ಧಾರ್ಮಿಕ ಮೆರವಣಿಗೆ ನಿರಾಕರಿಸಿದ ಪೊಲೀಸರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಸಿಖ್ ಗುಂಪು!

ರಾಜ್ಯದಲ್ಲಿ ಕೋವಿಡ್ ಉಲ್ಬಣದಿಂದಾಗಿ ಧಾರ್ಮಿಕ ಮೆರವಣಿಗೆಗೆ ಅವಕಾಶ ನೀಡಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಕತ್ತಿ ಹೊತ್ತ ಸಿಖ್ ಪ್ರತಿಭಟನಾಕಾರರ ಗುಂಪೊಂದು ನಿನ್ನೆ ಸಂಜೆ ಮಹಾರಾಷ್ಟ್ರದ ನಾಂದೇಡ್‌ನ ಗುರುದ್ವಾರವೊಂದರಲ್ಲಿ ಬ್ಯಾರಿಕೇಡ್‌ಗಳನ್ನು ಭೇದಿಸಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ಪರಿಣಾಮ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 18 ಜನರನ್ನು ವಶಕ್ಕೆ ಪಡೆದು ಹಿಂಸಾಚಾರ ಮತ್ತು ರಾಜ್ಯದ ಕೋವಿಡ್ ಸುರಕ್ಷತಾ ನಿಯಮಗಳ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಗುರುದ್ವಾರ ಗೇಟ್‌ನ್ನು ತಳ್ಳಿ ಹಾಕಿ ಕತ್ತಿಗಳಿಂದ ಶಸ್ತ್ರಸಜ್ಜಿತವಾದ ಜನರ ಗುಂಪೊಂದು ನುಗ್ಗಿದೆ. ನಂತರ ಗುಂಪು ಪೊಲೀಸ್ ಸ್ಟ್ಯಾಂಡಿಂಗ್ ಗಾರ್ಡ್ ಮೇಲೆ ಹಲ್ಲೆ ನಡೆಸುತ್ತದೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಘಟನೆಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಪೊಲೀಸ್ ಕಾರುಗಳಿಗೆ ಹಾನಿಯಾಗಿದೆ.

ವೈರಸ್ ನಿರ್ಬಂಧದಿಂದಾಗಿ ಗುರುದ್ವಾರದ “ಹೋಲಾ ಮೊಹಲ್ಲಾ” ಮೆರವಣಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಶೆವಾಲೆ ಗುರುದ್ವಾರ ಅಧಿಕಾರಿಗಳು ಮತ್ತು ಪುರೋಹಿತರೊಂದಿಗೆ ಮಾತನಾಡಿದ್ದರು. ಅವರಿಗೆ ಪರಿಸ್ಥಿತಿಯನ್ನು ವಿವರಿಸಿದ್ದರು. ಆದ್ದರಿಂದ ಗುರುದ್ವಾರ ಅಧಿಕಾರಿಗಳು ಈ ವರ್ಷ ಯಾವುದೇ ಮೆರವಣಿಗೆ ನಡೆಯುವುದಿಲ್ಲ ಮತ್ತು ಕಡಿಮೆ ಜನರೊಂದಿಗೆ ಆಚರಣೆಯನ್ನು ನಡೆಸುತ್ತೇವೆ ಎಂದು ಒಪ್ಪಿಕೊಂಡಿದ್ದರು.

ಕಡಿಮೆ ಜನರೊಂದಿಗೆ ಆಚರಣೆ ಸಂಜೆ 4 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಕೆಲವು ಯುವಕರು ಅಸಹನೆ ತೋರಿದರು. ರಾಜ್ಯದಲ್ಲಿ ಕೂಟಗಳನ್ನು ನಿಷೇಧಿಸಿದರೂ, ಸ್ಥಳೀಯರು ಮೆರವಣಿಗೆ ಮಾಡಲು ನಿರ್ಧರಿಸಿದರು. ಗುರುದ್ವಾರ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರೂ, ಸಿಖ್ ಧಾರ್ಮಿಕ ಧ್ವಜವನ್ನು ಗುರುದ್ವಾರ ದ್ವಾರಕ್ಕೆ ಕರೆತಂದಾಗ ಈ ಘಟನೆಯಲ್ಲಿ ಭಾಗವಹಿಸಿದವರು ಪೊಲೀಸರೊಂದಿಗೆ ವಾದಿಸಲು ಪ್ರಾರಂಭಿಸಿದರು. ನಂತರ ಒಂದು ದೊಡ್ಡ ಗುಂಪು ಗೇಟ್‌ನಿಂದ ಹೊರಗೆ ನುಗ್ಗಿತು.

ಕಳೆದ ವಾರ ಮಹಾರಾಷ್ಟ್ರವು ವೈರಸ್‌ನ ಭೀಕರ ಉಲ್ಬಣಕ್ಕೆ ಸಾಕ್ಷಿಯಾಗಿದ್ದು, ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಸರಣಿ ನಿರ್ಬಂಧಗಳನ್ನು ಘೋಷಿಸಿದೆ.

ಸೋಂಕಿನ ಹರಡುವಿಕೆಯನ್ನು ತಡೆಯುವ ಕ್ರಮದ ಭಾಗವಾಗಿ ರಾಜ್ಯ ಸರ್ಕಾರವು ದೊಡ್ಡ ಕೂಟಗಳಿಗೆ ನಿರ್ಬಂಧಗಳನ್ನು ಭಾನುವಾರ ಪ್ರಕಟಿಸಿದೆ. ಜನರು ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸದ ಕಾರಣ ಲಾಕ್ ಡೌನ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ. ಆದರೂ ಸಾರ್ವಜನಿಕರು ಈ ರೀತಿ ವರ್ತನೆ ತೋರುತ್ತಿದ್ದಾರೆ.

ಮಹಾರಾಷ್ಟ್ರವು ಕಳೆದ 24 ಗಂಟೆಗಳಲ್ಲಿ 31,643 ಕೋವಿಡ್ ಸೋಂಕುಗಳು ಮತ್ತು 102 ಸಾವುಗಳನ್ನು ದಾಖಲಿಸಿದೆ. 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights