ದೆಹಲಿ ಗಡಿಯಲ್ಲಿ ಅನ್ನದಾತರ ಪ್ರತಿಭಟನೆ : ಮೂವರು ಮಕ್ಕಳಿರುವ ರೈತ ಸಾವು…!

ದೆಹಲಿ-ಹರಿಯಾಣ ಗಡಿ ಬಳಿ ಪ್ರತಿಭಟನೆ ನಿರತ ಪಂಜಾಬ್‌ನ ರೈತ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ. ಕೇಂದ್ರ ಕೃಷಿ ಕಾನೂನುಗಳ ವಿರುದ್ಧ 22 ದಿನಗಳಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ 37 ವರ್ಷದ ವ್ಯಕ್ತಿ ಮೂವರು ಮಕ್ಕಳ ತಂದೆ ಶವವಾಗಿ ಪತ್ತೆಯಾಗಿದ್ದಾನೆ. ರೈತನಿಗೆ 10, 12 ಮತ್ತು 14 ವರ್ಷ ವಯಸ್ಸಿನ ಮೂವರು ಮಕ್ಕಳಿದ್ದಾರೆ. ವರದಿ ಪ್ರಕಾರ ರೈತ ಅಧಿಕ ಶೀತದಿಂದ ಸಾವನ್ನಪ್ಪಿದರು.

ದೆಹಲಿ-ಹರಿಯಾಣ ಗಡಿಯಲ್ಲಿ ನಡೆದ ಪ್ರತಿಭಟನೆಯ ಕೇಂದ್ರಬಿಂದುವಿನಲ್ಲಿ ಸಿಖ್ ಪಾದ್ರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ನಂತರ ಸಾವಿನ ವರದಿಗಳು ಹೊರಬಿದ್ದಿದೆ. ಹರಿಯಾಣದ ಗುರುದ್ವಾರದ ಅರ್ಚಕ ಬಾಬಾ ರಾಮ್ ಸಿಂಗ್ ಅವರು ಪ್ರತಿಭಟನೆಯನ್ನು ಬಲವಾಗಿ ಬೆಂಬಲಿಸಿದ್ದರು. ಇವರು ಸರ್ಕಾರದ ಅನ್ಯಾಯದ ಬಗ್ಗೆ ಅಸಮಧಾನಗೊಂಡು ನೋವು ಅನುಭವಿಸಿದ್ದರು.

ನವೆಂಬರ್ ಅಂತ್ಯದಲ್ಲಿ ಆಂದೋಲನ ಪ್ರಾರಂಭವಾದಾಗಿನಿಂದ 20 ಕ್ಕೂ ಹೆಚ್ಚು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎಂದು ರೈತ ಗುಂಪುಗಳು ಹೇಳಿಕೊಳ್ಳುತ್ತಿವೆ. ಹೆಚ್ಚುತ್ತಿರುವ ಚಳಿಗಾಲದ ಚಳಿ ಮತ್ತು ಉತ್ತರ ಭಾರತ ತಣ್ಣಗಿರುವ ಕಾರಣದಿಂದಾಗಿ ಅನೇಕರು ಬಳಲುತ್ತಿದ್ದಾರೆಂದು ಹೇಳಲಾಗುತ್ತಿದೆ.

ದೆಹಲಿ ಬಳಿಯ ಹೆದ್ದಾರಿಗಳಲ್ಲಿ ವಿವಿಧ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ರೈತರು ಹಲವಾರು ಹೊದಿಕೆಗಳು ಕಂಬಳಿ ಮತ್ತು ಹೀಟರ್‌ಗಳನ್ನು ಬಳಸುತ್ತಿದ್ದಾರೆ. ಆದರೂ ಕೊರೆಯುವ ಚಳಿಗೆ ಅನ್ನದಾತ ತತ್ತರಿಸಿ ಹೋಗಿದ್ದಾನೆ.

“ನಾವು ಶೀತ ಹವಾಮಾನದ ವಿರುದ್ಧ ಹೋರಾಡುತ್ತಿದ್ದೇವೆ ಮತ್ತು ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಶೀತದ ವಿರುದ್ಧ ಹೋರಾಡುತ್ತೇವೆ. ಮಳೆಯಾದರೂ ನಾವು ಬಗ್ಗುವುದಿಲ್ಲ” ಎಂದು ರೈತರು ಇಂದು ಬೆಳಿಗ್ಗೆ ಸಿಂಗು ಗಡಿಯಲ್ಲಿರುವ ಪ್ರಮುಖ ಪ್ರತಿಭಟನಾ ಸ್ಥಳದಲ್ಲಿ ಕೆಚ್ಚೆದೆಯ ಮಾತು ಆಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights