Corona politics : red ಜೋನ್‍ ನಿಂದ Green ಜೋನ್, ನಿಲ್ಲದ ರಾಮನಗರ ರಾಜಕೀಯ…

ಸೊಂಕಿತರ ಕ್ವಾರಂಟಿಯಿಂದ ಹಿಡಿದು ಲಾಕ್‌ಡೌನ್ ಸಡಿಲದವರೆಗೆ ರಾಮನಗರ ರಾಜಕೀಯ ನಿಲ್ಲುವ ಹಾಗೆ ಕಾಣು ತ್ತಿಲ್ಲಾ.  ಕೊರೋನಾ ಸಂದರ್ಭದಲ್ಲಿ ಇದು ಮತ್ತಷ್ಟು ಜೋರು ಪಡೆಯುತ್ತಿದೆ’ರಾಮನಗರ ರಾಜಕೀಯ’…  ರಾಜ್ಯದಲ್ಲಿ ಕೊರೋನಾ ಅಟ್ಟಹಾಸದಷ್ಟೇ ಜೋರು ಪಡೆದಿದೆ ರಾಮನಗರ ರಾಜಕೀಯ. ಸೊಂಕಿತರ ಕ್ವಾರಂಟಿಯಿಂದ ಹಿಡಿದು ಲಾಕ್‌ಡೌನ್ ಸಡಿಲದವರೆಗೆ ಈ ರಾಜಕೀಯ ಸಾಗಿದೆ.

ರಾಮನಗರದ ಬಗ್ಗೆ ಸರಕಾರ ತಾತ್ಸಾರ ಭಾವನೆ ತೋರುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಆರೋಪಿಸಿದ್ದಾರೆ. ಪಾದರಾಯನಪುರ ಸೋಂಕಿತನ್ನು ರಾಮನಗರ ಜೈಲಿಗೆ ವರ್ಗಾಯಿಸಿದ್ದರಿಂದ ಹಿಡಿದು ಈಗ ಲಾಕ್‌ಡೌನ್ ನಿಯಮ ಸಡಿಲದವರೆಗೂ ಜಿಲ್ಲೆಯ ಬಗ್ಗೆ ಸರಕಾರದ ಮನೋಭಾವವನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕನಕಪುರ ಬೆಟ್ಟದಲ್ಲಿ ಎಸು ಪ್ರತಿಮೆ ಸ್ಥಾಪಿಸುವ ಸಲುವಾಗಿ ಉಂಟಾಗಿದ್ದ ವಿವಾದದಿಂದ ಬಿಜೆಪಿ ರಾಮನಗರದಲ್ಲಿ ಕಾಲುರುವ ಪ್ರಯತ್ನ ನಡೆಸಿತ್ತು.  ಆಗ ಆರಂಭವಾದ ವಿವಾದ ಿಗ ಹೊಸ ರೂಪ ಪಡೆದುಕೊಂಡಿದೆ.. red zone ನಿಂದ green zone ನಲ್ಲಿದ್ದ ರಾಮನಗರಕ್ಕೆ ಪಾದರಾಯನಪುರ ಸೋಂಕಿತರನ್ನು  ವರ್ಗಾಯಿಸಿದ್ದು ವಿವಾದ ಹೊಸ ತಿರುವು ಪಡೆದುಕೊಂಡಿದೆ..

ಜಿಲ್ಲಾ ಕಾರಾಗೃಹದಿಂದ ಸೋಂಕಿತ ಹಾಗೂ ಗಲಭೆಕೋರರನ್ನು ಬೆಂಗಳೂರಿಗೆ ವಾಪಸ್ ಕಳುಹಿಸಲಾಯಿತಾದರೂ ಅದು ಹೊತ್ತಿಸಿದ ವಿವಾದದ ಬೆಂಕಿ ಇನ್ನೂ ಆರಿದಂತಿಲ್ಲ. ಈ ಘಟನೆ ಬೆನ್ನಲ್ಲಿಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮವನ್ನು ಸರಕಾರ ಸಡಿಲಗೊಳಿಸಿ ಆದೇಶ ಹೊರಡಿಸಿತ್ತು. ಅದರಂತೆ ಹಸಿರು ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅನುವು ಮಾಡಿಕೊಡಲಾಗಿತ್ತು.

ಆದರೆ ರಾಮನಗರ ಹಸಿರವ ಪಟ್ಟಿಯಲ್ಲಿದ್ದರೂ ಜಿಲ್ಲೆಯಲ್ಲಿ ನಿರೀಕ್ಷತ ಮಟ್ಟದಲ್ಲಿ ಸಡಿಲಿಕೆ ಆಗಿಲ್ಲ ಎಂಬುದು ಈಗ ಕೇಳಿಬರುತ್ತಿರುವ ಆರೋಪ. ರಾಮನಗರ ಜಿಲ್ಲೆಯಾದ್ಯಂತ ಕಾರ್ಖಾನೆಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಹಸಿರು ನಿಶಾನೆ ತೋರಬೇಕು ಎಂದು ಕುಮಾರಸ್ವಾಮಿ ಒತ್ತಾಐ ಮಾಡಿದ್ದಾರೆ.

ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳು ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಉದ್ದಿಮೆದಾರರು ಮತ್ತು ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು.

ಕರೋನಾ ವೈರಸ್ ಮುಕ್ತವಾಗಿರುವ ಜಿಲ್ಲೆಗಳಲ್ಲಿ ನೀಡಿರುವ ವಿನಾಯ್ತಿಯನ್ನು ತಕ್ಷಣವೇ ರಾಮನಗರ ಜಿಲ್ಲೆಗೂ ಅನ್ವಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಹೇಳುವ ಮೂಲಕ ಜಿಲ್ಲೆಯಲ್ಲಿ ಇನ್ನೂ ವಿನಾಯ್ತಿ ಜಾರಿಯಾಗಿಲ್ಲ ಎಂಬ ಆರೋಪವನ್ನು ಕುಮಾರಸ್ವಾಮಿ ಪರೋಕ್ಷವಾಗಿ ಮಾಡಿದ್ದಾರೆ.

ಹೊರಗಿನಿಂದ ಬರುವ ಕಾರ್ಮಿಕರಿಗೆ ತಾತ್ಕಾಲಿಕ ನಿರ್ಬಂಧ ಮುಂದುವರಿಸಿದರೂ, 9 ಜಿಲ್ಲೆ ಗಳಿಗೆ ನೀಡಿರುವಂತೆ ರಾಮನಗರ ಜಿಲ್ಲೆಯ ಕಾರ್ಮಿಕರು ದುಡಿದು ತಿನ್ನಲು ತಕ್ಷಣವೇ ವಿನಾಯಿತಿ ಘೋಷಿಸಬೇಕು ಎಂದು ಎಚ್ಡಿಕೆ ಒತ್ತಾಯ ಮಾಡಿದ್ದಾರೆ.

ಆದರೆ ರಾಜ್ಯ ಸರಕಾರ ಈ ವಿಷಯದಲ್ಲಿ ಯಾವುದೇ ತಾರತಮ್ಯದ ಆರೋಪವನ್ನು ತಳ್ಳಿಹಾಕಿದೆ. ಸೋಂಕಿತರ ಸ್ಥಳಾಂತದಿಂದ ಹಿಡಿದು ನಿರ್ಬಂಧ ಸಡಿಲಿಕೆವರೆಗೆ ಎಲ್ಲವೂ ನಿಯಮಾನುಸಾರವೇ ನಡೆಯುತ್ತಿದೆ ಎಂದು ಸರಕಾರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಂವಲು ಯಾರು ತಯಾರಿಲ್ಲ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights