ಪ್ರಧಾನಿ ಮೋದಿ ಖಂಡಿತ idiot ಅಲ್ಲ….! ಆದರೆ……….?

ಪ್ರಧಾನಿಯನ್ನು ಈಡಿಯಟ್ ಅಂದಿದ್ದಕ್ಕೆ ಒಬ್ಬ ಪೈಲಟ್ ಅನ್ನು Go Air ಸಂಸ್ಥೆ ವಜಾ ಮಾಡಿದ ಪ್ರಕರಣ ಚರ್ಚೆಯಾಗುತ್ತಿದೆ…

ನಮ್ಮ ಪ್ರಧಾನಿಯನ್ನು ಈಡಿಯಟ್ ಅಂದಿದ್ದನ್ನು ನಾನು ಬಲವಾಗಿ ಖಂಡಿಸುತ್ತೇನೆ…

ಏಕೆಂದರೆ Idiot ಎಂದರೆ ಇಂಗ್ಲೀಷ್ ನಲ್ಲಿ “person of lesser intelligence” ಎಂದರ್ಥ…ಕನ್ನಡದಲ್ಲಿ “ಮೂರ್ಖ” ಆಥವಾ “ಮುಠಾಳ” ಎಂದರ್ಥ…

ಸಾರಾಂಶದಲ್ಲಿ “ಈಡಿಯಟ್” ಎಂದರೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವಿಲ್ಲದಿರುವವರೂ ಅಥವಾ ಅರ್ಥವಾಗದಿರುವವರು ಎಂದರ್ಥ…

ಈಡಿಯಟ್ಟುಗಳಿಗೆ ಕೊರತೆ ಇರುವುದು ತಿಳವಳಿಕೆ…

ಅದನ್ನು ಒದಗಿಸಲು ಸಾಧ್ಯವಾದಲ್ಲಿ ಈಡಿಯಟ್ಟುಗಳು ಬದಲಾಗುವ ಸಾಧ್ಯತೆಗಳಿರುತ್ತವೆ…

ಆದರೆ ನಮ್ಮ ಪ್ರಧಾನಿ ಆ ಅರ್ಥದಲ್ಲಿ ತಿಳವಳಿಕೆ ಇಲ್ಲದಿರುವ ಈಡಿಯಟ್ ಎಂದು ನಾನು ಒಪ್ಪಲಾರೆ…

ಗುಜರಾತ್ ಹತ್ಯಾಕಾಂಡ, ಚುನಾವಣಾ ಜುಮ್ಲಾಗಳು, ನೋಟು ನಿಷೇಧ, ಲಿಂಚಿಂಗ್ ಗೂಂಡಾಗಳಿಗೆ ಪ್ರೋತ್ಸಾಹ, ಕಾಶ್ಮೀರ ನೀತಿ, ಕಾರ್ಪೊರೇಟ್ ಗಳಿಗೆ ತೆರಿಗೆ ವಿನಾಯತಿ-ಅವರ ಸಾಲಗಳ ರದ್ದತಿ, ಬಡವರಿಗೆ ಹೆಚ್ಚು ತೆರಿಗೆ ಹೊರೆ, ಸಿಎಎ- ಎನ್ ಆರ್ ಸಿ, ಕೋವಿಡ್ ಸಂದರ್ಭದಲ್ಲಿ ಕೊಲೆಗಡುಕ ಲಾಕ್ಡೌನ್, ರೈತ ವಿರೋಧಿ ಕಾಯಿದೆಗಳು…ನ್ಯಾಯಾಂಗವನ್ನೂ ಒಳಗೊಂಡಂತೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಯ ನಾಶ, ಮುಸ್ಲಿಮರ ಯೋಜಿತ ಅನ್ಯೀಕರಣ, ದಲಿತ ಸ್ವಾಭಿಮಾನ ದ ಮೇಲೆ ದಾಳಿ…..

ಅಯ್ಯೋ… ಅಯ್ಯೋ…

ಒಂದೇ…ಎರಡೇ..

ಇವೆಲ್ಲವೂ ತಿಳವಳಿಕೆ ಯ ಕೊರತೆಯಿಂದ, ಮೂರ್ಖತನದಿಂದ ಜಾರಿ ಮಾಡಿದ ನೀತಿಗಳೆಂದು ಭಾವಿಸುವವರು ಈಡಿಯಟ್ಟುಗಳೇ ವಿನಾ ಪ್ರಧಾನಿ ಮೋದಿಯಲ್ಲ…

ಮೋದಿ ಸರ್ಕಾರ ಮತ್ತವರ ಹಿಂದಿನ ಆರೆಸ್ಸೆಸ್-ಕಾರ್ಪೊರೇಟ್ ಪಿತಾಮಹರು ಕಳೆದ ಆರು ವರ್ಷಗಳಿಂದ ಜಾರಿ ಮಾಡಿರುವ ನೀತಿಗಳ ಹಿಂದಿರುವುದು ಪ್ರಜ್ಞಾಪೂರ್ವಕವಾದ ಕ್ರೌರ್ಯ, ದುಷ್ಟತನ, ವರ್ಗ ಹಿತಾಸಕ್ತಿ, ಬ್ರಾಹ್ಮಣ್ಯ…

ಕ್ರೌರ್ಯವನ್ನು ಮೂರ್ಖತನವನ್ನೆವುದು ತಪ್ಪಲ್ಲವೇ…

ಖಂಡಿತ…ಪ್ರಧಾನಿ ಮೋದಿ ಈಡಿಯಟ್ ಅಲ್ಲ…

ಅಲ್ಲವೇ?

ಜಸ್ಟ್ ಆಸ್ಕಿಂಗ್….

– ಶಿವಸುಂದರ್

(ಅಭಿಪ್ರಾಯಗಳು ಲೇಖಕರವು ಮಾತ್ರ)


ಇದನ್ನೂ ಓದಿಬ್ರಾಹ್ಮಣರಿಗೆ ಮೀಸಲಾತಿ ಇಲ್ಲ ಎಂಬುದು ಸುಳ್ಳು: ಬ್ರಾಹ್ಮಣರಿಗಿರುವ 15 ಯೋಜನೆಗಳು ಇಲ್ಲಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights