ಇಂದು ಸಾಯಿ ಪಲ್ಲವಿ, ವಿಜಯ್ ದೇವರಕೊಂಡ ಹುಟ್ಟುಹಬ್ಬ : ಸಂಭ್ರಮದಲ್ಲಿ ಸ್ಟಾರ್ ನಟ-ನಟಿ

ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ಸರಳ ಸುಂದರಿ ಸಾಯಿ ಪಲ್ಲವಿ ಅವರು ಇಂದು ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.

ಹೌದು… ದಕ್ಷಿಣ ಭಾರತದ ಜನಪ್ರಿಯ ‘ಸೆನ್ಸೇಷನಲ್ ಸ್ಟಾರ್’ ನಟ ವಿಜಯ್ ದೇವರಕೊಂಡ ಹಾಗೂ ನಟಿ ಸಾಯಿ ಪಲ್ಲವಿಗೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.  ದೇವರಕೊಂಡ ಹಾಗೂ ಸಾಯಿ ಪಲ್ಲವಿ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಹುಟ್ಟುಹಬ್ಬವೂ ಟ್ರೆಂಡಿಂಗ್ ಆಗಿದೆ.

ನಟಿ ಸಾಯಿ ಪಲ್ಲವಿ ಬಗ್ಗೆ ಸಿನಿಪ್ರಿಯರಿಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಾದ ಅಗತ್ಯವೇ ಇಲ್ಲ. ಇಡೀ ದಕ್ಷಿಣ ಭಾರತದಲ್ಲಿ ಅವರ ಖ್ಯಾತಿ ಅಷ್ಟರಮಟ್ಟಿಗೆ ಹಬ್ಬಿದೆ. ಈವರೆಗೂ ಅವರು ಮಾಡಿರುವುದು ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ. ಹಾಗಿದ್ದರೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಹಲವು ಪ್ರಶಸ್ತಿಗಳು ಅವರ ಮುಡಿಗೆ ಏರಿವೆ. ಚಿತ್ರರಂಗದಲ್ಲಿ ಯಾರನ್ನೂ ಕಾಪಿ ಮಾಡದೇ, ತಮ್ಮದೇ ಆದ ಹೊಸ ಶೈಲಿ ಮೂಲಕ ಅಭಿನಯ ಸಾಮರ್ಥ್ಯವನ್ನು ಅವರು ಪ್ರದರ್ಶಿಸಿದ್ದಾರೆ.  ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದು,  ಪ್ರೇಮಂ ಸಿನಿಮಾದಲ್ಲಿನ ನಟನೆಗೆ ಸಾಯಿ ಪಲ್ಲವಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಅದ್ಭುತ ನಟನೆಗಾಗಿ ಸಾಯಿ ಪಲ್ಲವಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು.

ಕಲಿ, ಫಿದಾ, ದಿಯಾ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಿ ಮತ್ತಷ್ಟು ಜನಪ್ರಿಯರಾಗಿದ್ದರು. ಸಾಯಿ ಪಲ್ಲವಿ ವೈದ್ಯೆಯಾಗಿದ್ದು, 2016ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದರು. ಜಾರ್ಜಿಯಾ ಯೂನಿರ್ವಸಿಟಿಯಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು.

ಇನ್ನೂ ತೆಲುಗಿನ ಸ್ಟಾರ್ ವಿಜಯ್ ದೇವರಕೊಂಡ ನುವ್ವಿಲಾ, ಯೆವ್ಡೆ ಸುಬ್ರಮಣ್ಯಂ ಸಿನಿಮಾದಲ್ಲಿನ ನಟನೆಯಿಂದ ವಿಜಯ್ ಜನಪ್ರಿಯರಾಗಿದ್ದರು. 2016ರ ಪೆಲ್ಲಿ ಚೂಪೂಲು ಸಿನಿಮಾದಲ್ಲಿನ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅರ್ಜುನ್ ರೆಡ್ಡಿ ಸಿನಿಮಾದಲ್ಲಿನ ನಟನೆಯಿಂದ ದೇವರಕೊಂಡ ಅಪಾರ ಜನಪ್ರಿಯರಾಗಿದ್ದಲ್ಲದೇ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗಳಿಸಿದ್ದರು. ಸಾವಿರಾರು ಅಭಿಮಾನಿಗಳನ್ನ ಹೊಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights