ಕರ್ನಾಟಕಕ್ಕೆ ದೆಹಲಿ ರೈತ ಹೋರಾಟಗಾರರು; 16ಕ್ಕೆ ಬೆಂಗಳೂರಿನಲ್ಲಿ ಬಹಿರಂಗ ಕಾರ್ಯಕ್ರಮ!

“ಈ ಬಾರಿಯ ಗಣರಾಜ್ಯೋತ್ಸವ ಹೊಸ ಇತಿಹಾಸ ಬರಿಯಲಿದೆ”.  ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿರುವ ಲಕ್ಷಾಂತರ ರೈತರು ಮಾತ್ರವಲ್ಲದೆ ಇದಕ್ಕಿಂತಲೂ ಕನಿಷ್ಟ ಮೂರು ಪಟ್ಟು ಜನರು ಜನವರಿ 26ರ ಹೊತ್ತಿಗೆ ರೈತ ಹೋರಾಟವನ್ನು ಕೂಡಿಕೊಳ್ಳಲಿದ್ದಾರೆ. ರೈತ ಹೋರಾಟಗಾರರು ಟ್ರಾಕ್ಟರ್‌ಗಳೊಂದಿಗೆ ದೆಹಲಿಯ ಕೆಂಪುಕೋಟೆಯತ್ತ ಹೆಜ್ಜೆಯಿಡಲಿದ್ದಾರೆ. ಇತಿಹಾಸ ಬರೆಯಲು ಹೊರಟಿರುವ ಈ ರೈತ ಹೋರಾಟದಲ್ಲಿ ಕರ್ನಾಟಕವೂ ಭಾಗಿಯಾಗಿದೆ. ಅದಕ್ಕಾಗಿ ಕರ್ನಾಟಕದ ರೈತರು ಸಜ್ಜಾಗುತ್ತಿದ್ದಾರೆ.

ಈಗಾಗಲೇ ಕಳೆದ 48 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಯುತ್ತೇವೆ – ಆದರೆ, ರೈತ ವಿರೋಧಿ ಕೃಷಿ ನೀತಿಗಳು ರದ್ದಾಗದೇ ವಾಪಸ್‌ ಹೋಗುವುದಿಲ್ಲ. ಹಿಂಸೆಯನ್ನು ನಡೆಸುವುದಿಲ್ಲ, ಅಹಿಂಸಾತ್ಮಕವಾಗಿ ಹೋರಾಡುತ್ತೇವೆ ಎಂದು ರೈತರು ಶಪತಗೈದಿದ್ದಾರೆ. ಆದರೆ, ಸರ್ಕಾರ ರೈತರ ಚಳವಳಿಯನ್ನು ಕೇವಲ ಪಂಜಾಬ್- ಹರಿಯಾಣದ ರೈತರ ಹೋರಾಟ ಎಂಬಂತೆ ಕುಬ್ಜೀಕರಿಸಿ ಹೋರಾಟವನ್ನು ಕಡೆಗಣಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ.

ಇದಕ್ಕೆ ಸೆಡ್ಡು ಹೊಡೆದು ಸವಾಲು ಹಾಕಿ ನಿಂತಿರುವ ರೈತರು, ಮೋದಿ ಸರ್ಕಾರ ತಂದಿರುವ 3 ಕರಾಳ ಕಾನೂನುಗಳನ್ನು ರದ್ದುಪಡಿಸುವ & MSP ಗ್ಯಾರಂಟಿಗಾಗಿ ಕಾನೂನು ರಚಿಸುವ ಹಕ್ಕೊತ್ತಾಯಗಳನ್ನು ಮುಂದಿಟ್ಟು ದೇಶಾದ್ಯಂತ ಹೋರಾಟ ರೂಪಿಸುತ್ತಿದ್ದಾರೆ. ಕರ್ನಾಟಕವೂ ಅದಕ್ಕೆ ಸಜ್ಜಾಗಿದೆ. ಕರ್ನಾಟಕದ ರೈತ ಸಂಘಟನೆ ಮತ್ತು ಹಲವು ಸಂಘಟನೆಗಳು ಒಗ್ಗೂಡಿ ರಚಿಸಿರುವ ‘ಐಕ್ಯ ಹೋರಾಟ ವೇದಿಕೆ’ಯು ರಾಜ್ಯದ ರೈತರ ಕಹಳೆ ಮೊಳಗಿಸಲು ಮುಂದಾಗಿದೆ.

ಈ ಐತಿಹಾಸಿಕ ಹೋರಾಟದ ಭಾಗವಾಗಿ  ದಿನಾಂಕ: 16/01/2021 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಸ್ಕೌಟ್ಸ್ & ಗೈಡ್ಸ್ ಸಭಾಂಗಣದಲ್ಲಿ ಬಹಿರಂಗ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ಚಳವಳಿಯಲ್ಲಿ ಮುಂಚೂಣಿ ಪಾತ್ರ ನಿರ್ವಹಿಸುತ್ತಿರುವ ಸ್ವರಾಜ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾದ ಯೋಗೇಂದ್ರ ಯಾದವ್, ಮನ್ಜೀತ್ ಸಿಂಗ್ ಮತ್ತು ಯಧುವೀರ್ ಸಿಂಗ್ ಅವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ರೈತರ ಹೋರಾಟವನ್ನು ಕಟ್ಟುವ ಸಾಕಷ್ಟು ವಿಚಾರಗಳು ಚರ್ಚೆಯಾಗಲಿದ್ದು, ಕಾರ್ಯಕ್ರಮಕ್ಕೆ ರೈತ ಹೋರಾಟಗಾರರು, ರೈತ ಬೆಂಬಲಿಗರು ಪಾಲ್ಗೊಳ್ಳಬೇಕು ಎಂದು ಐಕ್ಯ ಹೋರಾಟ ವೇದಿಕೆ ಕರೆ ಕೊಟ್ಟಿದೆ.


ಇದನ್ನೂ ಓದಿ: ರೈತ ಹೋರಾಟದ ಕಿಡಿ ಜಗಮೋಹನ್‌ ಸಿಂಗ್‌ ಪಟಿಯಾಲ; ಇವರು ಯಾರು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights