ನಕಲಿ ಖಾತೆಗೆ 55 ಕೋಟಿ ವರ್ಗಾವಣೆ: ಕಪ್ಪುಪಟ್ಟಿಗಿಲ್ಲ ಐಓಬಿ ಬ್ಯಾಂಕ್‌: ಈಶ್ವರಪ್ಪ ಮೌನ

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್‌)ನ ಅನುದಾನದ ಮೊತ್ತ 55 ಕೋಟಿ ರು.ಗಳನ್ನು ಅಕ್ರಮವಾಗಿ. ವರ್ಗಾವಣೆ ಮಾಡಿ ದುರುಪಯೋಗ ಮಾಡಲಾಗಿದೆ. ಈ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಇ೦ಡಿಯನ್‌ ಓವರ್‌ಸೀಸ್‌ ಬ್ಯಾ೦ಕ್‌ ( IOB) ವಿರುದ್ಧ ಇನ್ನೂ ಕ್ರಮ ಕೈಗೊಳ್ಳಲಾಗಿಲ್ಲ. ಕಳೆದ ಮೂರು ವರ್ಷಗಳಿಂದಲೂ ಈ ಪ್ರಕರಣ ತೆವಳುತ್ತಿದೆ.

ಕಾಂಗ್ರೆಸ್‌‌ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಪ್ರಕರಣದ ಬಗ್ಗೆ ಅಂದಿನ ವಿರೋಧ ಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಸದನದಲ್ಲಿ ಭಾರೀ ಗದ್ದಲ ಎಬ್ಬಿಸಿತ್ತು. ಆದರೆ, ಈಗ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ, ಬ್ಯಾಂಕ್‌ ವಿರುದ್ಧ ಕಠಿಣ ಕ್ರಮಕ್ಕೆಗೊ೦ಡಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕೂಡ ಈ ಪ್ರಕರಣದ ಬಗ್ಗೆ ಮೌನ ವಹಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ರಾಜ್ಯ ಸರ್ಕಾರದ ಮಟ್ಟದಲ್ಲಿ ವಹಿವಾಟು ನಡೆಸದಂತೆ ಬ್ಯಾ೦ಕ್‌ನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎ೦ಬ ಗ್ರಾಮೀಣಾಭಿವೃದ್ಧಿ ಮತ್ತು ಪ೦ಚಾಯತ್‌ರಾಜ್‌ ಇಲಾಖೆಯ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಳ್ಳಿ ಹಾಕಿದೆ.

ಇದನ್ನೂ ಓದಿ: ಎಸಿಪಿ ಮನೆ ಮೇಲೆ ದಾಳಿ: ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!

55 ಕೋಟಿ ರು. ಮೊತ್ತವನ್ನು ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿ ಅಕ್ರಮ ಎಸಗಿರುವ ಪ್ರಕರಣದ ತನಿಖೆ ಸಿಐಡಿ ಅ೦ಗಳದಲ್ಲಿ ತೆವಳುತ್ತಿರುವ ಬೆನ್ನಲ್ಲೇ ಐಒಬಿ ಬ್ಯಾ೦ಕ್‌ನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎ೦ಬ ಪ್ರಸ್ತಾವನೆಗೆ ಸಹಮತ ವ್ಯಕ್ತಪಡಿಸದ ಆರ್ಥಿಕ ಇಲಾಖೆಯು ಬ್ಯಾ೦ಕ್‌ನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎ೦ದು ಆರ್‌ಬಿಐಗೆ ಪತ್ರ ಬರೆಯಬಹುದು ಎ೦ದು ಅಭಿಪ್ರಾಯಿಸಿದೆ.

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪ೦ಚಾಯತ್‌ ರಾಜ್‌ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಕ್ರಿಡಿಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ 2020ರ ನವೆ೦ಬರ್‌ 2ರ೦ದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

“ಇ೦ಡಿಯನ್‌ ಓವರ್‌ಸೀಸ್‌ ಬ್ಯಾ೦ಕ್‌ನ ವಿರುದ್ಧ ಸೂಕ್ತ ಕ್ರಮವಹಿಸುವುದರ ಸ೦ಬ೦ಧ ಹಾಗೂ ಬ್ಯಾ೦ಕ್‌ನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ವಹಿವಾಟು ನಡೆಸದಂತೆ ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸುವ ಸ೦ಬ೦ಧ ಆರ್‌ಬಿಐಗೆ ಪತ್ರ ಬರೆಯಬೇಕು ಎ೦ದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚಿಸಿರುವುದು ಪತ್ರದಿ೦ದ ತಿಳಿದು ಬ೦ದಿದೆ.

ಪ್ರಕರಣದ ಹಿನ್ನೆಲೆ

ಕೆಆರ್‌ಐಡಿಎಲ್‌ನ 20 ಕೋಟೆ ಹಾಗೂ 35 ಕೋಟೆ ರೂ.ಅನುದಾನವನ್ನು ಮ೦ಗಳೂರಿನ ಕುಳಾಯಿಯ ಗೋಕುಲನಗರದ ನವನಿಧಿ ಕಾ೦ಪ್ಲೆಕ್ಸ್‌ನಲ್ಲಿರುವ ಇ೦ಡಿಯನ್‌ ಓವರ್‌ಸಿಸ್‌ ಬ್ಯಾಲಕ್‌ ಶಾಖೆಯಲ್ಲಿ ನಿಗದಿತ ಠೇವಣಿ ಸ೦ಖ್ಯೆ 320104000000026 ಹಾಗೂ 320104000000027ರಲ್ಲಿ 2017 ಆಗಸ್ಟ್‌ 24 ಮತ್ತು 30ರಂದು ಇರಿಸಲಾಗಿತ್ತು.

ಇದನ್ನೂ ಓದಿ: ಅಕ್ರಮ ಮರಳು ಸಾಗಾಣಿಕೆಗೆ ಅವಕಾಶ: ಚಾಮರಾಜನಗರ ಡಿವೈಎಸ್‌ಪಿ ಮೋಹನ್ ಅಮಾನತು

ಕೆಆರ್‌ಐಡಿಎಲ್‌ನ ಹೆಸರಿನಲ್ಲಿ ನಕಲಿ ಚಾಲಿ, ಖಾತೆ ಸೃಷ್ಟಿಸಿ ಆ ಖಾತೆ ಮೂಲಕ ಬೇರೆಬೇರೆ ಅನುತ್ಸಾದಕ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಬಹಿರ೦ಗಗೊ೦ಡಿತ್ತು. ಇದರಲ್ಲಿ ಬೆ೦ಗಳೂರಿನ ವಿಜಯಾ ಬ್ಯಾ೦ಕ್‌ನ ಕೋರಮಂ೦ಗಲ ಶಾಖೆಯ ಷಾ ಎಕ್ಸ್‌ಪೋರ್ಟ್ಸ್‌ ಖಾತೆಗೆ 50 ಲಕ್ಷ ರೂ. ವರ್ಗಾವಣೆ ಆಗಿತ್ತು. 2 ವರ್ಷಗಳಿ೦ದ ಶೂನ್ಯ ವ್ಯವಹಾರವಾಗಿದ್ದ ಖಾತೆಗೆ ಇಷ್ಟು ದೊಡ್ಡ ಪ್ರಮಾಣದ ಹಣ ವರ್ಗಾವಣೆಯಾಗಿದೆ ಎ೦ಬ ಮಾಹಿತಿ ವಿಜಯಾ ಬ್ಯಾ೦ಕ್‌ ಹೊರಗೆಡವಿತ್ತು.

ಕೆಆರ್‌ಐಡಿಎಲ್‌ನ ಸಕಲಿ ವಿಳಾಸ

ಕೆಆರ್‌ಐಡಿಎಲ್‌ ವಿವಿಧ ಬ್ಯಾ೦ಕ್‌ಗಳಲ್ಲಿ 23 ನಿಗದಿತ ಠೇವಣಿಗಳಲ್ಲಿ 740,89,28,461ರೂ.ಗಳನ್ನು ಇಟ್ಟಿತ್ತು. 2013 ಫೆಬ್ರವರಿಯಲ್ಲಿ ಕಆರ್‌ಐಡಿಎಲ್‌ ಮುಖ್ಯ ಕಚೇರಿ ಚಿನ್ನಸ್ವಾಮಿ ಸ್ಲೇಡಿಯಂನಿ೦ದ ಗ್ರಾಮೀಣಾಭಿವೃದ್ಧಿ ಭವನಕ್ಕೆ ಸ್ಥಳಾ೦ತರಗೊ೦ಡಿತ್ತು. ಆದರೆ, 2017 ಆಗಸ್ಟ್‌ 30ರಂದು 35 ಕೋಟಿ ರೂ. ನಿಗದಿತ ಠೇವಣಿ ಸರ್ಟಿಫಿಕೇಟ್‌ ಸ೦ಖ್ಯೆ 584635ರಲ್ಲಿ ಸ೦ಸ್ಥೆಯ ಹಳೇ ವಿಳಾಸವಿತ್ತು. ಇನ್ನು 20 ಕೋಟಿ ರೂ. ನಿಗದಿತ ಠೇವಣಿ ಸರ್ಟಿಫಿಕೇಟ್‌ ಸ೦ಖ್ಯೆ 584636ರಲ್ಲಿ ಸ೦ಸ್ಥೆಯ ವಿಳಾಸವೇ ಇರಲಿಲ್ಲ. ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಇಲ್ಲಿಯೇ ಕ೦ಡುಬ೦ದಿತ್ತು. ಹಣದ ಅಕ್ರಮ ವರ್ಗಾವಣೆ ನಡೆದ ಸಮಯದಲ್ಲಿ ಕೆಆರ್‌ಐಡಿಎಲ್‌ನಲ್ಲಿ ಡಾ.ರಾಜು (ವ್ಯವಸ್ಥಾಪಕ ನಿರ್ದೇಶಕ), ಎಚ್‌.ಪಿ.ರಾಜಶೇಖರಮೂರ್ತಿ (ಮುಖ್ಯ ಎ೦ಜಿನಿಯರ್‌), ಡಾ.ವೀರಗೌಡ ಪಾಟೀಲ (ಸಿಎಫ್‌ಒ-1), ಪ್ರಶಾ೦ತ ಮಾಡಾಳ್‌ (ಡಿಎಫ್‌ಒ), ಶ೦ಕರಾಚಾರಿ (ಲೆಕ್ಕ ಅಧೀಕ್ಷಕ) ಕಾರ್ಯ ನಿರ್ವಹಿಸುತ್ತಿದ್ದರು.

ಅರ್ಹವಲ್ಲದ ಶಾಖೆ

ಕೆಆರ್‌ಐಡಿಎಲ್‌ನಲ್ಲಿದ್ದ ಹೆಚ್ಚಿನ ಅನುದಾನವನ್ನು ನಿಗದಿತ ಠೇವಣಿಯನ್ನಾಗಿಡಲು ದೂರದ ಮ೦ಗಳೂರಿನ ಕುಳಾಯಿಯಲ್ಲಿರುವ ಇ೦ಡಿಯನ್‌ ಓವರ್‌ಸಿಸ್‌ ಬ್ಯಾಲಕ್‌ ಶಾಖೆಯನ್ನು ಆಯ್ಕೆ ಮಾಡಿಕೊಂಡಿದ್ದೇ ಸೂಕ್ತವಾಗಿರಲಿಲ್ಲ. . ಠೇವಣಿ ಸರ್ಟಿಫಿಕೇಟ್‌ಗಳಲ್ಲಿ ವಿಳಾಸ ಸರಿ ಇಲ್ಲದಿರುವುದನ್ನು ಪರಿಶೀಲಿಸಿ ಹಿಂದಿರುಗಿಸಬೇಕಿತ್ತು. ಐಒಬಿ ಶಾಖೆಯಲ್ಲಿ ಠೇವಣಿ ಇಟ್ಟ ನ೦ತರ ವಂಚಕರು ಕೆಆರ್‌ಐಡಿಎಲ್‌ ಸ೦ಸ್ಥೆಯ ಸುಳ್ಳು ಮನವಿ ಮತ್ತು ಆರ್ಟಿಕಲ್‌ ಆಫ್‌ ಅಸೋಸಿಯೇಷನ್‌, ಮ೦ಡಳಿ ತೀರ್ಮಾನದ ನಕಲಿ ದಾಖಲೆ ಸೃಷ್ಟಿಸಿ ಬ್ಯಾ೦ಕ್‌ನ ಸಹಯೋಗದೊಂದಿಗೆ ಚಾಲಿ ಖಾತೆ ತೆರೆದು ಬೇರೆಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು.

ವ೦ಚನೆ ಆಗಿದ್ದೇಗೆ?

ಅಮಿತ್‌, ಐಎಎಸ್‌ ಅಧಿಕಾರಿ, ಕೆಆರ್‌ಐಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಬ್ದುಲ್‌ ಸಲಾ೦, ಮುಖ್ಯ ಲೆಕ್ಕಾಧಿಕಾರಿ ಎಂದು ಹೇಳಿಕೊ೦ಡು ಕುಳಾಯಿಯ ಐಒಬಿ ಶಾಖೆಗೆ ಇಬ್ಬರೂ ಭೇಟಿ ನೀಡಿದ್ದರು. “ಕಾರ್ಪೋರೇಷನ್‌ ಬ್ಯಾಲ೦ಕ್‌ನಲ್ಲಿ ಪೀನಾಕಲ್‌ ಸಾಫ್ಟ್‌ವೇರ್‌ ತೊ೦ದರೆ ಇದೆ. ನಿಮ್ಮ ಬ್ಯಾ೦ಕ್‌ನಲ್ಲಿ ಚಾಲ್ತಿ ಖಾತೆ ತೆರೆದು ಕಾಮಗಾರಿ ನಿರ್ವಹಿಸಲು ಉದ್ದೇಶಿಸಲಾಗಿದೆ’ ಎ೦ದಿದ್ದರು.

ಚಾಲ್ತಿ ಖಾತೆ ತೆರೆಯಲು ಅಗತ್ಯವಿರುವ ಆಡಳಿತ ಮಂಡಳಿ ನಿರ್ಣಯ, ಗುರುತಿನ ಪತ್ರ, ಸ೦ಸ್ಥೆಯ ಮನವಿಪತ್ರ, ಆರ್ಟೆಕಲ್ಸ್‌ ಆಫ್‌ ಅಸೋಸಿಯೇಷನ್‌ಗಳನ್ನು ನಕಲು ಮಾಡಿ ಶಾಖೆಯ ವ್ಯವಸ್ಥಾಪಕರಿಗೆ ನೀಡಿ ಚಾಲಿ ಖಾತೆ ತೆರೆದಿದ್ದರು. ಈ ಖಾತೆಗೆ 55 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿಕೊ೦ಡು ನ೦ತರ ಸುಮಾರು 53.5 ಕೋಟಿ ರೂ.ಗಳನ್ನು ಮು೦ಬಯಿಯ ಬಂ೦ದನ್‌ ಬ್ಯಾಲಕ್‌, ಬ್ಯಾ೦ಕ್‌ ಆಫ್‌ ಮಹಾರಾಷ್ಟ; ಹಾಗೂ ಬೆ೦ಗಳೂರಿನ ಕೋರಮಂಗಲ ಶಾಖೆಯ ವಿಜಯಾ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದರು.


ಇದನ್ನೂ ಓದಿ: ವೆಂಟಿಲೇಟರ್‌ ಖರೀದಿಯಲ್ಲಿ ಯಡಿಯೂರಪ್ಪ ಸರ್ಕಾರದ ಭಾರೀ ಅಕ್ರಮ; ದಾಖಲೆಗಳು ಇಲ್ಲಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights