ಉತ್ತರಾಖಂಡ: ಬಿಜೆಪಿಗೆ ಗುಡ್‌ ಬೈ ಹೇಳಿ; ಕಾಂಗ್ರೆಸ್‌ ಕೈ ಹಿಡಿದ ಸಚಿವ ಮತ್ತು ಶಾಸಕ!

ಉತ್ತರಾಖಂಡದಲ್ಲಿ ಅಧಿಕಾರದಲ್ಲಿ ಬಿಜೆಪಿ ಸರ್ಕಾರದ ಸಾರಿಗೆ ಸಚಿವ ಯಶಪಾಲ್ ಆರ್ಯ ಮತ್ತು ಅವರ ಮಗ ನೈನಿತಾಲ್ ಕ್ಷೇತ್ರದ ಶಾಸಕ ಸಂಜೀವ್ ಆರ್ಯ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಒಂದು ವರ್ಷದಲ್ಲಿ ಉತ್ತರಾಖಂಡದಲ್ಲಿ ಮೂವರು ಮುಖ್ಯಮಂತ್ರಿಗಳ ಬದಲಾವಣೆಯಿಂದ ಬೇಸತ್ತಿದ್ದ ಈ ಉಭಯ ನಾಯಕರು ಪಕ್ಷ ತೊರೆದಿರುವುದು ಬಿಜೆಪಿ ಪಾಲಿಗೆ ನಷ್ಟವಾಗಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಈ ಪಕ್ಷ ಬದಲಾವಣೆ ಚುನಾವಣೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಯಶಪಾಲ್ ಆರ್ಯ ಈ ಹಿಂದೆ ಕಾಂಗ್ರೆಸ್‌ನಲ್ಲಿಯೇ ಇದ್ದರು. 2007 ರಿಂದ 2014 ರವರೆಗೆ ಅವರು ಉತ್ತರಾಖಂಡ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿದ್ದರು. ಆದರೆ ತದನಂತರ ಅವರು ಬಿಜೆಪಿಗೆ ಹಾರಿದ್ದರು. ಈಗ ಅವರು ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮಗನೊಂದಿಗೆ ಮರಳಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, “ತಂದೆ ಮಗ ಇಬ್ಬರು ಪಕ್ಷಕ್ಕೆ ಮರಳುತ್ತಿರುವುದು ಸಂತಸ ತಂದಿದೆ. ನಮ್ಮ ಕಾಂಗ್ರೆಸ್ ಕುಟುಂಬಕ್ಕೆ ಅವರಿಗೆ ಸ್ವಾಗತವಿದೆ. ಅವರು ಕಾಂಗ್ರೆಸ್ ಸೇರುತ್ತಿರುವುದು ಉತ್ತರಖಂಡದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದರ ದ್ಯೋತಕ” ಎಂದಿದ್ದಾರೆ.

ಕಾಂಗ್ರೆಸ್ ವಕ್ತರರಾದ ರಣದೀಪ್ ಸುರ್ಜೇವಾಲಾ ಮಾತನಾಡಿ “ಯಶಪಾಲ್‌ರವರು ತಮ್ಮ ಸಚಿವ ಸ್ಥಾನಕ್ಕೆ ಮತ್ತು ಬಿಜೆಪಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಪಕ್ಷ ಸೇರುವುದರಿಂದ ಕಾಂಗ್ರೆಸ್‌ಗೆ ಬಲ ಬರಲಿದೆ” ಎಂದಿದ್ದಾರೆ.

ದೆಹಲಿಯ ಕಾಂಗ್ರೆಸ್ ಭವನದಲ್ಲಿ ಅವರು ಪಕ್ಷ ಸೇರುವ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಹರೀಶ್ ರಾವತ್ ಹಾಜರಿದ್ದರು.

ಇದನ್ನೂ ಓದಿ: ಗೋವಾ ಚುನಾವಣೆ: ಹಾಲಿ ಶಾಸಕರಿಗೆ ಕೋಕ್‌ ಕೊಡುತ್ತಿರುವ ಬಿಜೆಪಿ; ಹೊಸ ಅಭ್ಯರ್ಥಿಗಳ ಹುಡುಕಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights