೆಪಿಯ ಬದ್ಧತೆಯನ್ನು ಬಲಪಡಿಸಿದೆ” ಎಂದು ಬಿಜೆಪಿ ಎಂಎಲ್‌ಸಿ ಪ್ರಸಾದ್ ಲಾಡ್ ಹೇಳಿದ್ದಾರೆ. (ಲಾಡ್‌ ಅವರು ಈ ಪ್ರದೇಶದಲ್ಲಿ ಪಕ್ಷದ ವಿಸ್ತರಣೆಯನ್ನು ನೋಡಿಕೊಳ್ಳುತ್ತಿದ್ದಾರೆ.)

ಶಿವಸೇನೆಯ ಮುಖಂಡ(ಶಿವ ಸೈನಿಕ್‌)ರಾಗಿದ್ದ ರಾಣೆ, ಕಾಂಗ್ರೆಸ್‌ ಸೇರಿದ್ದರು. 2017ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ.

ಸಿಂಧುದುರ್ಗ್‌ನಲ್ಲಿ ಅಮಿತ್ ಶಾ

ರಾಣೆ ಮಾಲೀಕತ್ವದಲ್ಲಿ ನಿರ್ಮಿಸಲಾಗಿರುವ ಸಿಂಧುದುರ್ಗ್ ಶಿಕ್ಷನ್ ಪ್ರಸಾರಕ್ ಮಂಡಲ್ ನಡೆಸುತ್ತಿರುವ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಲು ಶಾ ಅವರು ಭಾನುವಾರ ರಾಣೆಯ ತವರು ಕ್ಷೇತ್ರವಾದ ಸಿಂಧುದುರ್ಗ್‌ನ ಕುಡಾಲ್ ಗೆ ಭೇಟಿ ನೀಡಿದರು. ಸಿಎಂ ಠಾಕ್ರೆ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಲು ಅವರು ಆ ವೇದಿಕೆಯನ್ನು ಬಳಸಿಕೊಂಡರು.

ಎಂವಿಎ ರಚಿಸಲು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಶಿವಸೇನೆ ತನ್ನ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಸಿದ್ಧಾಂತಗಳನ್ನು ತೊರೆದಿದೆ ಎಂದು ಶಾ ಆರೋಪಿಸಿದರು.

ಬಾಳಾ ಠಾಕ್ರೆ
ಬಾಳಾ ಠಾಕ್ರೆ

2019 ರ ಚುನಾವಣೆಯ ನಂತರ ಕೇಸರಿ ಮೈತ್ರಿ ಅಧಿಕಾರಕ್ಕೆ ಬಂದರೆ ಸಿಎಂ ಹುದ್ದೆಯನ್ನು ಹಂಚಿಕೊಳ್ಳುವ ಭರವಸೆಯನ್ನು ಬಿಜೆಪಿ ನೀಡಿರಲಿಲ್ಲ. ಅದರೆ, ನಾವು ಮೋಸ ಮಾಡಿದ್ದೇವೆ ಎಂದು ಠಾಕ್ರೆ ಸುಳ್ಳು ಹೇಳುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: BJP ಸರ್ಕಾರದ ಪರ ಒಂದೇ ರೀತಿ ಟ್ವೀಟ್‌ ಮಾಡಿದ ಸೆಲೆಬ್ರಿಟಿಗಳು: ತನಿಖೆಗೆ ಮಹಾ ಸರ್ಕಾರ ಆದೇಶ!

“ಕೊಂಕಣದಲ್ಲಿ ಬಿಜೆಪಿಯ ಕೆಲಸದಿಂದ ಶಿವಸೇನೆಗೆ ಹಿನ್ನಡೆ ಉಂಟಾಗುತ್ತಿದೆ.  ರಾಣೆ ಪ್ರಾಯೋಗಿಕವಾಗಿ ಸಿಂಧುದುರ್ಗ್‌ನಲ್ಲಿ ಶಿವಸೇನೆಯನ್ನು ಮುಗಿಸಿದ್ದಾರೆ. ಇಲ್ಲಿನ ಹಿರಿಯ ಶಿವಸೇನೆ ನಾಯಕರು ಬಿಜೆಪಿ ಸೇರುವ ಹಾದಿಯಲ್ಲಿದ್ದಾರೆ. ರತ್ನಾಗಿರಿಯಲ್ಲಿ, ಶಿವಸೇನೆಯೊಳಗೆ ಬಂಡಾಯ-ಬಣವಾದವಿದೆ. ಈಗ ಅಮಿತ್ ಷಾ ಅವರ ಭೇಟಿ ಕೊಂಕಣದಲ್ಲಿ ಬಿಜೆಪಿಯ ಬೆಳವಣಿಗೆಗೆ ಮತ್ತೊಂದು ಹಜ್ಜೆ ಮೇಲೆರಿದೆ” ಎಂದು ಲಾಡ್ ಹೇಳಿದ್ದಾರೆ.

“ಅಮಿತ್ ಷಾ ಒಂದು ನಿರ್ದಿಷ್ಟ ಜಿಲ್ಲೆಗೆ ಭೇಟಿ ನೀಡಿದಾಗ, ಕೇಂದ್ರ ಸಚಿವರಾಗಿ ಅವರು ಜಿಲ್ಲೆಗೆ ಕೆಲವು ಯೋಜನೆಗಳನ್ನು ಘೋಷಣೆ ಮಾಡುತ್ತಾರೆ ಮತ್ತು ಅದರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಬದಲಾಗಿ ಅವರು ಕೇವಲ ಶಿವಸೇನೆ, ಸಿಎಂ ಮತ್ತು ಸರ್ಕಾರವನ್ನು ಟೀಕಿಸಿದ್ದಾರೆ.” ಹೀಗಾಗಿ ಕೊಂಕಣದಲ್ಲಿ ನಮ್ಮ ಪಕ್ಷ ಭಯಪಡಬೇಕಾಗಿಲ್ಲ ಎಂದು ರತ್ನಾಗಿರಿ-ಸಿಂಧುದುರ್ಗ್ ಕ್ಷೇತ್ರದ ಸಂಸದ ಶಿವಸೇನೆಯ ವಿನಾಯಕ್ ರೌತ್ ಹೇಳಿದರು.

ನಾನು ಅಮಿತ್‌ ಶಾ ಭೇಟಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರ ಭಾಷಣವು ಬಹುತೇಕ ಪ್ರತೀಕಾರವಾಗಿತ್ತು. ಮಂಗಳವಾರ ಸಿಂಧುದರ್ಗ್‌ನ ವೈಭವಾಡಿ ಪುರಸಭೆಯ ಏಳು ಬಿಜೆಪಿ ಕೌನ್ಸಿಲರ್‌ಗಳು ಶಿವಸೇನೆಗೆ ಸೇರಿದ್ದಾರೆ. ಇದು ಸ್ಥಳೀಯ ಬಿಜೆಪಿ ಘಟಕಕ್ಕೆ ಒಂದು ಹೊಡೆತವನ್ನು ನೀಡಿದೆ. ಷಾ ಅವರ ಭೇಟಿಯನ್ನು ಲೆಕ್ಕಿಸದೆ ಸೇನಾ ಇನ್ನೂ ಈ ಪ್ರದೇಶದ ಮೇಲೆ ಹಿಡಿತ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.

ಕೊಂಕಣದಲ್ಲಿ ವಿಸ್ತರಿಸಲು ಬಿಜೆಪಿಯ ಪ್ರಯತ್ನಗಳು:

1989 ರಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ, ಕೊಂಕಣದ ಕ್ಷೇತ್ರಗಳು ಯಾವಾಗಲೂ ಶಿವಸೇನಾ ವಶಕ್ಕೆ ಹೋಗುತ್ತಿದ್ದವು. ಹೀಗಾಗಿ ಬಿಜೆಪಿ ಆ ಪ್ರದೇಶದಲ್ಲಿ ವಿಸ್ತರಣೆಗೊಳ್ಳಲಿಲ್ಲ. ಆದರೆ, ಸೇನಾವನ್ನು ಅವಲಂಬಿಸದೇ ಮಹಾರಾಷ್ಟ್ರದಲ್ಲಿ ತನ್ನ ಪ್ರಾಬಲ್ಯ-ನಿಯಂತ್ರಣ ಸಾಧಿಸಲು ಮುಂದಾದ ಬಿಜೆಪಿ 2014ರಿಂದ ಬದಲಾಗಲು ಯತ್ನಿಸುತ್ತಿದೆ.

ಹೀಗಾಗಿ, ಕೊಂಕಣದಲ್ಲಿ ಬಿಜೆಪಿ ಬೆಳೆಯಲು ಮಾಡುತ್ತಿರುವ ಪ್ರಯತ್ನಗಳು ಸೇನಾಗೆ ಗೋಚರವಾದವು. ಇದಕ್ಕಾಗಿ ಠಾಕ್ರೆ ಜೊತೆಗೆ ಭಿನ್ನಾಭಿಪ್ರಾಯದಿಂದ ಶಿವಸೇನೆ ತೊರೆದು 2005ರಲ್ಲಿ ಕಾಂಗ್ರೆಸ್‌ ಸೇರಿದ್ದ ರಾಣೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತು.

ಅಲ್ಲದೆ, ಫಡ್ನವೀಸ್ ಅವರ ವಿಶ್ವಾಸಾರ್ಹರಾಗಿದ್ದ ಪ್ರವೀಣ್ ದಾರೇಕರ್ ಮತ್ತು ಲಾಡ್ ಅವರನ್ನು ಕೊಂಕಣ ಜಿಲ್ಲೆಗಳಲ್ಲಿ ಬಿಜೆಪಿ ಬಲಪಡಿಸಲು ಜವಬ್ದಾರಿ ನೀಡಿತು.

ಕೊಂಕಣದಲ್ಲಿ ಬಿಜೆಪಿಯ ಪ್ರಮುಖ ಪಿಚ್‌ ಎಂದು ಗುರುತಿಸಲಾಗಿರುವ ರತ್ನಾಗಿರಿ ಮತ್ತು ಸಿಂಧುದುರ್ಗ್‌ನ ಯುವಜನರು ಉದ್ಯೋಗಕ್ಕಾಗಿ ಪಕ್ಕದ ದೊಡ್ಡ ನಗರಗಳನ್ನು ಅವಲಂಬಿಸಿದ್ದಾರೆ. ಇದಕ್ಕಾಗಿ ಈ ಪ್ರದೇಶದಲ್ಲಿ ಹಿಂದಿನ ಫಡ್ನವೀಸ್ ಸರ್ಕಾರವು ನಾನಾರ್ ಸಂಸ್ಕರಣಾಗಾರ ಯೋಜನೆಯನ್ನು ಸ್ಥಾಪಿಸಲು ಮುಂದಾಗಿತ್ತು. ಆದರೆ, ಇದಕ್ಕೆ ಶಿವಸೇನೆ ತೀವ್ರವಾಗಿ ವಿರೋಧಿಸಿತ್ತು. ಈ ಯೋಜನೆ ಇಂದಿಗೂ ಚರ್ಚೆಯ ವಿಚಾರವಾಗಿಯೇ ಉಳಿದಿದೆ.

ಹೀಗಾಗಿ, “ಈಗ ಸಾಕಷ್ಟು ಸಂಸ್ಥೆಗಳು ಯೋಜನೆಯ ಪರವಾಗಿವೆ. ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿ ಶೀಘ್ರದಲ್ಲೇ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲು ನಾವು ಯೋಜಿಸುತ್ತಿದ್ದೇವೆ” ಎಂದು ಲಾಡ್‌ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ, ಅದರಲ್ಲೂ ವಿಶೇಷವಾಗಿ ರಾಣೆಯ ತವರು ಜಿಲ್ಲೆಯಾದ ಸಿಂಧುದುರ್ಗ್‌ನಲ್ಲಿ ಬಿಜೆಪಿ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದ್ದಾರೆ

ಆದಾಗ್ಯೂ,  “ಕೊಂಕಣದಲ್ಲಿ ತನ್ನ ಪ್ರಭಾವ ಹೆಚ್ಚುತ್ತಿದೆ ಎಂದು ಬಿಜೆಪಿ ಹೇಳಿದಾಗ ಇದರ ಅರ್ಥವೇನು? ಸಿಂಧುದುರ್ಗ್ ಮಾತ್ರ ಕೊಂಕಣ ಅಲ್ಲ. ಇದು ಕೇವಲ ಮೂರು ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಅದರಲ್ಲಿ ಬಿಜೆಪಿಗೆ ಕೇವಲ ಒಂದು ಸ್ಥಾನವಿದೆ. ಬಿಜೆಪಿ ಕೊಂಕಣದಲ್ಲಿ ಶಿವಸೇನೆಯನ್ನೂ ಮೀರಿ ಮುಂದೆ ಹೋಗಲು ಸಾಧ್ಯವಿಲ್ಲ” ಎಂದು ಶಿವಸೇನಾ ವಿನಾಯಕ್‌ ರೌತ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಆಂಧ್ರ ಪ್ರದೇಶ ಚುನಾವಣೆ: YSR ಕಾಂಗ್ರೆಸ್‌ ವಿರುದ್ದ ಖಾತೆ ತೆರೆಯುತ್ತಾ BJP?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights