ಹಣ ಇಲ್ಲದಿದ್ದಾಗ ಮನೆಗೆ ಬೀಗ ಏಕೆ ಹಾಕಬೇಕು?; ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಚೀಟಿ ಬರೆದಿಟ್ಟ ಕಳ್ಳ!

ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಕದಿಯಲು ಹೋಗಿದ್ದ ಕಳ್ಳನೊಬ್ಬ ಅಲ್ಲಿ ಏನೂ ಸಿಗದೇ ನಿರಾಶೆಗೊಂಡಿದ್ದು, “ಹಣವಿಲ್ಲದಿದ್ದರೆ ಮನೆಗೆ ಬೀಕೆ ಏಕೆ ಹಾಕುತ್ತೀರಿ” ಎಂದು ಚೀಟಿ ಬರೆದಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳ ಬರೆದಿಟ್ಟಿದ್ದ ಚೀಟಿ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರಲ್ಲಿ ಕಳ್ಳರು “ಜಬ್ ಪೈಸೆ ನಹಿ ದೆ ತೋ ಲಾಕ್ ನಹಿ ಕರ್ನಾ ಥಾ ಕಲೆಕ್ಟರ್” (ಹಣವಿಲ್ಲದಿದ್ದಾಗ, ಮನೆಯನ್ನು ಲಾಕ್ ಮಾಡಬಾರದು, ಕಲೆಕ್ಟರ್) ಎಂದು ಬರೆದಿದ್ದಾರೆ.

ಜಿಲ್ಲೆಯ ಖಟೇಗಾಂವ್ ಪಟ್ಟಣದ ಉಪವಿಭಾಗದಲ್ಲಿ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿ ಸೇವೆಸಲ್ಲಿಸುತ್ತಿರುವ ತ್ರಿಲೋಚನ್ ಸಿಂಗ್ ಗೌರ್ ಅವರ ನಿವಾಸದಿಂದ ರೂ. 30,000 ನಗದು ಮತ್ತು ಕೆಲವು ಆಭರಣ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಇನ್‌-ಚಾರ್ಜ್‌ ಉಮರಾವ್ ಸಿಂಗ್ ಹೇಳಿದ್ದಾರೆ.

ಗೌರ್ ಅವರ ನಿವಾಸದಲ್ಲಿ ಕಳ್ಳರು ಬರೆದಿರುವ ಕೈಬರಹದ ಟಿಪ್ಪಣಿ ಸಿಕ್ಕಿದೆ. ಆತ ಚೀಟಿ ಬರೆಯಲು ಸರ್ಕಾರಿ ಅಧಿಕಾರಿಯ ನೋಟ್ ಪ್ಯಾಡ್ ಮತ್ತು ಪೆನ್‌ ಬಳಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ: ಬಿಜೆಪಿಗೆ ಗುಡ್‌ ಬೈ ಹೇಳಿ; ಕಾಂಗ್ರೆಸ್‌ ಕೈ ಹಿಡಿದ ಸಚಿವ ಮತ್ತು ಶಾಸಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights