ಗರ್ಭಿಣಿಯನ್ನು ಬಲವಂತವಾಗಿ 3 ಕಿ.ಮೀ ಪೊಲೀಸ್ ಠಾಣೆಗೆ ನಡೆಸಿದ ಸಬ್ ಇನ್ಸ್‌ಪೆಕ್ಟರ್!

ತುಂಬು ಗರ್ಭಿಣಿ ಮಹಿಳೆಯನ್ನು ಬಲವಂತವಾಗಿ ಪೊಲೀಸ್ ಠಾಣೆಗೆ 3 ಕಿ.ಮೀ ನಡೆಸಿದ ಆರೋಪದಡಿ ಒಡಿಶಾ ಸಬ್ ಇನ್ಸ್‌ಪೆಕ್ಟರ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.

ಹೌದು…  ಮಯೂರ್ಭಂಜ್ ಜಿಲ್ಲೆಯ ಶರತ್ ಪೊಲೀಸ್ ಠಾಣೆಯ ಅಧಿಕಾರಿ (ಒಐಸಿ) ರೀನಾ ಬಕ್ಸಲ್ ಅವರನ್ನು ಮಾರ್ಚ್ 28 ರಂದು ಅಮಾನತುಗೊಳಿಸಲಾಗಿದೆ.

ಹೆಲ್ಮೆಟ್ ತಪಾಸಣೆ ವೇಳೆ  ಚಾಲನೆಯಲ್ಲಿ ಗರ್ಭಿಣಿ ಮಹಿಳೆಯನ್ನು ಮೂರು ಕಿಲೋಮೀಟರ್ ನಡೆದು ಹೋಗುವಂತೆ ಮಾಡಿದ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.

ಗುರುಬಾರಿ ಎಂಬ ಮಹಿಳೆ ತನ್ನ ಪತಿ ಬಿಕ್ರಮ್ ಬಿರುಲಿಯೊಂದಿಗೆ ಬೈಕ್‌ನಲ್ಲಿ ಆರೋಗ್ಯ ತಪಾಸಣೆಗಾಗಿ ಉದಾಲಾ ಉಪವಿಭಾಗ ಆಸ್ಪತ್ರೆಗೆ ಹೋಗುತ್ತಿದ್ದಾಗ ಅವರನ್ನು ಪೊಲೀಸರು ತಡೆದರು. ಬಿಕ್ರಮ್ ಹೆಲ್ಮೆಟ್ ಧರಿಸಿದ್ದರೆ, ಗುರುಬಾರಿ ಇರಲಿಲ್ಲ.

ಆರೋಗ್ಯ ಸ್ಥಿತಿಯ ಕಾರಣ ಪತ್ನಿ ಹೆಲ್ಮೆಟ್ ಧರಿಸಿಲ್ಲ ಎಂದು ಬಿಕ್ರಮ್ ಹೇಳಿದರೂ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ದಂಡ ವಿಧಿಸಿದ್ದಾರೆ.

ದಂಡ ಪಾವತಿಸಲು ಬಿಕ್ರಾಮ್ ಅವರನ್ನು ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ರೀನಾ ಬಕ್ಸಲ್ ಒತ್ತಾಯಿಸಿದ್ದು ಗರ್ಭಿಣಿ ಮಹಿಳೆ ಎಂದೂ ನೋಡದೆ ಬಿಸಿಲಿನಲ್ಲಿ ಮೂರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಠಾಣಗೆ ಹೋಗಿದ್ದಾರೆ.

ತನಿಖಾ ವರದಿಯ ಆಧಾರದ ಮೇಲೆ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights