Lock down effect :5 ಕೋಟಿ ಗುಳೆ ಹೊರಟ ಕಾರ್ಮಿಕರು, ಕೆಲಸಗಾರರ ತೀವ್ರ ಕೊರತೆ ಸಂಭವ

ಕೊರೋನಾ ಸಂಕಷ್ಟದ ಮೇಲೆ ಬರೆ ಎಳೆಯುವಂತೆ ಈ ಮಾರಿಯಿಂದಾಗಿ ದೇಶದಲ್ಲಿ ತಂಡೋಪತಂಡವಾಗಿ ವಲಸಿಗ ಕಾರ್ಮಿಕರು ಗುಳೆ ಹೋಗಿರುವ ಅಂಶ ತಿಳಿದುಬಂದಿದೆ.. ಕೊರೋನ ಕಾರಣ ಕಳೆದ 23 ದಿನಗಳಿಂದ ದೇಶ ಲಾಕ್‌ಡೌನ್ ಹೆಸರಲ್ಲಿ ಯಾವುದೇ ಚಟುವಟಿಕೆ ಇಲ್ಲದೇ ಸ್ತಬ್ಧಗೊಂಡಿದೆ. ಲಾಕ್‌ಡೌನ್ ಘೊಷಣೆ ಆಗುತ್ತಲೇ ವಲಸಿಗ ಕಾರ್ಮಿಕರ ಗುಳೆ ಆರಂಭವಾಗಿದೆ.

ಈಗಿನ ಅಂದಾಜಿನ ಪ್ರಕಾರ ಸುಮಾರು 5 ಕೋಟಿಗೂ ಹೆಚ್ಚಿನ ಸಮಖ್ಯೆಯ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ಗುಳೆ ಹೋಗಿದ್ದಾರೆ. ದೇಶದಲ್ಲಿ ಸುಮಾರು 15 ಕೋಟಿ ವಲಸಿಗ ಕಾರ್ಮಿಕರಿದ್ದು ಅವರಲ್ಲಿ ಶೇ. 50ರಷ್ಟು ಮಂದಿ ಕೆಲಸದ ಸ್ಥಳ ಬಿಟ್ಟು ಹೋಗಿರಬಹುದು ಎಂದು ಮತ್ತೊಂದು ಅಂದಾಜು ಹೇಳುತ್ತಿದೆ.

ಹೆಚ್ಚಾಗಿ ಗ್ರಾಮಿಣ ಪ್ರದೇಸಗಳ ಜನರಿಂದಲೇ ತುಂಬಿರುವ ಈ ವರ್ಗದ ಜನರು ಕೊರೋನಾ ಗೊಂದಲ ಸಂಪೂರ್ಣವಾಗಿ ತಿಳಿಯಾಗುವ ತನಕ ಕೆಲಸಕ್ಕೆ ವಾಪಸಾಗುವ ಸಂಭವ ಅತಿ ಕಡಿಮೆ. ಹೀಗಾಗಿ ಏಪ್ರಿಲ್ 20ರ ನಂತರದಿಂದ ಆರಂಭಗೊಂಡು ಮೇ 4ರ ವೇಳೆಗೆ ಲಾಕ್‌ಡೌನ್ ಕೊನೆಗೊಂಡು ಕಾರ್ಮಿಕ ಚಟುವಟಿಕೆ ಆರಂಭಗೊಂಡರೂ ಕಾರ್ಮಿಕರು ತೀವ್ರ ಕೊರತೆ ಎದ್ದು ಕಾಣಲಿದೆ.

ಇದೇ ವೇಳೆ ಮುಂಗಾರು ಋತುವಿನ ಆರಂಭದ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರು ತಾವಿರುವ ಪ್ರದೇಶಗಳಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯೂ ಇದೆ ಎನ್ನುತ್ತವೆ ಕೈಗಾರಿಕಾ ಮೂಲಗಳು. ಕಳೆದ ತಿಂಗಳ 25ರಿಂದ ದೇಶದಲ್ಲಿ ಹೇರಲಾಗಿರುವ ಲಾಕ್ಡೌನ್‌ ಅನ್ನು ಈಗ ಮೇ 3ರವರೆಗೆ ವಿಸ್ತರಿಸಲಾಗಿದ್ದು, ಏಪ್ರಿಲ್ 20ರ ಬಲಿಕ ಕೊಂಚ ವಿನಾಯ್ತಿ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights