ವಾಟ್ಸಾಪ್ ಬಳಕೆದಾರರು ಗೌಪ್ಯತೆ ಹಂಚಿಕೆಗೆ ಒಪ್ಪಿಗೆ ನೀಡದೇ ಹೋದರೆ ಖಾತೆಯೇ ಡಿಲೀಟ್!
ಇತ್ತೀಚೆಗೆ ಹೊಸ ಹೊಸ ನಿಯಮಗಳು ವಾಟ್ಸಾಪ್ ಬಳಕೆದಾರರನ್ನು ಗೊಂದಲಕ್ಕೀಡು ಮಾಡುತ್ತಿದೆ. ವಾಟ್ಸಾಪ್ ಬಳಕೆದಾರರ ಗೌಪ್ಯತೆಯನ್ನು ನವೀಕರಿಸಲು ಮುಂದಾಗಿದೆ. ಬಳಕೆದಾರರ ವೈಯಕ್ತಿಕ ಡೇಟಾವನ್ನು ಫೇಸ್ಬುಕ್ ಮತ್ತು ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳಲು ಬಳಕೆದಾರರು ಒಪ್ಪಿಗೆ ನೀಡಬೇಕು. ಇಲ್ಲದಿದ್ದರೆ ಅವರ ಖಾತೆಯನ್ನು ಡಿಲೀಟ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಈ ಕುರಿತು ಮಂಗಳವಾರದಿಂದ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೋಟಿಸ್ ಮೂಲಕ ಮಾಹಿತಿ ನೀಡಿದೆ. ಪ್ರಸ್ತುತ ಕೆಲವು ವರ್ಗಗಳ ಮಾಹಿತಿಯನ್ನು ಫೇಸ್ಬುಕ್ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಇತರ ಕಂಪನಿಗಳೊಂದಿಗೆ ನಾವು ಹಂಚಿಕೊಳ್ಳುವ ಮಾಹಿತಿಯು ನಿಮ್ಮ ಖಾತೆ ನೋಂದಣಿ ಮಾಹಿತಿಯನ್ನು ಒಳಗೊಂಡಿದೆ (ಉದಾಹರಣೆಗೆ ನಿಮ್ಮ ಫೋನ್ ಸಂಖ್ಯೆ), ವಹಿವಾಟು ಡೇಟಾ, ಸೇವೆ-ಸಂಬಂಧಿತ ಮಾಹಿತಿ, ನಮ್ಮ ಸೇವೆಗಳನ್ನು ಬಳಸುವಾಗ ನೀವು ಇತರರೊಂದಿಗೆ ಹೇಗೆ ವರ್ತಿಸುತ್ತೀರಿ (ವ್ಯವಹಾರಗಳು ಸೇರಿದಂತೆ), ಮೊಬೈಲ್ ಸಾಧನ ಮಾಹಿತಿ, ನಿಮ್ಮ ಐಪಿ ವಿಳಾಸ, ಮತ್ತು ಗೌಪ್ಯತೆ ನೀತಿ ವಿಭಾಗದಲ್ಲಿ ಗುರುತಿಸಲಾದ ಇತರ ಮಾಹಿತಿಯನ್ನು ‘ನಾವು ಸಂಗ್ರಹಿಸುವ ಮಾಹಿತಿ ‘ಅಥವಾ ನಿಮಗೆ ಸೂಚನೆಯ ಮೇರೆಗೆ ಅಥವಾ ನಿಮ್ಮ ಒಪ್ಪಿಗೆಯ ಆಧಾರದ ಮೇಲೆ ಪಡೆಯಲಾಗಿದೆ” ಎಂದು ವಾಟ್ಸಾಪ್ ತಿಳಿಸಿದೆ.
ಇದಕ್ಕಾಗಿ 2021ರ ಫೆಬ್ರವರಿ 8ರವರೆಗೆ ಗಡುವು ನೀಡಿದ್ದು, ಬಳಕೆದಾರರು ಈ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಿದೆ. ಇಲ್ಲದಿದ್ದಲ್ಲಿ ಅಂತಹ ವಾಟ್ಸಾಪ್ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಅದು ಎಚ್ಚರಿಸಿದೆ.
ಇದುವರೆಗೂ ವಾಟ್ಸಾಪ್ನಲ್ಲಿ ಎಂಡ್ ಟು ಎಂಡ್ encryption ಎಂಬ ಸುರಕ್ಷತಾ ಕ್ರಮವಿತ್ತು. ಅಂದರೆ ಒಬ್ಬರು ಮತ್ತೊಬ್ಬರಿಗೆ ಕಳಿಸುವ ಸಂದೇಶ-ಫೋಟೊಗಳು ಅವರಿಬ್ಬರಲ್ಲದೆ ಬೇರೆ ಯಾರಿಗೂ ಸಿಗಲು ಸಾಧ್ಯವಿರಲಿಲ್ಲ. ಆದರೆ ಇನ್ನು ಮುಂದೆ ಅದು ಇರುವುದಿಲ್ಲ ಎನ್ನಲಾಗಿದೆ. ಅಲ್ಲದೆ ವಾಟ್ಸಾಪ್ ಚಾಟ್ಗಳು ಸೇರಿದಂತೆ ಎಲ್ಲಾ ಡೇಟಾವನ್ನು ಸಂಗ್ರಹಿಸುವುದಾಗಿಯೂ, ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದಾಗಿಯೂ ತಿಳಿಸಿದೆ.
https://www.facebook.com/permalink.php?story_fbid=10215629810532850&id=1668871181
ವಾಟ್ಸಾಪ್ನ ಈ ನಡೆಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. “ಭಾರತದಲ್ಲಿ ಶಕ್ತವಾದ Data privacy ಕಾನೂನು ಇಲ್ಲದ ಕಾರಣದಿಂದ ವಾಟ್ಸಪ್ ಮತ್ತು ಫೇಸ್ ಬುಕ್ ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನು ಮಾರಿಕೊಳ್ಳುತ್ತದೆ.
ಸಂಕ್ಷಿಪ್ತವಾಗಿ ಇನ್ನು ಮುಂದೆ ವಾಟ್ಸಪ್ ಅನ್ನೋದು ಪ್ರಾಡಕ್ಟ್ ಅಲ್ಲ ವಾಟ್ಸಪ್ ಉಪಯೋಗಿಸುವ ಪ್ರತಿಯೊಬ್ಬರೂ ಪ್ರಾಡಕ್ಟ್ ಗಳು. ಇದಕ್ಕೆ ಪರಿಹಾರ ಏನು ಅಂದರೆ ಯಾವುದೇ ಕಾರಣಕ್ಕೂ ವಾಟ್ಸಪ್ update ಮಾಡಬೇಡಿ. Signal ಅಥವಾ Telegram app ಗೆ ಎಲ್ಲರೂ ಬದಲಾಯಿಸಿಕೊಳ್ಳಿ” ಎಂದು ನಾಗೇಗೌಡ ಕೀಲಾರ ಶಿವಲಿಂಗಯ್ಯನವರು ಕರೆ ನೀಡಿದ್ದಾರೆ.